ಮಡಿಕೇರಿ [ಸೆ. 27]  ದಕ್ಷಿಣ ಕೊಡಗಿನ ಹುದಿಕೇರಿಯ ಪಟ್ಟಣದಲ್ಲಿ ಕಾಫಿ  ಮತ್ತು ಕಾಳುಮೆಣಸು ವ್ಯಾಪಾರಿ ಅಚ್ಚಿಯಂಡ ಎಸ್. ಸುನೀಲ್ (36)ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹುದಿಕೇರಿಯ ಮುಖ್ಯರಸ್ತೆಯಲ್ಲಿರುವ ಅವರ ಕಾಫಿ ಮಿಲ್  ಆವರಣದಲ್ಲಿರುವ ಕಚೇರಿಯಲ್ಲೇ  ತಮ್ಮ ರಿವಾಲ್ವರ್ ನಿಂದ ಗುಂಡು ಹೊಡೆದುಕೊಂಡು  ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಕೆಫೆ ಕಾಫಿ ಡೇ ಸಿದ್ದಾರ್ಥ್ ಸಾವಿನ ರಹಸ್ಯ

ಸುನಿಲ್ ಅವರು ಸುಮಾರು 10 ವರ್ಷದಿಂದ ವ್ಯಾಪಾರ ಮಾಡುತ್ತಿದ್ದರು. ಸುನೀಲ್  ಪತ್ನಿ,ಓರ್ವ ಪುತ್ರಿ,ಓರ್ವ ಪುತ್ರ ಇದ್ದಾರೆ.