ಸಂಸದ ಪ್ರತಾಪ್ ಸಿಂಹಗೆ ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ ಎಚ್ಚರಿಕೆ
- ನೀವೂ ಧಮ್ಕಿ ಹಾಕಿದರೆ ನಾವು ಹೆದರಲ್ಲ. ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ
- ಪ್ರತಾಪ್ ಸಿಂಹಗೆ ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಎಚ್ಚರಿ
ಮೈಸೂರು (ಸೆ.09): ನೀವೂ ಧಮ್ಕಿ ಹಾಕಿದರೆ ನಾವು ಹೆದರಲ್ಲ. ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ ಪ್ರತಾಪ್ ಸಿಂಹ ಅವರೇ ಎಂದು ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಎಚ್ಚರಿಸಿದ್ದಾರೆ.
"
ಮೈಸೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತನ್ವೀರ್ ಸೇಠ್ ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಆದರೆ ಇದೆಲ್ಲವು ಕಾನೂನಿನ ಮೂಲಕ ಆಗಬೇಕು. ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕಿದ್ದೀರಾ ಇದು ಸರಿಯಲ್ಲ. ಓರ್ವ ಜಿಲ್ಲಾ ದಂಡಾಧಿಕಾರಿಗಳಿಗೆ ಈ ರೀತಿ ಧಮ್ಕಿ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಭೂ ಸ್ವಾಧೀನಕ್ಕೆ ಅನುದಾನ ಕೋರಿದ ಪ್ರತಾಪ ಸಿಂಹ
ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ಎಚ್ಚರಿಕೆ ನೀಡಿದ್ದು ಪ್ರಚೋದನೆ ಕೊಡುವುದು ಯಾರಿಗು ಒಳ್ಳೆಯದಲ್ಲ. ಮೈಸೂರಿನ ಅರಸು ರಸ್ತೆಯ ದರ್ಗಾ ಮೊದಲು ಬಂತಾ? ರಸ್ತೆ ಮೊದಲು ಬಂತ. ದರ್ಗಾ ಇದ್ದದ್ದು ಮನೆಯಲ್ಲಿ- ಬಳಿಕ ಅಲ್ಲಿ ರಸ್ತೆ ಆಗಿದೆ. ಸದ್ಯ ಅದು ಈಗ ಕೋರ್ಟ್‌ನಲ್ಲಿ ಇದೆ ಎಂದರು.
ಯಾವುದೆ ವಿವಾದವನ್ನೂ ಕೋರ್ಟ್ ಬಗೆಹರಿಸುತ್ತೆ, ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್ ಹೇಳಿದರು.
ಹಿನ್ನೆಲೆ : ಜಿಲ್ಲಾಡಳಿತ ಹಿಂದೂ ದೇವಸ್ಥಾನಗಳನ್ನು ಮಾತ್ರ ಗುರಿಯಾಗಿಸಿಕೊಂಡು ತೆರವು ಕಾರ್ಯಾಚರಣೆ ನಡೆಸುತ್ತಿರುವುದನ್ನು ನಿಲ್ಲಿಸದಿದ್ದರೆ ಬೀದಿಗಿಳಿದು ಹೊರಾಟ ನಡೆಸುವುದಾಗಿ ಸಂಸದ ಪ್ರತಾಪ್‌ಸಿಂಹ ಎಚ್ಚರಿಸಿದ್ದರು.
"
ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು. ಕೋರ್ಟ್ ಆದೇಶ ಎಂಬ ಕಾರಣ ಹೇಳಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗದುಕೊಳ್ಳದೇ ಹಿಂದೂ ದೇವಸ್ಥಾನಗಳನ್ನು ಮಾತ್ರ ತೆರವುಗೊಳಿಸುತ್ತಿದ್ದಾರೆ. ರಾತ್ರೋರಾತ್ರಿ ಕಳ್ಳರಂತೆ ದೇವಸ್ಥಾನ ತೆರವು ಗೊಳಿಸಿದ್ದಾರೆ, ಹುಲ್ಲಹಳ್ಳಿಯಲ್ಲಿ ದೇವಸ್ಥಾನ ತೆರವುಗೊಳಿಸಿದ್ದಾರೆ. ಅನಧಿಕೃತವಾಗಿ ನಿರ್ಮಾಣವಾಗಿರುವ ದರ್ಗಾ, ಮಸೀದಿ ಮತ್ತು ಚರ್ಚ್ ತೆರವುಗೊಳಿಸಿಲ್ಲ. ಇದಕ್ಕೆ ಅಧಿಕಾರಿಗಳು ಹೆದರುತ್ತಿದ್ದಾರೆ. ದೇವರಾಜ ಅರಸು ರಸ್ತೆಯಲ್ಲಿ ಸಮಾಧಿಯನ್ನು ಹಲವು ವರ್ಷಗಳಿಂದ ತೆರವುಗೊಳಿಸಿಲ್ಲ. ಇರ್ವಿನ್ ರಸ್ತೆ ವಿಸ್ತರಣೆಗೆ ಅಲ್ಲಿನ ಮಸೀದಿಯ ತಡೆಗೋಡೆ ತೆರವುಗೊಳಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.