ಗದಗ: ಕೋವಿಡ್ ಕೇರ್ ಸೆಂಟರ್ ನಿರ್ಮಿಸಿದ ಶಾಸಕ ಎಚ್ಕೆ
* ಕೇವಲ 10 ದಿನದಲ್ಲಿ ಸಿದ್ಧವಾದ ಆಸ್ಪತ್ರೆ
* ಹುಲಕೋಟಿಯ ರೂರಲ್ ಮೆಡಿಕಲ್ ಸರ್ವಿಸಸ್ ಸೊಸೈಟಿಯ ನುರಿತ ವೈದ್ಯರ ತಂಡ ಚಿಕಿತ್ಸೆಗೆ ಸಿದ್ಧ
* 65 ಆಕ್ಸಿಜನ್ ಬೆಡ್ ಹೊಂದಿದ ಕೋವಿಡ್ ಕೇರ್ ಆಸ್ಪತ್ರೆ
ಗದಗ(ಮೇ.24): ಕೋವಿಡ್ 2ನೇ ಅಲೆಗೆ ಗದಗ ಜಿಲ್ಲೆ ತತ್ತರಿಸಿದ್ದು, ನಿತ್ಯವೂ ಬೆಡ್ ಆಕ್ಸಿಜನ್ ಸಿಗದೇ ಸರಾಸರಿ 5ಕ್ಕೂ ಹೆಚ್ಚು ಸೋಂಕಿತರು ಸಾಯುತ್ತಿದ್ದಾರೆ. ಸೋಂಕಿತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಗದಗ ಶಾಸಕ ಎಚ್.ಕೆ.ಪಾಟೀಲ 65 ಆಕ್ಸಿಜನ್ ಬೆಡ್ ಹೊಂದಿದ ಕೋವಿಡ್ ಕೇರ್ ಆಸ್ಪತ್ರೆ ನಿರ್ಮಿಸಿದ್ದಾರೆ.
ಇಲ್ಲಿನ ಜಿಲ್ಲಾಡಳಿತ ಭವನದ ಎದುರಿಗಿರುವ ಇಂಡಸ್ಟ್ರೀಯಲ್ ಎಸ್ಟೇಟ್ ಕಟ್ಟಡದಲ್ಲಿ ಕೇವಲ 10 ದಿನದಲ್ಲಿ ಸಿದ್ಧವಾಗಿರುವ ಆಸ್ಪತ್ರೆ ಇಂದು(ಸೋಮವಾರ) ಲೋಕಾರ್ಪಣೆಗೊಳ್ಳಲಿದೆ.
"
ಲಕ್ಷ್ಮೇಶ್ವರ: 4 ಗಂಟೆ ಅವಧಿಯಲ್ಲಿ ಕೊರೋನಾಗೆ ತಂದೆ, ಮಗ ಬಲಿ..!
ಕೆ.ಎಚ್.ಪಾಟೀಲ ಪ್ರತಿಷ್ಠಾನ, ಶ್ರೀಮದ್ ರಾಮಚಂದ್ರ ಲವ್ ಆ್ಯಂಡ್ ಕೇರ್ ಸಂಸ್ಥೆ, ಗದಗ ಕೋ ಆಪ್ ರೇಟಿವ್ ಇಂಡಸ್ಟ್ರೀಸ್, ಸಹಕಾರಿಗಳು, ಕೆಲವು ಖಾಸಗಿ ವೈದ್ಯರು ಈ ಮಹತ್ಕಾರ್ಯಕ್ಕೆ ಸಾಥ್ ನೀಡಿದ್ದಾರೆ.
ಹುಲಕೋಟಿಯ ರೂರಲ್ ಮೆಡಿಕಲ್ ಸರ್ವಿಸಸ್ ಸೊಸೈಟಿಯ ನುರಿತ ವೈದ್ಯರ ತಂಡ ಚಿಕಿತ್ಸೆಗೆ ಸಿದ್ಧವಾಗಿದೆ.