JDS ಸೇರಿದ ಹಲವು ಕಾಂಗ್ರೆಸ್ ಮುಖಂಡರು : ನಿವೃತ್ತಿ ವಿಚಾರ ತಿಳಿಸಿದ ಮಾಜಿ ಶಾಸಕ

  • ಹಲವಾರು  ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆ
  • ಇದೇ ವೇಳೆ ರಾಜಕಿಯ ನಿವೃತ್ತಿ ಬಗ್ಗೆ ಮಾತನಾಡಿದ ಮಾಜಿ ಜೆಡಿಎಸ್ ಶಾಸಕ
Congress Leaders joins JDS in turuvekere snr

ತುರುವೇಕೆರೆ (ಆ.01): ತಾಲೂಕಿನ ದಬ್ಬೆಘಟ್ಟ ಹೋಬಳಿಯ ಹಲವಾರು  ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್‌ಗೆ ಮಾಜಿ ಶಾಸಕ ಎಂಟಿ. ಕೃಷ್ಣಪ್ಪ ಸಮ್ಮುಖದಲ್ಲಿ ಸೇರ್ಪಡೆಯಾದರು. 

ದಬ್ಬೆಘಟ್ಟದ ಆಂಜನೇಯ ಸ್ವಾಮಿ ದೇವಾಲಯದ ಅವರಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗ್ರಾಮ  ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ ರಮೇಶ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಮುಖಂಡರು ಜೆಡಿಎಸ್‌ ಸೇರಿದರು. 

ಜಿಟಿ ದೇವೇಗೌಡರು ಜೆಡಿಎಸ್‌ ಬಿಟ್ಟು ಹೋದರೆ ಪಕ್ಷಕ್ಕೇನೂ ನಷ್ಟವಿಲ್ಲ: ಎಚ್‌ಡಿಕೆ

ಕಾಂಗ್ರೆಸ್ ಕಾರ್ಯಕರ್ತರನ್ನು ಜೆಡಿಎಸ್‌ಗೆ ಸ್ವಾಗತಿಸಿ ಮಾತನಾಡಿದ ಮಾಜಿ ಶಾಸಕ ಎಂಟಿ ಕೃಷ್ಣಪ್ಪ ರಾಜ್ಯದಲ್ಲಿ ಜೆಡಿಎಸ್ ಒಂದೇ ಜನಪರವಾಗಿರುವ ಪಕ್ಷ. ರೈತರ  ಜೀವ ನಾಡಿಯಾಗಿದೆ. ಎಚ್.ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರತೀ ರೈತರ 2 ಲಕ್ಷ ರು. ಸಾಲಮನ್ನಾ ಮಾಡಿದ ಏಕೈಕ ನಾಯಕ. ಎಚ್.ಡಿ ದೇವೇಗೌಡರ ಕುಟುಂಬ ರೈತರ ಅಭಿವೃದ್ಧಿಯನ್ನೇ ನಿರೀಕ್ಷಿಸುತ್ತದೆ ಎಂದರು. 

ಕೊನೆ ಚುನಾವಣೆ : ಮುಂಬರುವ ಚುನಾವಣೆಯೆ ತಮ್ಮದು ಕೊನೆಯ ಚುನಾವಣೆ ಮುಂಬರುವ ಚುನಾವನೆಯಲ್ಲಿ ಕ್ಷೆತ್ರದಿಂದ ಗೆದ್ದು ತಾಲೂಕಿಗೆ ಆಗಬೇಕಿರುವ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಆಸೆ ಇದೆ ಎಂದರು. 

ಸಭೆಯಲ್ಲಿ ಎಪಿಎಂಸಿ ನಿರ್ದೇಶಕ ಹಿಂಡುಮಾರನಹಳ್ಳಿ ನಾಗರಾಜು, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ವೆಂಕಟೇಶ್ ಮೂರ್ತಿ, ತಾಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಮುಖಂಡರಾದ ಚಂದ್ರೇಶ್ ಮಾತನಾಡಿದರು. ಸಭೆಯಲ್ಲಿ ಜಿಪಂ ಟಿಕೆಟ್ ಆಕಾಂಕ್ಷಿಗಳಾದ ದೊಡ್ಡೇಗೌಡ , ತಾಪಂ ಟಿಕೆಟ್ ಆಕಾಂಕ್ಷಿ ವಿಠಲಾಪುರದ  ಹರೀಶ್, ಹುಲಿಹಲ್ ಲೋಕೇಶ್ ಸೇರಿದಂತೆ ಇತರರು ಇದ್ದರು.

Latest Videos
Follow Us:
Download App:
  • android
  • ios