Asianet Suvarna News Asianet Suvarna News

ಹೊರಗಿಂದ ಬಂದು ಇಲ್ಲಿ ಆಶ್ರಯ : ಎಚ್‌ಡಿಕೆ ವಿರುದ್ಧ ಪರದೇಶಿ ಟಾಂಗ್

ಹೊರಗಿನಿಂದ ಬಂದು ಇಲ್ಲಿ ಆಶ್ರಯ ಪಡೆದವರು ಪರದೇಸಿಗಳೇ ಹೊರತು ಇಲ್ಲಿಯವರಲ್ಲ ಎಂದು  ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಮುಖಂಡರೋರ್ವರು ಅಸಮಾಧಾನ ಹೊರಹಾಕಿದ್ದಾರೆ. 

Congress Leader iqbal hussain Slams HD Kumaraswamy snr
Author
Bengaluru, First Published Mar 10, 2021, 3:34 PM IST

 ರಾಮ​ನ​ಗರ (ಮಾ.10):  ಬೇರೆ ಜಿಲ್ಲೆ​ಯಿಂದ ಇಲ್ಲಿಗೆ ಬಂದು ರಾಜ​ಕೀಯ ಆಶ್ರಯ ಪಡೆ​ದಿರುವ ವ್ಯಕ್ತಿ​ಗಳು ಪರ​ದೇ​ಸಿ​ಗಳೇ ಹೊರತು ಜಿಲ್ಲೆಯ ನಾಯ​ಕರು ಹಾಗೂ ಜನ​ರಲ್ಲ ಎಂದು ಮಾಜಿ ಸಿಎಂ ಕುಮಾ​ರ​ಸ್ವಾಮಿ ವಿರುದ್ಧ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಪರೋ​ಕ್ಷ​ವಾಗಿ ವಾಗ್ದಾಳಿ ನಡೆ​ಸಿ​ದರು.

ನಗ​ರದ ಮಿನಿ ​ವಿ​ಧಾ​ನ​ಸೌ​ಧದ ಆವ​ರ​ಣ​ದಲ್ಲಿ ಸರ್ವೆ ಇಲಾ​ಖೆಯ ರೈತ ವಿರೋಧಿ ಧೋರಣೆ ಖಂಡಿಸಿ ನಡೆದ ಪ್ರತಿ​ಭ​ಟ​ನೆ​ಯಲ್ಲಿ ಮಾತ​ನಾ​ಡಿದ ಅವರು, ರಾಮ​ನ​ಗರ ಕ್ಷೇತ್ರ​ದಿಂದ ಆಯ್ಕೆ​ಯಾದ ಪರ​ದೇ​ಸಿ​ಗಳು ರಾಜ​ಕಾ​ರ​ಣ​ದಲ್ಲಿ ಉನ್ನತ ಹುದ್ದೆ​ಗ​ಳನ್ನು ಅಲಂಕ​ರಿ​ಸಿ​ದ್ದರು. ಆದ​ರೀಗ ಆ ಹುದ್ದೆ ಅಲಂಕ​ರಿ​ಸಲು ಕಾರ​ಣ​ರಾ​ದ​ವ​ರನ್ನೇ ಆಯ್ಕೊಂಡು ತಿನ್ನು​ವ​ವರೆಂದು ತುಚ್ಛ​ವಾಗಿ ಮಾತ​ನಾ​ಡು​ತ್ತಿ​ದ್ದಾರೆ ಎಂದು ಟೀಕಿ​ಸಿ​ದರು.

ಸೀಡಿ ವಿಚಾರ : ಮತ್ತೆ ಪ್ರಸ್ತಾಪಿಸಿದ ಎಚ್ ಡಿ ಕುಮಾರಸ್ವಾಮಿ .

ರಾಮ​ನ​ಗರ ಕ್ಷೇತ್ರದ ಜನರು ನೀಡಿದ ಭಿಕ್ಷೆ​ಯಿಂದ ಪ್ರಧಾ​ನ​ಮಂತ್ರಿ, ಮುಖ್ಯ​ಮಂತ್ರಿ ಹುದ್ದೆ​ಗ​ಳನ್ನು ಒಲಿ​ದವು. ಆದರೆ, ಎಂದೂ ಕ್ಷೇತ್ರದ ಜನರ ಕಷ್ಟಸುಖ​ಗ​ಳಿಗೆ ಸ್ಪಂದಿ​ಸ​ಲಿಲ್ಲ. ಕೋವಿಡ್‌ ನಂತಹ ಸಂಕ​ಷ್ಟದ ದಿನ​ಗ​ಳ​ಲ್ಲಿಯೂ ಸಹಾಯ ಹಸ್ತ ಚಾಚ​ಲಿ​ಲ್ಲ. ಯುವ​ಕ​ರಿಗೆ ಉದ್ಯೋಗ, ಬಡ​ವ​ರಿಗೆ ಸೂರು ಕಲ್ಪಿ​ಸುವ ಕೆಲಸ ಮಾಡ​ಲಿಲ್ಲ. ಕ್ಷೇತ್ರದಲ್ಲಿ ಸಂಕ​ಷ್ಟ​ದ​ಲ್ಲಿ​ರುವ ಜನ​ರಿಗೆ ಕೈಲಾದ ಸಹಾಯ ಮಾಡಿ​ದರೆ ನನ್ನನ್ನೇ ದಾನ​ಶೂರ ಕರ್ಣ ಎಂದು ಗೇಲಿ ಮಾಡು​ತ್ತಿ​ದ್ದಾರೆ. ಹೌದು ನಾನು ದಾನ​ಶೂರ ಕರ್ಣನೇ, ನಿಮ್ಮಂತೆ ಡೋಂಗಿ​ತನ ಮಾಡಲು ಬರು​ವು​ದಿಲ್ಲ. ನನ್ನ ಕೊನೆ ಉಸಿರು ಇರು​ವ​ವ​ರೆಗೂ ಜನ ಸೇವೆ ಮಾಡು​ತ್ತೇನೆ ಎಂದರು.

ಗೋ ಬ್ಯಾಕ್‌ ಚಳ​ವಳಿ ಎಚ್ಚ​ರಿಕೆ:  ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ಮಾತ​ನಾ​ಡಿ, ರಾಜ್ಯ​ದಲ್ಲಿ ಬಿಜೆಪಿ ಸರ್ಕಾರ ಅಧಿ​ಕಾ​ರಕ್ಕೆ ಬಂದಾ​ಗ​ಲೆಲ್ಲ ರಾಮ​ನ​ಗರ ಜಿಲ್ಲೆ ತಬ್ಬ​ಲಿ​ಯಾ​ಗು​ತ್ತದೆ. ಇದಕ್ಕೆ ಸಿಎಂ ಯಡಿ​ಯೂ​ರಪ್ಪ ಬಜೆಟ್‌ನಲ್ಲಿ ಜಿಲ್ಲೆ​ಯನ್ನು ಸಂಪೂ​ರ್ಣ​ವಾಗಿ ನಿರ್ಲ​ಕ್ಷಿ​ಸಿ​ರು​ವುದೇ ಸಾಕ್ಷಿ. ಜಿಲ್ಲಾ ಉಸ್ತು​ವಾರಿ ಸಚಿ​ವರು ಜಿಲ್ಲೆಯ ಅಭಿ​ವೃದ್ಧಿ ಹಾಗೂ ಜನರ ಕಷ್ಟ​ಸು​ಖ​ಗ​ಳಿಗೆ ಸ್ಪಂದಿ​ಸ​ದಿ​ದ್ದರೆ ಗೋ ಬ್ಯಾಕ್‌ ಚಳ​ವಳಿ ಹಮ್ಮಿ​ಕೊ​ಳ್ಳು​ವು​ದಾಗಿ ಎಚ್ಚ​ರಿಕೆ ನೀಡಿ​ದರು.

ರಾಮ​ನ​ಗರ ಅವ್ಯ​ವ​ಸ್ಥೆಗೆ ಮೂವರು ಜೆಡಿ​ಎಸ್‌ ಶಾಸ​ಕರೇ ಕಾರಣ. ಶಾಸಕರು ಅಧಿ​ಕಾ​ರಿ​ಗಳ ಸಭೆ ಕರೆದು ಚುರುಕು ಮುಟ್ಟಿ​ಸುವ ಕೆಲಸ ಮಾಡಿಲ್ಲ. ಕಾಟಾ​ಚಾ​ರಕ್ಕೆ ಕೆಡಿಪಿ ಸಭೆ ಹಾಗೂ ಜನ​ಸಂಪರ್ಕ ಸಭೆ ನಡೆ​ಸ​ಬಾ​ರದು. ಸರ್ಕಾರ ಹಾಗೂ ಶಾಸ​ಕ​ರಿಗೆ ಅಧಿ​ಕಾ​ರಿ​ಗ​ಳಿಗ ಮೇಲಿನ ಹಿಡಿತ ಕೈ ತಪ್ಪಿರುವುದೇ ಅವ್ಯ​ವ​ಸ್ಥೆಗೆ ಕಾರ​ಣ ಎಂದು ಟೀಕಿ​ಸಿ​ದರು.

ನಾಲ್ಕು ಕಟ್ಟ​ಡ​ಗ​ಳನ್ನು ಕಟ್ಟಿ​ದಾ​ಕ್ಷಣ ಜಿಲ್ಲೆ ಉದ್ಧಾರ ಆಗು​ವು​ದಿಲ್ಲ. ನಿಮ್ಮನ್ನು ನಂಬಿ ಮತ ನೀಡಿ​ದ​ವ​ರಿಗೆ ಹಾಗೂ ರೈತ​ರಿಗೆ ನ್ಯಾಯ ಒದ​ಗಿ​ಸು​ವಂತೆ ಕೇಳು​ತ್ತಿ​ದ್ದೇವೆ. ರೈತರು ಹಾಗೂ ಜನ​ಸಾ​ಮಾ​ನ್ಯ​ರಿಗೆ ತೊಂದರೆಯಾದ​ರೆ ಸುಮ್ಮನೆ ಕೂರು​ವು​ದಿಲ್ಲ ಎಂದು ಕುಮಾ​ರ​ಸ್ವಾಮಿ ವಿರುದ್ಧ ವಾಗ್ದಾಳಿ ನಡೆ​ಸಿ​ದ​ರು.

ಜನ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಶೇ​ಷಾದ್ರಿ (ಶ​ಶಿ) ಮಾತ​ನಾಡಿ, ಮಾಜಿ ಸಿಎಂ ಕುಮಾ​ರ​ಸ್ವಾಮಿ ಕ್ಷೇತ್ರದ ಜನರ ಭಾವನೆ ಜತೆ ಆಟ ಆಡು​ತ್ತಿ​ದ್ದಾರೆ. ಅವರ ಪಾಪದ ಕೊಡ ತುಂಬು​ತ್ತಿದೆ. ಪಶ್ಚಾ​ತ್ತಾಪ ಪಡುವ ದಿನ​ಗಳು ದೂರ ಉಳಿ​ದಿಲ್ಲ. ಜಿಲ್ಲೆ ಹಾಗೂ ಕ್ಷೇತ್ರದ ಜನರು ನಿಮ್ಮ ಡೋಂಗಿ​ತನ ಹಾಗೂ ಮೊಸಳೆ ಕಣ್ಣೀ​ರಿ​ನಿಂದ ಎಚ್ಚೆ​ತ್ತು​ಕೊಂಡಿ​ದ್ದಾರೆ ಎಂದು ಕಿಡಿ​ಕಾ​ರಿ​ದ​ರು.

ಪ್ರತಿ​ಭ​ಟ​ನೆಯಲ್ಲಿ ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.​ಲಿಂಗಪ್ಪ, ಜಿಪಂ ಅಧ್ಯಕ್ಷ ಎಚ್‌.ಎನ್‌.ಅ​ಶೋಕ್‌, ಮಾಜಿ ಅಧ್ಯಕ್ಷ ರಮೇಶ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗಂಗಾ​ಧರ್‌, ತಾಪಂ ಅಧ್ಯಕ್ಷ ಜಗ​ದೀಶ್‌, ಮಾಜಿ ಅಧ್ಯಕ್ಷರಾದ ಕಾಂತ​ರಾಜ್‌ ಪಟೇಲ್‌, ನಟ​ರಾಜ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಯು.ನರ​ಸಿಂಹಯ್ಯ, ಮುಖಂಡ​ರಾದ ವಿ.ಎಚ್‌.ರಾಜು, ಸಿಎನ್‌ಆರ್‌ ವೆಂಕ​ಟೇಶ್‌, ಚೇತನ್‌ ಗೌಡ, ಪಾರ್ವ​ತಮ್ಮ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಂಜು ಯರೇಹಳ್ಳಿ, ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ನಿಜಾಮುದ್ದೀನ್‌ ಷರೀಫ್‌ ಮತ್ತಿ​ತ​ರರು ಭಾಗ​ವ​ಹಿ​ಸಿ​ದ್ದ​ರು.

Follow Us:
Download App:
  • android
  • ios