ಕಾಂಗ್ರೆಸ್‌ ಜನರಿಗೆ ನೀಡುತ್ತಿರುವ ಗ್ಯಾರಂಟಿ ಕಾರ್ಡ್‌ಗೆ ಯಾವುದೇ ಮಾನ್ಯತೆ ಇಲ್ಲ. ಅದು ಕೇವಲ ಚುನಾವಣೆ, ರಾಜಕೀಯ ಗಿಮಿಕ್‌ ಆಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ದೂರಿದರು.

 ಶ್ರೀರಂಗಪಟ್ಟಣ : ಕಾಂಗ್ರೆಸ್‌ ಜನರಿಗೆ ನೀಡುತ್ತಿರುವ ಗ್ಯಾರಂಟಿ ಕಾರ್ಡ್‌ಗೆ ಯಾವುದೇ ಮಾನ್ಯತೆ ಇಲ್ಲ. ಅದು ಕೇವಲ ಚುನಾವಣೆ, ರಾಜಕೀಯ ಗಿಮಿಕ್‌ ಆಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ದೂರಿದರು.

ಪಟ್ಟಣ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕೆ.ಶೆಟ್ಟಹಳ್ಳಿ ಹೋಬಳಿ ಮಟ್ಟದ ಜೆಡಿಎಸ್‌ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ. ಜನರಿಗೆ ಪುಕ್ಕಟೆಯಾಗಿ ವಿವಿಧ ಸೌಲಭ್ಯ ನೀಡುವುದಾಗಿ ಆಮಿಷ ಒಡ್ಡಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇದು ಯಶಸ್ವಿಯಾಗುವುದಿಲ್ಲ ಎಂದರು.

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಸಾಮಾನ್ಯ ಹಾಗೂ ಬಡಜನರಿಗೆ ಶಾಶ್ವತವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಪಂಚರತ್ನ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ. ಬಡವರ್ಗಕ್ಕೆ ಉಚಿತ ಶಿಕ್ಷಣ, ಆರೋಗ್ಯ ಸೇವೆ, ರೈತರ ಅನುಕೂಲಕ್ಕಾಗಿ ರೈತ ಚೈತನ್ಯ, ಯುವ ಹಾಗೂ ಮಹಿಳಾ ಸಬಲೀಕರ ಹಾಗೂ ವಸತಿ ಆಸರೆ ಸೇರಿದಂತೆ 5 ಬಹುಮುಖ್ಯ ಯೋಜನೆ ರೂಪಿಸಲು ಮುಂದಾಗಿರುವುದು ಅವರ ದೂರದೃಷ್ಟಿಯ ಯೋಜನೆಗಳಾಗಿವೆ. ಹಾಗಾಗಿ ಕ್ಷೇತ್ರದ ಮತದಾರರು ಜೆಡಿಎಸ್‌ ಬೆಂಬಲಿಸುವಂತೆ ಮನವಿ ಮಾಡಿದರು.

ಕ್ಷೇತ್ರದಲ್ಲಿ ಒಂದೇ ಕುಟುಂಬದ ಮೂವರಿಗೆ 7 ಬಾರಿ ಕ್ಷೇತ್ರದ ಜನ ಶಾಸಕರಾಗಿ ಆಯ್ಕೆ ಮಾಡಿದರೂ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. 23ನೇ ಶತಮಾನದ ನನ್ನ ಅವಧಿಯಲ್ಲಿ ಚರಂಡಿ ಹಾಗೂ ರಸ್ತೆ ಇಂದಿಗೂ ಅಭಿವೃದ್ಧಿ ಪಡಿಸುತ್ತಿರುವುದು ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರ ಎಂದರು.

ಇಷ್ಟುವರ್ಷ ಅವರಿಗೆ ಅಧಿಕಾರ ಕೊಟ್ಟರು ಅಭಿವೃದ್ಧಿ ಮಾಡದೆ ಇದೀಗ ಜನರ ಬಳಿ ಕಣ್ಣೀರಿಟ್ಟು ಮತಯಾಚಿಸುವುದು ಅವರಿಗೆ ಶೋಭೆ ತರುವಂತದಲ್ಲ ಎಂದು ಮಾಜಿ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ವಿರುದ್ಧ ಗುಡುಗಿದರು.

ಮಾಜಿ ಶಾಸಕರು ಎಲ್ಲಾ ಅಧಿಕಾರಗಳನ್ನ ಅನುಭವಿಸಿ ಜೆಡಿಎಸ್‌ ವರಿಷ್ಠರ ನಂಬಿಕೆಗೆ ದ್ರೋಹ ಎಸಗಿ ಕಾಂಗ್ರೆಸ್‌ ಹೋಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಸೂಚಿಸಿದ್ದ ಅಭ್ಯರ್ಥಿ ವಿರುದ್ಧ ಚುನಾವಣೆ ಮಾಡಿ ಆ ಪಕ್ಷದಲ್ಲೂ ನಂಬಿಕೆ ಕಳೆದುಕೊಂಡಿರುವ ವ್ಯಕಿÜ್ತ. ಇಷ್ಟೆಲ್ಲ ದ್ರೋಹ ಬಗೆದಿರುವ ಮಾಜಿ ಶಾಸಕರು ಇದೀಗ ಮಕ್ಕಳಂತೆ ಅಳುತ್ತಾ ಮತಯಾಚಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದದರು.

ಕಾರ್ಯಕ್ರಮದಲ್ಲಿ ರೈತರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಯ್ಯ ಸೇರಿದಂತೆ ಕೆ.ಶೆಟ್ಟಹಳ್ಳಿ ಹೋಬಳಿಯ 200ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್‌, ಬಿಜೆಪಿ ಹಾಗೂ ರೈತ ಸಂಘ ತೊರೆದು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆ ಗೊಂಡರು.

ಈ ವೇಳೆ ಜೆಡಿಎಸ್‌ ತಾಲೂಕು ಅಧ್ಯಕ್ಷ ಪೈ.ಮುಕುಂದ, ಯುವ ಘಟಕ ಅಧ್ಯಕ್ಷ ಕಡತನಾಳು ಸಂಜಯ…, ಟಿಎಪಿಸಿಎಂಎಸ ಅಧ್ಯಕ್ಷ ದಿವಾಕನ್‌, ಕೆ.ಶೆಟ್ಟಹಳ್ಳಿ ಯತೀಶ್‌, ಬಾಬುರಾಯನಕೊಪ್ಪಲು ತಿಲಕ್‌, ನೆಲಮನೆ ದಯಾನಂದ್‌, ಪುರಸಭಾ ಸದಸ್ಯ ಎಸ್‌.ಪ್ರಕಾಶ್‌ ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಚುನಾವಣೆ ವೇಳೆ ಹಲವರು ಪಕ್ಷ ಬಿಟ್ಟು ಹೋಗುವುದು ಸಾಮಾನ್ಯ. ಪಕ್ಷ ಬಿಟ್ಟು ಹೋಗುವವರು ಭತ್ತದ ಜೊಳ್ಳಿನಂತೆ ಅದು ಗಾಳಿಗೆ ತೂರಿ ಹೋಗಲಿದ್ದು, ಭತ್ತ ಮಾತ್ರ ಚೀಲ ತುಂಬಲಿದೆ. ರೈತರು ತಮ್ಮ ನಾಟಿ ಸಮಯದಲ್ಲಿ ಉತ್ತಮ ಬಿತ್ತನೆ ಬೀಜ ಆಯ್ಕೆ ಮಾಡಿಕೊಳ್ಳುವ ಹಾಗೆ ಚುನಾವಣೆ ಹತ್ತಿರ ಇರುವಾಗ ಉತ್ತಮ ಇಳುವರಿ ನೀಡುವ ರಾಜಕರಣಿಗಳನ್ನು ಸಹ ಆಯ್ಕೆ ಮಾಡಿಕೊಳ್ಳಲಿದ್ದಾರೆ.

- ರವೀಂದ್ರ ಶ್ರೀಕಂಠಯ್ಯ, ಶಾಸಕ