ಮೈಸೂರು (ಫೆ.24): ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕೊನೆ ಹಂತದ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದೇವೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದರು.

ಮೈಸೂರಿನಲ್ಲಿಂದು ಮಾತನಾಡಿದ ತನ್ವೀರ್ ಸೇಠ್  ಬಿಜೆಪಿ ವಿರುದ್ಧದ ಕಾರ್ಯಚರಣೆಯಲ್ಲಿ ಯಶಸ್ವಿಯಾಗಿದ್ದೇವೆ. ಒಪ್ಪಂದದ ಪ್ರಕಾರ ನಮಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.  ಬಿಜೆಪಿಗೆ ಸಿಗುವ ಲಕ್ಷಣ ಇದ್ದ ಕಾರಣ ನಾವು ಕಾರ್ಯತಂತ್ರ ಬದಲಿಸಿ ಮೇಯರ್ ಸ್ಥಾನ ಬಿಟ್ಟುಕೊಟ್ಟೆವು ಎಂದು ಹೇಳಿದರು. 

"

ಬಿಜೆಪಿಯನ್ನ ಅಧಿಕಾರದಿಂದ ದೂರ ಇಡುವಲ್ಲಿ ಕೈ ಸಕ್ಸಸ್, ಆದ್ರೂ ಸಿದ್ದುಗೆ ಹಿನ್ನಡೆ .

ಜೆಡಿಎಸ್ ನಮಗೆ ಬೆಂಬಲ ಕೇಳಿತ್ತು, ಕೇಳಿಲ್ಲ ಎನ್ನುವುದು ಬೇರೆ ಪ್ರಶ್ನೆ. ನಮಗೆ ನಮ್ಮ‌ ಉದ್ದೇಶ ಈಡೇರಬೇಕಿತ್ತು, ಅದು ಈಡೇರಿದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದರು.  

ಹುಲಿಯನ್ನ ಬೋನಿಗೆ ಹಾಕಿದ್ದಾರೆಂಬ ಪ್ರತಾಪ್‌ಸಿಂಹ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು ಹುಲಿಯನ್ನ ಬೋನಿಗೆ ಹಾಕುವುದು ಹಳೆ ಸಂಸ್ಕೃತಿ.  ಆದರೆ ಮಂಗಗಳು ಎಲ್ಲಿ ಇರ್ತಾವೆ ಎಂಬುದು ಪ್ರತಾಪ್‌ಸಿಂಹಗೆ ಕೇಳಿ ಎಂದು ತಿರುಗೇಟು ನೀಡಿದರು.