ಹಾಸನ (ಸೆ.10):  ಕೊರೋನಾ ಭ್ರಷ್ಟಾಚಾರವನ್ನು ಮರೆಮಾಚಲು ರಾಜ್ಯ ಸರ್ಕಾರ ಡ್ರಗ್ಸ್‌ ದಂಧೆ ನಾಟಕವಾಡುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಆರೋಪಿಸಿದ್ದಾರೆ.

ಹಾಸನದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್‌ ದಂಧೆ ಈ ಹಿಂದಿನಿಂದಲೂ ಇದೆ. ಇದು ಹೊಸತೇನಲ್ಲ, ಇದು ಪೊಲೀಸರ ಗಮನಕ್ಕೆ ಬಂದಿರಲಿಲ್ಲವಾ ಎಂದು ಪ್ರಶ್ನಿಸಿದರು.

ನಟಿಯರ ಬಂಧಿಸಿ ಪ್ರಚಾರ:

ಡ್ರಗ್ಸ್‌ ಮಾಫಿಯಾ ಮಟ್ಟಹಾಕಲು ಪೊಲೀಸರು ಹಾಗೂ ಸರ್ಕಾರ ವಿಫಲವಾಗಿದೆ. ನಟಿಯರನ್ನು ಬಂಧಿ​ಸುವುದು ಮುಖ್ಯವಲ್ಲ, ಪ್ರಚಾರಕ್ಕಾಗಿ ನಟಿಯರನ್ನು ಬಂ​ಧಿಸಲಾಗಿದೆ. ಮೊದಲು ಡ್ರಗ್ಸ್‌ ಮಾಫಿಯಾದ ಕಿಂಗ್‌ಪಿನ್‌ಗಳನ್ನು ಬಂಧಿ​ಸಲಿ ಎಂದು ಸವಾಲು ಹಾಕಿದ ಸಂಸದರು, ಡ್ರಗ್ಸ್‌ ದಂಧೆಯಲ್ಲಿ ಪೊಲೀಸರು ಮತ್ತು ಅಧಿ​ಕಾರಿಗಳ ಮಕ್ಕಳೇ ಶಾಮೀಲಾಗಿದ್ದಾರೆ ಎಂದರು.

'ಬಿಜೆಪಿಗೆ ಸಡ್ಡು ಹೊಡೆಯಲು ಕಾಂಗ್ರೆಸಿಗರಿಗೆ ತರಬೇತಿ' ..

ನಟಿಯರನ್ನು ಬಂಧಿಸಿ ಸರ್ಕಾರ ಸಾಧನೆ ಮಾಡಿದೆ ಎಂದುಕೊಂಡಿದ್ದಾರೆ. ಇದರ ಹಿಂದೆ ರಾಜಕಾರಣಿಗಳ ಮಕ್ಕಳು ಇದ್ದಾರೆ. ತನಿಖಾ ಸಂದರ್ಭದಲ್ಲಿ ಬೇರೆಯವರ ಹೆಸರು ಹೇಳಿದ್ರು ಅದನ್ನು ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸಿದರು.