ತುಮಕೂರು (ಅ.15): ಶಿರಾ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಟಿ.ಬಿ.ಜಯಚಂದ್ರ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಬಳಿ 14 ಕೋಟಿ ರು. ಆಸ್ತಿ ಇದೆ ಎಂದು ಘೋಷಿಸಿದ್ದು, ತಮ್ಮ ಪತ್ನಿ ಜಿ.ಎಚ್‌.ನಿರ್ಮಲಾ ಹೆಸರಿನಲ್ಲಿ 8 ಕೋಟಿ ಆಸ್ತಿ ಎಂದು ನಮೂದಿಸಿದ್ದಾರೆ.

ಇನ್ನು ತಮ್ಮ ವಾರ್ಷಿಕ ಆದಾಯ 68,01,856 ಕೋಟಿ ರು. ಎಂದು ಹೇಳಿಕೊಂಡಿದ್ದಾರೆ. ಜಯಚಂದ್ರರ ಒಟ್ಟು ಚರಾಸ್ಥಿ 1.33 ಕೋಟಿ ರು., .13.10 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

ಬಿಜೆಪಿ ಅಭ್ಯರ್ಥಿ ಮುನಿರತ್ನ ಆಸ್ತಿ ಮೊತ್ತ ಎಷ್ಟಿದೆ..? ಕ್ರಿಮಿನಲ್ ಕೇಸು ಇದೆ ...  

ಬೆಂಗಳೂರಿನಲ್ಲಿ 13.10 ಕೋಟಿ ರು. ಮೌಲ್ಯದ ಎರಡು ಕಟ್ಟಡಗಳನ್ನು ಹೊಂದಿದ್ದಾರೆ. 1.47 ಕೋಟಿ ರು. ಸಾಲ ಹೊಂದಿದ್ದರೆ. ಜಯಚಂದ್ರ ಬಳಿ ಓಡಾಡಲು 39.35 ಲಕ್ಷ ರು. ಮೌಲ್ಯದ ಫಾರ್ಚೂನರ್‌ ಕಾರು ಇದೆ.