ಮಂಗಳೂರು [ಡಿ.11]: ಮೀನುಗಾರರು ಸಮುದ್ರ ಮೀನುಗಳನ್ನು ಹಿಡಿಯುವಾಗ ಇನ್ನು ಮುಂದೆ ಅತಿ ಚಿಕ್ಕ ಮೀನುಗಳನ್ನು ಹಿಡಿಯುವಂತಿಲ್ಲ. ಹಿಡಿಯಬಹುದಾದ ಮೀನಿನ ಗಾತ್ರವನ್ನು ಸರ್ಕಾರ ನಿಗದಿಗೊಳಿಸಿದೆ. ಅದಕ್ಕಿಂತ ಚಿಕ್ಕ ಮೀನು ಹಿಡಿದರೆ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ.

ಕಡಲ ಮಕ್ಕಳ ಕಂಗೆಡಿಸಿವೆ ಬಲೆಗೆ ಬಿದ್ದ ಕಾರ್ಗಿಲ್‌ ಮೀನು.

ಇತ್ತೀಚಿನ ದಿನಗಳಲ್ಲಿ ಮೀನುಗಾರಿಕೆಯಲ್ಲಿ ದೊರೆತ ಸಣ್ಣ ಮೀನುಗಳನ್ನು ಫಿಶ್ ಮಿಲ್ ಪ್ಲಾಂಟ್ ಅಥವಾ ಸುರುಮಿ ಘಟಕಗಳಿಗೆ ಕಚ್ಛಾ ವಸ್ತುವಾಗಿ ಉಪಯೋಗಿಸುತ್ತಿರುವುದು ಕಂಡುಬಂದಿದೆ. ಸಣ್ಣ ಮೀನುಗಳನ್ನು ಹಿಡಿಯುವುದರಿಂದ ಮುಂದೆ ಮೀನಿನ ಸಂಪತ್ತು ಹೆಚ್ಚಳಕ್ಕೆ ತೊಂದರೆಯಾಗಿ ಮೀನು ಉತ್ಪಾದನೆ ಕಡಿಮೆಯಾಗುವ ಅಪಾಯದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.  ಅಲ್ಲದೆ, ಮೀನಿನ ಕನಿಷ್ಠ ಕಾನೂನಾತ್ಮಕ ಗಾತ್ರವನ್ನು ಸರ್ಕಾರ ನಿಗದಿಗೊಳಿಸಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನಿಷ್ಠ ಗಾತ್ರ ಎಷ್ಟಿರಬೇಕು: ಬೂತಾಯಿ ಮೀನು-  10 ಸೆಂಟಿ ಮೀಟರ್, ಬಂಗುಡೆ- 14 ಸೆಂಟಿ ಮೀಟರ್, ಪಾಂಬೊಲ್- 46 ಸೆಂಟಿ ಮೀಟರ್, ಅಂಜಲ್- 50 ಸೆಂಟಿ ಮೀಟರ್, ಕೊಲ್ಲತರು- 7 ಸೆಂಟಿ ಮೀಟರ್, ಕಪ್ಪು ಮಾಂಜಿ- 17  ಸೆಂಟಿ ಮೀಟರ್, ಕೇದಾರ್- 31 ಸೆಂಟಿ ಮೀಟರ್, ಕಾಣೆ- 11.3 ಸೆಂಟಿ ಮೀಟರ್, ಬೊಳೆಂಜಿರ್- 8.9 ಸೆಂಟಿ ಮೀಟರ್, ಮದ್ಮಲ್- 12 ಸೆಂಟಿ ಮೀಟರ್, ಡಿಸ್ಕೋ- 17 ಸೆಂಟಿ ಮೀಟರ್, ಅಡೆ ಮೀನು- 10 ಸೆಂಟಿ ಮೀಟರ್, ನಂಗ್- 9 ಸೆಂಟಿ ಮೀಟರ್, ಬಿಳಿ ಮಾಂಜಿ- 13 ಸೆಂಟಿ ಮೀಟರ್, ಮುರು ಮೀನು- 14 ಸೆಂಟಿ ಮೀಟರ್, ಕಲ್ಲೂರು- 15 ಸೆಂಟಿ ಮೀಟರ್, ಕೊಡ್ಡಾಯಿ- 17  ಸೆಂಟಿ ಮೀಟರ್, ಡಿಎಂಎಲ್, ಕಪ್ಪೆ ಬಂಡಾಸ್- 11.0 ಸೆಂಟಿ ಮೀಟರ್ ಕನಿಷ್ಠ ಗಾತ್ರ ಇರಬೇಕು. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.