ದಾವಣಗೆರೆ(ಸೆ.11): ಕಾಂಗ್ರೆಸ್ಸಿನ ಮಾಜಿ ಸಚಿವ ಡಿ.ಕೆ. ಶಿವಕುಮಾರ ಬಂಧನ ಹಿನ್ನೆಲೆ ಬೆಂಗಳೂರು ಬಂದ್‌ ಕರೆ ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆಯಾಗಿದೆ. ನ್ಯಾಯಾಂಗ ನಿಂದನೆಯಾದರೆ ಕೇಸ್‌ ಗ್ಯಾರಂಟಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು.

ಕರ್ನಾಟಕದಲ್ಲಿ ಮದ್ಯ ಖರೀದಿಗೆ ಆಧಾರ್‌ ಕಾರ್ಡ್‌ ಕಡ್ಡಾಯ?

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್‌, ಪ್ರತಿಭಟನೆಗಳು ನಡೆಯುವುದರಿಂದ ಅಮಾಯಕ ಕಾರ್ಯಕರ್ತರನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನವಾಗುತ್ತದೆ. ಡಿ.ಕೆ.ಶಿವಕುಮಾರ್‌ ಬಂಧನದ ಹಿಂದೆ ಬಿಜೆಪಿಯ ಕೈವಾಡವಿಲ್ಲ. ಕಾಂಗ್ರೆಸ್ಸಿನ ಕೆಲವರ ಕುತಂತ್ರವೇ ಡಿ.ಕೆ.ಶಿವಕುಮಾರ ಕೊರಳಿಗೆ ಉರುಳು ಸುತ್ತಿಕೊಳ್ಳುತ್ತಿದೆ ಎಂದು ಹೇಳಿದರು.

ಆಧಾರ್ ಸೇವೆ ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲೂ ಲಭ್ಯ..!

ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ ಹೊರಬಂದರೆ ನಾಯಕತ್ವ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ಸಿನ ಕೆಲ ಮುಖಂಡರು ಇಷ್ಟೆಲ್ಲಾ ರಾದ್ದಾಂತ ಮಾಡುತ್ತಿದ್ದಾರೆ. ಡಿಕೆಶಿ ಬಗ್ಗೆ ನಮಗೆ ಅನುಕಂಪವಿದೆ. ಆದಷ್ಟುಬೇಗನೆ ಅವರು ಹೊರಬರಬೇಕೆಂದು ಹಾರೈಸುತ್ತೇನೆಂದು ರೇಣುಕಾಚಾರ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.