Asianet Suvarna News Asianet Suvarna News

ಶರತ್ ಬಚ್ಚೇಗೌಡ ಕೈ ಸೇರ್ಪಡೆ : ಅಸಮಾಧಾನಗೊಂಡರಾ ಇವರು..?

ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ಬಗ್ಗೆ ಕೆಲ ಮುಖಂಡರಿಂದ ಅಸಮಾಧಾನ ವ್ಯಕ್ತವಾಗಿದೆ

Congress Leaders unhappy Over Sharath Bachegowda Congress Joining Issue snr
Author
Bengaluru, First Published Oct 22, 2020, 3:40 PM IST

ಸೂಲಿಬೆಲೆ (ಅ.22):  ಹೊಸಕೋಟೆ ಸ್ವಾಭಿಮಾನಿ ಅಭ್ಯರ್ಥಿಯಾಗಿ ಗೆದ್ದಿರುವ ಶರತ್‌ ಬಚ್ಚೇಗೌಡರು ಕಾಂಗ್ರೆಸ್‌ ಸೇರ್ಪಡೆಯಾದರೇ ಮೂಲ ಕಾಂಗ್ರೆಸ್ಸಿಗರಿಗೆ ಯಾವುದೇ ತೊಂದರೆಯಾಗಬಾರದು. ಎಲ್ಲ ಹಂತದಲ್ಲೂ ಅವರನ್ನು ಪರಿಗಣಿಸಬೇಕು.ಆಗೋಮ್ಮೆ ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ತೋರಿದ್ದಲ್ಲಿ ನಮ್ಮ ದಾರಿಯನ್ನು ನಾವು ನೋಡಿಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ಕಾಂಗ್ರೆಸ್‌ ಮುಖಂಡರು ಅರಿತುಕೊಂಡು ಸೇರ್ಪಡೆಯ ಬಗ್ಗೆ ತಿರ್ಮಾನ ಮಾಡಬೇಕು ಎಂದು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು

ಸೂಲಿಬೆಲೆ ಒಂದನೇ ಸರ್ಕಲ್‌ ನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಶರತ್‌ ಬಚ್ಚೇಗೌಡರು ಸೇರ್ಪಡೆ ಕುರಿತು ಕಾಂಗ್ರೆಸ್‌ ಪಕ್ಷದಿಂದ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ವ್ಯಕ್ತವಾದ ಮಾತುಗಳು.

ಕಾರ್ಯಕರ್ತರನ್ನು ಕಡೆಗಣಿಸಬಾರದು

ಶರತ್‌ ಬಚ್ಚೇಗೌಡರು ಕಾಂಗ್ರೆಸ್‌ ಪಕ್ಷಕ್ಕೆ ಬಂದರೇ ಪಕ್ಷ ಬಲವರ್ದನೆಯಾಗುತ್ತದೆ ನಿಜ. ಆದರೇ ಅವರು ನಂತರ ಸ್ವಾಭಿಮಾನ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಮನ್ನಣೆ ನೀಡಿದರೇ ಮೂಲ ಕಾಂಗ್ರೆಸ್ಸಿಗರ

ಗತಿಯೇನು. ಇದರ ಬಗ್ಗೆ ಮುಖಂಡರು ಅರಿತುಕೊಂಡು ಹೈಕಮಂಡ್‌ಗೆ ವರದಿ ನೀಡಬೇಕು ಎಂದರು.

ಶರತ್ ಬಚ್ಚೇಗೌಡ - ಕಾಂಗ್ರೆಸ್ ಮೈತ್ರಿಗೆ ಆಯ್ತು ಗೆಲುವು : ಬಿಜೆಪಿಗೆ ತೀವ್ರ ಮುಖಭಂಗ

ಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಮುನಿಶಾಮಣ್ಣ ಮಾತನಾಡಿ, ಶರತ್‌ ಬಚ್ಚೇಗೌಡರ ಸೇರ್ಪಡೆಯ ಬಗ್ಗೆ ಕ್ಷೇತ್ರದಲ್ಲಿರುವ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಸಭೆ ನಡೆಸಲಾಗುತ್ತಿದ್ದು ಕಾರ್ಯಕರ್ತರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಪಕ್ಷದ ಮುಖ್ಯಸ್ಥರಿಗೆ ತಲುಪಿಸಲಾಗುವುದು. ಅಂತಿಮ ತಿರ್ಮಾನ ಪಕ್ಷದ ಹೈಕಮೆಂಡ್‌ಗೆ ಬಿಟ್ಟಿದ್ದು. ಶರತ್‌ ಸೇರ್ಪಡೆಯಾದರೇ ಎರಡು ಪಕ್ಷದ ಕಾರ್ಯಕರ್ತರಿಗೆ ,ಮುಖಂಡರಿಗೆ ತೊಂದರೆ,ಅಧಿಕಾರಿ ಹಂಚಿಕೆ ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಸಮನ್ವಯ ಸಮಿತಿಗಳನ್ನು ಹೋಬಳಿ ಮತ್ತು ಸಾದ್ಯವಾದರೇ ಗ್ರಾಪಂ ಮಟ್ಟದಲ್ಲಿ ಮಾಡಲಾಗುವುದು ಎಂದರು.

Follow Us:
Download App:
  • android
  • ios