ಮಾಲೂರು [ಡಿ.26]: ಪೂಜ್ಯ ಪೇಜಾವರ ಶ್ರೀಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವ ಹೇಳನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿ ಹಿಂದುಗಳನ್ನು ಅನಾವಶ್ಯಕವಾಗಿ ಉದ್ರಿಕ್ತ ಗೊಳಿಸುತ್ತಿರುವ ಸಮಾಜ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರ ಹಿಸಿ ಎ.ಕೆ.ಎಸ್.ವಿದ್ಯಾಮಾನ್ಯ ವಿದ್ಯಾ ಪೀಠ ದ ಸಂಸ್ಥಾಪಕ ಅಂಜನ್ ಕುಮಾರ ಶರ್ಮಾ ಸ್ಥಳೀಯ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲೋಕವಂದ್ಯರು ಆಗಿರುವ ಪೇಜಾವರ ಶ್ರೀ ಗಳು ಆಸ್ವತ್ರೆಯ ತೀವ್ರ ನಿಗಾ ಘಟಕದಲ್ಲಿ ರುವಾಗ ಕೆಲವು ಸಮಾಜ ಘಾತಕ ಶಕ್ತಿಗಳು ಅವರ ಸಾವನ್ನು ಹಾರೈಸುವ ಹಾಗೂ ಅವ ಹೇಳನ ಕಾರಿ ಹೇಳಿಕೆಗಳನ್ನು ಜಾಲತಾಣದಲ್ಲಿ ಹಾಕಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.  ಕಾನೂನು ಗೌರವಿಸುವ ಆಸ್ತಿಕ ಹಿಂದುಗಳಾದ ನಮಗೆ ಹಾಗೂ ನಮ್ಮ ಭಾವನೆಗಳಿಗ ತೀವ್ರ ಘಾಸಿಯುಂಟು ಮಾಡಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಗಾಗಲೇ ಸಿಎಎ ಕುರಿತ ತಪ್ಪು ಅಭಿ ಪ್ರಾಯಗಳಿಂದ ದೇಶದಲ್ಲಿ ಘಾತಕ ಶಕ್ತಿಗಳು ಮೇಲೈಸುತ್ತಿವೆ. ಇಂತಹ ಸಂದರ್ಭದಲ್ಲಿ ಇನ್ನಷ್ಟು ಕಿಚ್ಚು ಹತ್ತಿಸುವ ಸಲುವಾಗಿ ಸಮಾಜ ಘಾತಕ ಶಕ್ತಿಗಳು ಹಿಂದು ಧರ್ಮದ ಪ್ರತೀಕ ವಾಗಿರುವ ಪೂಜ್ಯರ ಮೇಲೆ ಅವಹೇಳನ ಕಾರಿ ಹೇಳಿಕೆಗಳನ್ನು ಹಾಕಿ ಸಮಾಜದ ಸ್ವಸ್ಥ ಕೆಡೆಸುತ್ತಿದ್ದಾರೆ ಎಂದು ಅಪಾದಿಸಿದರು.

ಜಾಲತಾಣಗಳಲ್ಲಿ ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿರುವವ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಂಡು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದು ಅಗ್ರಹಿಸಿದ್ದಾರೆ.