ಅಥಣಿ[ನ.29]: ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಶಾಸಕನನಾಗಿ ತನ್ನ ಹುಟ್ಟೂರು  ತೆಲಸಂಗ  ಗ್ರಾಮದಲ್ಲಿ ನೂರು ರೂಪಾಯಿ ಕೆಲಸ ಮಾಡಿಲ್ಲ, ಹುಟ್ಟಿದ ಊರಿಗೆ ಉಪಕಾರ ಮಾಡಲಿಲ್ಲ, ಪಕ್ಷಕ್ಕೂ ಕೂಡ ಉಪಕಾರ ಮಾಡಲಿಲ್ಲ  ತನಗೆ ತಾನೇ ಉಪಕಾರ ಮಾಡಿಕೊಂಡಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕುಮಟಳ್ಳಿ ವಿರುದ್ಧ ಹರಿಹಾಯ್ದಿದ್ದಾರೆ.

ಶುಕ್ರವಾರ ಕ್ಷೇತ್ರದ ತೆಲಸಂಗ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಷಣ  ಮಾಡಿದ ಅವರು, ಎಲೆಕ್ಷನ್ ಮಾಡಲಿ ಅಂತಾ ಯಾರೂ ಕಾಲ ಹೊಸೆದು ಅಳತಾ ಇರಲಿಲ್ಲ, ಅಥಣಿಯ ಜನ ಕಷ್ಟದಲ್ಲಿ ಇದ್ದಾಗ ಕುಮಟಳ್ಳಿ ಮುಂಬೈ ಹೋಟೆಲ್‌ದಾಗ ಗರಿ ಗರಿ ಅಂಗಿ ಹಾಕೊಂಡ ಓಡಾಡ್ತಾ ಇದ್ರು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಓರ್ವ ಬಲಿಷ್ಠ ನಾಯಕರಾಗಿದ್ದಾರೆ. ಈಗ ಅವರಿಗೂ ಕೂಡ ಅನ್ಯಾಯವಾಗಿದೆ. ಅವರ ಕ್ಷೇತ್ರವನ್ನು ಕುಮಟಳ್ಳಿ ಕಸಿದುಕೊಂಡಿದ್ದು, ಸವದಿ ಅವರ ಭವಿಷ್ಯ ಮುಂದೇನು? ಎಂದು ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.