Asianet Suvarna News Asianet Suvarna News

'ಮೋದಿ ಸರ್ಕಾರದ ತಪ್ಪು ಆರ್ಥಿಕ ನಿರ್ಧಾರಗಳಿಂದ ನಿರುದ್ಯೋಗ'

ಯುವಕರನ್ನು ನಿರುದ್ಯೋಗದತ್ತ ತಳ್ಳಿದ ಕೇಂದ್ರ ಸರ್ಕಾರದ ನಿರ್ಧಾರಗಳು|ನೋಟು ಅಮಾನವೀಕರಣ ಸೇರಿದಂತೆ ಮೋದಿ ಸರ್ಕಾರದ ಮೂರು ನಿರ್ಧಾರಗಳು ಭಾರತ ದೇಶದ ಆರ್ಥಿಕತೆಯನ್ನು ಹಾಳುಗೆಡವಿದೆ| ದೇಶದ ಆರ್ಥಿಕ ಪರಿಸ್ಥಿತಿಯು ಲಾಕ್‌ಡೌನ್‌ ನಿಂದಾಗಿ ಸಂಪೂರ್ಣವಾಗಿ ಹದಗೆಟ್ಟಿದೆ| 

Congress Leader Ashok Mandali Talks Over PM Narendra Modi Governmentgrg
Author
Bengaluru, First Published Sep 17, 2020, 10:04 AM IST

ಮುಂಡರಗಿ(ಸೆ.17): ಕೇಂದ್ರದ ಬಿಜೆಪಿ ಸರ್ಕಾರದ ತಪ್ಪು ಆರ್ಥಿಕ ನಿರ್ಧಾರಗಳು ಯುವಕರನ್ನು ನಿರುದ್ಯೋಗದತ್ತ ತಳ್ಳಿವೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ದೂರಿದ್ದಾರೆ. 

ಮುಂಡರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರದ ತುಘಲಕ್‌ ನೀತಿಗಳಿಂದ ನಮ್ಮ ಭಾರತ ದೇಶದ ಆರ್ಥಿಕ ಪರಿಸ್ಥಿತಿ ಲಾಕ್‌ಡೌನ್‌ ಜಾರಿಯಾಗುವ ಮುನ್ನವೇ ಕುಸಿತಗೊಂಡಿತ್ತು. ಈ ದೇಶದ ಆರ್ಥಿಕ ಪರಿಸ್ಥಿತಿಯು ಲಾಕ್‌ಡೌನ್‌ ನಿಂದಾಗಿ ಸಂಪೂರ್ಣವಾಗಿ ಹದಗೆಟ್ಟಿದೆ. ಮಧ್ಯಮ ವರ್ಗದವರು ಬಡತನ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಸಚಿವರುಗಳು, ಸಂಸದರು ಈ ಪರಿಸ್ಥಿತಿಯನ್ನು ಯ್ಯಾಕ್ಟ್ ಆಫ್‌ ಗಾಡ್‌ ಎಂದು ಬಿಂಬಿಸುತ್ತಾರೆ. ಆದರೆ, ನಿಜಾಂಶ ಏನೆಂದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ತಪ್ಪು ಆರ್ಥಿಕ ನಿರ್ಧಾರಗಳು ಯುವಕರನ್ನು ನಿರುದ್ಯೋಗದ ಕಡೆಗೆ ತಳ್ಳಿದೆ.

2016 ರಲ್ಲಿ ನೋಟು ಅಮಾನವೀಕರಣ ಸೇರಿದಂತೆ ಮೋದಿ ಸರ್ಕಾರದ ಮೂರು ನಿರ್ಧಾರಗಳು ಭಾರತ ದೇಶದ ಆರ್ಥಿಕತೆಯನ್ನು ಹಾಳುಗೆಡವಿದೆ. ಮಾರ್ಚ 17 ರಂದು ರಾಹುಲ್‌ ಗಾಂಧಿ ಮತ್ತೆ ಆರ್ಥಿಕ ಸುನಾಮಿ ಬರಲಿದೆ ಅದನ್ನು ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದರು. ಆದರೆ, ಮೋದಿ ಸರ್ಕಾರ ಮಾಡಿದ್ದೇನು ? ಪೂರ್ವ ತಯಾರಿಯಿಲ್ಲದೆ ಪರಿಸ್ಥಿತಿಯನ್ನು ನಿಭಾಯಿಸುವ ಬದಲು ದೀಪ ಹಚ್ಚಿ, ಚಪ್ಪಾಳೆ ಹೊಡೆದು, ಗಂಟೆ ಬಾರಿಸಿ ಎಂದು ದೇಶದ ಜನರಿಗೆ ಕರೆ ಕೊಟ್ಟಿರಿ. ಇದರಿಂದ ರೋಗ ನಿಯಂತ್ರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

'ಕೊರೋನಾ ಹೆಸರಲ್ಲಿ ಯಡಿಯೂರಪ್ಪ ಸರ್ಕಾರ ಹಣ ಕೊಳ್ಳೆ ಹೊಡೆಯುತ್ತಿದೆ'

ವಿವಿಧ ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಕೊರೋನಾ ನಿಯಂತ್ರಣಕ್ಕೆ ಕೆಲಸ ಮಾಡಿದವು. ಆದರೆ, ನಮ್ಮ ದೇಶದಲ್ಲಿ ಸಮಸ್ಯೆ ಹೆಚ್ಚುತ್ತಾ ಹೋಯಿತು. ಬೇರೆ ದೇಶಗಳಲ್ಲಿ ಜನರಿಗೆ ಹಣ ಸಹಾಯ ಮಾಡಲಾಯಿತು. ಆದರೆ, ನಮ್ಮ ದೇಶದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಸತತವಾಗಿ ಏರಿಸಿ ಜನರ ಬಳಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಎಷ್ಟು ಸೂಕ್ತ ? ಎಂದು ಪ್ರಶ್ನಿಸಿದರು.

ಶಿರಹಟ್ಟಿ ವಿಧಾನಸಭಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿರೂಪಾಕ್ಷಿ ನಂದೆಣ್ಣವರ ಮಾತನಾಡಿ, ಸಿಎಂಇಇ ವರದಿಯ ಪ್ರಕಾರ ಅಗಸ್ವ್‌ 2020 ಕ್ಕೆ ಕರ್ನಾಟಕದಲ್ಲಿ ನಿರುದ್ಯೋಗ ದರ 29.08 ಏರಿಕೆಯಾಗುವ ಮೂಲಕ ರಾಷ್ಟ್ರೀಯ ನಿರುದ್ಯೋಗ ದರಕ್ಕಿಂತ ಹೆಚ್ಚಾಗಿದೆ. ಪ್ರದಾನಿಗಳು ಚುನಾವಣೆ ಪೂರ್ವದಲ್ಲಿ ಕೊಟ್ಟಮಾತಿನಂತೆ ಪ್ರತಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಲೋಕೇಶ ದೊಡ್ಡಮನಿ, ವಿರೇಶ ಬೆಟಗೇರಿ, ಸುರೇಶ ಉಪ್ಪಾರ, ರಾಮು ಭಜಂತ್ರಿ, ಯಲ್ಲಪ್ಪ ಹೂಲಗೇರಿ, ಶಂಬು ಕಾಳೆ, ಮಂಜುನಾಥ ಡಂಬಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
 

Follow Us:
Download App:
  • android
  • ios