ರಾಜೀನಾಮೆಗೆ ಮೀನಮೇಷ : ಕೈ ಮುಖಂಡರಿಂದ ಹೆಚ್ಚಿದ ಒತ್ತಡ
ಕೈ ಮುಖಂಡರರೋರ್ವರ ರಾಜೀನಾಮೆ ಪಕ್ಷದ ನಾಯಕರಿಂದಲೇ ಒತ್ತಡ ಹೆಚ್ಚಾಗಿದೆ. ಆದರೆ ರಾಜೀನಾಮೆ ನೀಡಲು ಮೀನಮೇಷ ಎಣಿಸುತ್ತಿದ್ದು ಅಸಮಾಧಾನ ವ್ಯಕ್ತವಾಗಿದೆ.
ಗುಂಡ್ಲುಪೇಟೆ (ಫೆ.15): ಪಕ್ಷದ ಒಳ ಒಪ್ಪಂದದಂತೆ ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಿ ಎಂ ಶಿವಮಾದಪ್ಪ ರಾಜೀನಾಮೆ ನೀಡಲು ಮೀನಮೇಷ ಎಣಿಸುತ್ತಿದ್ದಾರೆ..?
ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದ್ದು ಎಪಿಎಂಸಿ ಅಧ್ಯಕ್ಷ ಬಿ ಎಂ ಶಿವಮಾದಪ್ಪ ಪಕ್ಷದ ಆದೇಶದಂತೆ ಕಳೆದ ವರ್ಷದ ಡಿಸೆಂಬರ್ ತನಕ ಅಧಿಕಾರ ಚಲಾಯಿಸಿ ರಾಜೀನಾಮೆ ನೀಡಬೇಕಿತ್ತು ಎನ್ನಲಾಗಿದೆ.
ಆದರೆ ವರಿಷ್ಠರು ಸಹ ಪಕ್ಷದ ಆಶಯದಂತೆ ರಾಜೀನಾಮೆ ನೀಡುವಂತೆ ಹೇಳಿದ್ದರೂ ಈ ವಾರ ಮುಂದಿನ ವಾರ ಎಂದು ಸತಾಯಿಸುತ್ತಿದ್ದಾರೆ ಎಂದು ತಿಳಿದು ಬಂದದೆ.
ಅತ್ಯಧಿಕ ಸ್ಥಾನ ಪಡೆದು ನಂಬರ್ ಪಟ್ಟಕ್ಕೇರಿದ ಕಾಂಗ್ರೆಸ್ ..
ಎಪಿಎಂಸಿ ಅಧ್ಯಕ್ಷರಾಗುವ ತವಕದಲ್ಲಿರುವ ಎಪಿಎಂಸಿ ನಿರ್ದೇಶಕ ಹಾಗೂ ಕಾಂಗ್ರೆಸ್ ಹಿಡಿಯ ಮುಖಂಡ ಎಸ್ ಶಿವನಾಗಪ್ಪ ಈ ಸಂಬಂಧ ಪಕ್ಷದ ಮುಖಂಡರ ಬಳಿ ರಾಜೀನಾಮೆ ಕೊಡಿಸಿ ಎಂದು ಕೋರಿದ್ದಾರೆ.
ಮುಖಂಡರ ಮಾತಿಗೆ ಒಪ್ಪಿ ರಾಜೀನಾಮೆ ಕೊಡುವುದಾಗಿ ಶಿವಮಾದಪ್ಪ ಹೇಳಿದ್ದಾರೆ. ಹೇಳಿದ ದಿನದ ಬದಲಾಗಿ ದಿನ ದೂಡುತ್ತಿರುವುದು ಪಕ್ಷದ ಮುಖಂಡರಲ್ಲಿ ಬೇಸರ ಮೂಡಿಸಿದೆ.