ಜಮೀರ್ ಪಕ್ಷದಿಂದ ಹೊರಕ್ಕೆ ಹಾಕಿದ್ದು ನೀವೇ ಅಲ್ಲವೇ ?
- ಜೆಡಿಎಸ್ ಅಲ್ಪಸಂಖ್ಯಾತ ಪ್ರಭಾವಿ ನಾಯಕ ಜಮೀರ್ ಅಹಮದ್ ಅವರ ಬೆಳವಣಿಗೆ ಸಹಿಸದೆ ಪಕ್ಷದಿಂದ ಹೊರಕ್ಕೆ
- ಕಾಂಗ್ರೆಸ್ ಪ.ಜಾತಿ ವಿಭಾಗದ ಜಿ. ಮಂಟೆಲಿಂಗಯ್ಯ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಪ್ರಶ್ನೆ
ಮೈಸೂರು (ಅ.18): ಜೆಡಿಎಸ್ (JDS) ಅಲ್ಪಸಂಖ್ಯಾತ ಪ್ರಭಾವಿ ನಾಯಕ ಜಮೀರ್ ಅಹಮದ್ (zameer Ahmed) ಅವರ ಬೆಳವಣಿಗೆ ಸಹಿಸದೆ ಪಕ್ಷದಿಂದ ಹೊರಹಾಕಿದವರು ತಾವೇ ಅಲ್ಲವೇ ಎಂದು ಕಾಂಗ್ರೆಸ್ (Congress) ಪ.ಜಾತಿ ವಿಭಾಗದ ಜಿ. ಮಂಟೆಲಿಂಗಯ್ಯ (Mantelingaiah), ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಪ್ರಶ್ನಿಸಿದ್ದಾರೆ.
ಮೈಸೂರು (Mysuru) ಭಾಗದಲ್ಲಿ ಜಿ.ಟಿ. ದೇವೇಗೌಡರ (GT Devegowda) ಬೆಳವಣಿಗೆ ಸಹಿಸದೆ ಮೂಲೆಗುಂಪು ಮಾಡಿದ್ದು, ಎಚ್. ವಿಶ್ವನಾಥ್ (H Vishwanath) ಅವರನ್ನು ರಾಜ್ಯಾಧಕ್ಷರನ್ನಾಗಿ ಮಾಡಿ, ಗುಮಾಸ್ತನಂತೆ ನಡೆಸಿಕೊಂಡವರು, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ (AR Krishnamurthy) ಅವರು ಶಾಸಕರಾಗಿದ್ದಾಗ ಪ್ರಭಾವ ಶಾಲಿಗಳಾಗಿ ಬೆಳೆಯುವುದನ್ನು ತಪ್ಪಿಸಲು ಅವರಿಗೆ ಎಂಎಲ್‌ಸಿ (MLC) ಸ್ಥಾನ ತಪ್ಪಿಸಿದವರು ಯಾರು? ಎಂದು ಕೇಳಿದ್ದಾರೆ.
ಜಮೀರ್ ವಿರುದ್ಧವೇ ಸ್ಪರ್ಧೆಗೆ ಸಿದ್ಧವಾದ ಮುಸ್ಲಿಂ ಮುಖಂಡ
ಅಲ್ಲದೆ ಅನೇಕರನ್ನು ಮೂಲೆಗುಂಪು ಮಾಡುವುದು, ಬೆಳೆಯುವವರನ್ನು ತುಲಿಯುವುದೇ ನಿಮ್ಮ ಸಿದ್ಧಾಂತವಾಗಿದೆ. ತಮ್ಮ ಕುಟುಂಬದ ಹಿತಕ್ಕಾಗಿ ಎಲ್ಲರನ್ನೂ ಬಲಿಕೊಡುವುದು ತಮ್ಮ ಪಕ್ಷದ ಸಿದ್ಧಾಂತವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಎಚ್‌ಡಿಕೆ ವಿರುದ್ಧ ಡೀಲ್ ಬಾಂಬ್
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah ) ಅವರನ್ನು 'ಅಲ್ಪಸಂಖ್ಯಾತರ ಟರ್ಮಿನೇಟರ್' ಎಂದು ಎಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಶಾಸಕ ಜಮೀರ್ ಅಹಮದ್ ಖಾನ್ ಕೆಂಡಾಮಂಡಲರಾಗಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬೈರತಿ ಸುರೇಶ್ ಮತ್ತು ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ಡೀಲ್ ನಡೆದಿತ್ತು ಎಂದು ಜಮೀರ್ ಅಹಮದ್ ಖಾಣ್ (Zameer Ahmed Khan ) ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮುಸ್ಲಿಂ ನಾಯಕರನ್ನ ಮುಗಿಸಿದ್ದೇ ಸಿದ್ದರಾಮಯ್ಯ: ಸಿದ್ದು ವಿರುದ್ಧ HDK ವಾಗ್ದಾಳಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು 'ಅಲ್ಪಸಂಖ್ಯಾತರ ಟರ್ಮಿನೇಟರ್' ಎಂದು ಎಚ್.ಡಿ ಕುಮಾರಸ್ವಾಮಿ ಅವರು ಶನಿವಾರ ಟೀಕಿಸಿದ್ದರು. ಈ ಬಗ್ಗೆ ಇಂದು (ಭಾನುವಾರ) ಸರಣಿ ಟ್ವೀಟ್ ಮಾಡಿರುವ ಜಮೀರ್ ಅಹಮದ್, ನಿದರ್ಶನಗಳ ಸಹಿತ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅವರಲ್ಲ, ಕುಮಾರಸ್ವಾಮಿ . ಆ ವಿಧಾನಪರಿಷತ್ ಚುನಾವಣೆಯಲ್ಲಿ ಭೈರತಿ ಸುರೇಶ್ ಪಕ್ಷೇತರ ಅಭ್ಯರ್ಥಿಯಾಗಿದ್ದರು. ಜೆಡಿಎಸ್ ಪಕ್ಷದಲ್ಲಿ ಆಗ ಏಳೆಂಟು ಹೆಚ್ಚುವರಿ ಮತಗಳಿದ್ದವು. ಅದನ್ನು ಭೈರತಿ ಸುರೇಶ್ ಅವರಿಗೆ ಮಾರಾಟ ಮಾಡಿದ್ದು ಯಾರೆಂದು ನೆನಪಿದೆಯಾ? ಎಂದು ಮನವರಿಕೆ ಮಾಡಿದ್ದಾರೆ.