ಕಾಯ್ದೆ ಹೆಸರಲ್ಲಿ ಕಾಂಗ್ರೆಸ್‌ನಿಂದ ರಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸ: ಶೋಭಾ ಕಿಡಿ

ಪೌರತ್ವ ಕಾಯ್ದೆ ಮುಂದಿಟ್ಟು ಇಡೀ ದೇಶದಲ್ಲಿ ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

congress misleading people in name of Citizenship Amendment Act says Shobha Karandlaje

ಮಂಗಳೂರು(ಡಿ.21): ಪೌರತ್ವ ಕಾಯ್ದೆ ಮುಂದಿಟ್ಟು ಇಡೀ ದೇಶದಲ್ಲಿ ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಸಂಸದೆ ಶೋಭಾ, ಮಂಗಳೂರಿನ ಘಟನೆಗೆ ಕಾಂಗ್ರೆಸ್ ನೇತಾರರೇ ಕಾರಣ. ಯು.ಟಿ.ಖಾದರ್ ಭಾಷಣದ 24 ಗಂಟೆಯಲ್ಲಿ ಮಂಗಳೂರಿಗೆ ಬೆಂಕಿ ಬಿದ್ದಿದೆ. ಬಂದರು ಠಾಣೆಯ ನಾಲ್ಕು ರಸ್ತೆಗಳನ್ನ ಸಾವಿರಾರು ಜನ ಮುತ್ತಿಗೆ ಹಾಕಿದ್ರು ಎಂದು ಹೇಳಿದ್ದಾರೆ.

'ಸಿಟಿ ರವಿ, ಸುರೇಶ್ ಅಂಗಡಿ ಹೇಳಿಕೆ ಪ್ರಚೋದನಕಾರಿ ಅಲ್ವಾ..? ಅವರ ವಿರುದ್ಧ ಕ್ರಮ ಏಕಿಲ್ಲ'..?

ಮೊದಲ ಬಾರಿಗೆ ಮುಖಕ್ಕೆ ಬಟ್ಟೆ ಕಟ್ಟಿ ಮಂಗಳೂರಿನಲ್ಲಿ ಕಲ್ಲೆಸೆತ ಆಗಿದೆ. ಕಾಶ್ಮೀರದಲ್ಲಿ ಸೈನಿಕರು, ಪೊಲೀಸರ ಮೇಲೆ ಕಲ್ಲೆಸೆತ ನೋಡಿದ್ದೇವೆ. ಪಕ್ಕದ ರಾಜ್ಯದಿಂದ ಬಂದ ಯುವಕರು, ವಿದ್ಯಾರ್ಥಿಗಳು ಇದರಲ್ಲಿ ಇದ್ದಾರೆ. ಪಾಪ್ಯುಲರ್ ಫ್ರಂಟ್, ಎಸ್ ಡಿಪಿಐ ನಾಯಕರು ಮಂಗಳೂರು ಹಿಡಿತಕ್ಕೆ ತೆಗೆದುಕೊಳ್ಳಲು ಈ ಘಟನೆ ನಡೆದಿದೆ. ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪಿಎಫ್‌ಐನವರು ಗಲಾಟೆ ನಿಲ್ಲಿಸೋರಲ್ಲ, ಗಲಾಟೆ ಮಾಡೋರು:

ಈ ರೀತಿಯ ಪ್ರಚೋದನೆ ಕೊಟ್ಟವರ ಮೇಲೆ ಕ್ರಮ ಆಗಬೇಕು. ಇಡೀ ಘಟನೆ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಕೆಯಾಗುತ್ತದೆ. ಪತ್ರಕರ್ತರ ಹೆಸರಿನಲ್ಲಿ ಬಂದವರ ಬಳಿ ಮಾರಕಾಸ್ತೃ ಇತ್ತು ಎಂದು ಗೊತ್ತಾಗಿದೆ. ಹಲವಾರು ಕೊಲೆ ಪ್ರಕರಣಗಳಲ್ಲಿ ಪಿಎಫ್‌ಐ ಕಾರ್ಯಕರ್ತರ ಬಂಧನವಾಗಿದೆ. ಮಾರಕಾಸ್ತ್ರ ಮೂಲಕ ನಮ್ಮ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಿರೋದು ಸಾಬೀತಾಗಿದೆ. ಹೀಗಾಗಿ ಅದನ್ನ ನಿಷೇಧ ಮಾಡಬೇಕು. ಪಿಎಫ್‌ಐನವರು ಗಲಾಟೆ ನಿಲ್ಲಿಸೋರಲ್ಲ, ಅವರು ಗಲಾಟೆ ಮಾಡೋರು ಎಂದು ಹೇಳಿದ್ದಾರೆ.

ಹಿಂದೆ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸರು ಮತ್ತೆ ಮಂಗಳೂರಿಗೆ

Latest Videos
Follow Us:
Download App:
  • android
  • ios