ಶಕ್ತಿ ತೋರಿಸಿದ ಜಿಟಿಡಿ : ಕಾಂಗ್ರೆಸ್‌ಗೆ ಭರ್ಜರಿ ಗೆಲುವು

  • ಮೈಸೂರು ಪಾಲಿಕೆ 36ನೇ ವಾರ್ಡ್ ಉಪಚುನಾವಣೆ ಫಲಿತಾಂಶ ಪ್ರಕಟ
  • ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಭರ್ಜರಿ ಜಯ
Congress Candidate wins in mysuru 36th ward by poll snr

ಮೈಸೂರು (ಸೆ.06):  ಮೈಸೂರು ಪಾಲಿಕೆ 36ನೇ ವಾರ್ಡ್ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು,  ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಭರ್ಜರಿ ಜಯ ಸಾಧಿಸಿದ್ದಾರೆ. 

 

ಜೆಡಿಎಸ್ ಅಭ್ಯರ್ಥಿ, ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾಗಿದ್ದರಿಂದ ನಡೆದ ಉಪಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ.  ಚುನಾವಣೆಯಲ್ಲಿ ಜೆಡಿಎಸ್‌ಗೆ ಹೀನಾಯ ಸೋಲು ಎದುರಾಗಿದೆ. 

ಮೊಟ್ಟ ಮೊದಲ ಬಾರಿಗೆ ಕಮಲಕ್ಕೊಲಿದ ಮೈಸೂರು ಮೇಯರ್ ಪಟ್ಟ : BJP ತಂತ್ರಗಾರಿಕೆಗೆ ಸಕ್ಸಸ್

ಸಾರಾ.ಮಹೇಶ್ ಸೇರಿದಂತೆ ದಳಪತಿಗಳಿಗೆ ಮುಖಭಂಗವಾಗಿದೆ. ಈ ಮೂಲಕ ಕಾಂಗ್ರೆಸ್ ಸೇರುವ ಸಿದ್ಧತೆಯಲ್ಲಿರುವ ಜಿಡಿ ದೇವೇಗೌಡರ ಪ್ಲಾನ್  ವರ್ಕೌಟ್ ಆಗಿದೆ.  

ಕಳೆದ ಕೆಲ ದಿನಗಳ  ಹಿಂದಷ್ಟೆ ನಡೆದ ಮೇಯರ್ ಚುನಾವಣೆ ಸೇಡನ್ನು ಕಾಂಗ್ರೆಸ್ ತೀರಿಸಿಕೊಂಡಿದೆ. ಉಪ ಚುನಾವಣೆಯನ್ನ ಪ್ರತಿಷ್ಟೆಯಾಗಿ ಪರಿಗಣಿಸಿದ್ದ ಕಾಂಗ್ರೆಸ್‌ ಈಗ ಭರ್ಜರಿ ಜಯ ತನ್ನದಾಗಿಸಿಕೊಂಡಿದೆ.  ಜೆಡಿಎಸ್ ಬಿಡಲು ಸಿದ್ಧವಾಗುತ್ತಲೇ ದಳಪತಿಗಳ ಮುಂದೆ ಜಿಟಿಡಿ ತಮ್ಮ ಶಕ್ತಿ ತೋರಿಸಿದ್ದಾರೆ.

ಆಗಸ್ಟ್ 25 ರಂದು ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮೇಯರ್ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು.  ಮೈಸೂರು ಮಹಾನಗರ ಪಾಲಿಕೆಗೆ  23 ನೇ ಅವಧಿಗೆ 35 ನೇ ಮೇಯರ್ ಆಗಿ  ಸುನಂದಾ ಪಾಲನೇತ್ರ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದರು.

Latest Videos
Follow Us:
Download App:
  • android
  • ios