ಗಣಪತಿ ವಿಸರ್ಜನೆ ವೇಳೆ ವೈದ್ಯನ ಡ್ಯಾನ್ಸ್ : ಎದುರಾಯ್ತು ಸಂಕಷ್ಟ
ಗಣಪತಿ ವಿಸರ್ಜನೆ ವೇಳೆ ಕೊರೋನಾ ವಾರಿಯರ್ಸ್ ಆಗಿರುವ ವೈದ್ಯನೋರ್ವ ಕುಣಿದು ಕುಪ್ಪಳಿಸಿದ ಕಾರಣ ಇದೀಗ ವೈದ್ಯನಿಗೆ ಸಂಕಷ್ಟ ಎದುರಾಗಿದೆ.
ದಾಬಸ್‌ಪೇಟೆ (ಆ.28): ಕೊರೋನಾ ವಾರಿಯರ್ ಆಗಿರುವ ವೈದ್ಯರೊಬ್ಬರು ಗಣಪತಿ ವಿಸರ್ಜನೆ ಮಾಡುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ನೃತ್ಯ ಮಾಡಿರುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು ಇದೀಗ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಾಬಸ್‌ಪೇಟೆ ಪಟ್ಟಣದಲ್ಲಿರುವ ಆರೋಗ್ಯ ಭಾರತಿ ಆಸ್ಪತ್ರೆಯ ಸಂಸ್ಥಾಪಕ ಹಾಗೂ ವೈದ್ಯ ಡಾ.ಚಂದ್ರಶೇಖರ್ ಎಂಬವರು ಸೋಂಪುರ ಹೋಬಳಿಯ ನಿಡವಂದ ಗ್ರಾಮದಲ್ಲಿ ಆ.24ರಂದು ಗಣಪತಿಯನ್ನು ವಿಸರ್ಜನೆ ಮಾಡುತ್ತಿರುವ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಹಾಗೂ ಯುವಕರು ಇವರನ್ನು ಹೆಗಲ ಮೇಲೆ ಎತ್ತಿ ನೃತ್ಯ ಮಾಡಿಸಿದ್ದಾರೆ.
ಗಂಗಾವತಿ: ಮುಸ್ಲಿಮರ ಮನೆಯಲ್ಲೂ ವಿಘ್ನ ನಿವಾರಕ ಗಣೇಶನಿಗೆ ಭಕ್ತಿಯ ಪೂಜೆ..!...
ಇದನ್ನು 26ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಡಾ.ಚಂದ್ರಶೇಖರ್ ಸೇರಿದಂತೆ 27 ಜನರ ಮೇಲೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ಚಂದ್ರಶೇಖರ್ ಗ್ರಾಮಸ್ಥರು ಕಾರಿನಿಂದ ಬಲವಂತಾಗಿ ಇಳಿಸಿ ಹೆಗಲ ಮೇಲೆ ಎತ್ತಿಕೊಂಡು ಕುಣಿಸಿದರು ಎಂದು ತಿಳಿಸಿದ್ದಾರೆ.