ಗಂಗಾವತಿ(ಮೇ.30): ಲಾಕ್‌ಡೌನ್‌ ಉಲ್ಲಂಘಿಸಿ ಪ್ರವಾಸಿಗರಿಗೆ ರೆಸಾರ್ಟ್‌ನಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಕೊನೆಗೂ ರೆಸಾರ್ಟ್‌ ಮಾಲೀಕನ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೇ 25ರಂದು ತಾಲೂಕಿನ ಜಂಗಲಿ ರಾಂಪುರ ಗ್ರಾಮದಲ್ಲಿರುವ ಜಂಗಲ್‌ ಟ್ರೀ ರೆಸಾರ್ಟ್‌ನಲ್ಲಿ ಪ್ರವಾಸಿಗರಿಗೆ ಲಾಕ್‌ಡೌನ್‌ ಉಲ್ಲಂಘನೆ ಮಾಡಿ ಪ್ರವೇಶ ನೀಡಿದ್ದರು. ಇದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ರೆಸಾರ್ಟ್‌ ಮಾಲೀಕನ ವಿರುದ್ಧ ದೂರು ದಾಖಲಾಗದ ಕಾರಣ ಆಕ್ರೋಶ ವ್ಯಕ್ತವಾಗಿತ್ತು.

ಲಾಕ್‌ಡೌನ್ ಉಲ್ಲಂಘನೆ: ಅನಧಿಕೃತ ರೆಸಾರ್ಟ್‌ ಮಾಲೀಕರ ವಿರುದ್ಧ ದಾಖಲಾಗದ ಕೇಸ್‌

ಕೊನೆಗೂ ತಹಸೀಲ್ದಾರ್‌ ಚಂದ್ರಕಾಂತ್‌ ಅವರು ರೆಸಾರ್ಟ್‌ ಮಾಲೀಕ ಶಿವಸಾಗರ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ 269, 370 ಕಾಲಂ ಕಾಯ್ದೆ ಅನ್ವಯ ದೂರು ದಾಖಲಾಗಿದೆ.