Asianet Suvarna News Asianet Suvarna News

ಕೊಬ್ಬರಿ ಮಾರಾಟ ನೋಂದಣಿಗೆ ಚರ್ಚಿಸಲಾಗುವುದು: ಎಚ್.ಡಿ.ರೇವಣ್ಣ

ನಾಫೆಡ್ ಮೂಲಕ ಎಪಿಎಂಸಿ ಕೇಂದ್ರಗಳಲ್ಲಿ ಕೊಬ್ಬರಿ ಮಾರಾಟ ನೋಂದಣಿ ವಿಳಂಬ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಿದ್ದೇನೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ ಮುಖಂಡ ಎಚ್.ಡಿ.ರೇವಣ್ಣ ಹೇಳಿದರು. 

Coconut sales registration will be discussed by Says HD Revanna gvd
Author
First Published Jan 26, 2024, 8:19 PM IST

ಅರಸೀಕೆರೆ (ಜ.26): ನಾಫೆಡ್ ಮೂಲಕ ಎಪಿಎಂಸಿ ಕೇಂದ್ರಗಳಲ್ಲಿ ಕೊಬ್ಬರಿ ಮಾರಾಟ ನೋಂದಣಿ ವಿಳಂಬ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಿದ್ದೇನೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ ಮುಖಂಡ ಎಚ್.ಡಿ.ರೇವಣ್ಣ ಹೇಳಿದರು. ನಗರದ ರೈಲ್ವೆ ನಿಲ್ದಾಣದಿಂದ ಸಂಸದರು ಮತ್ತು ಜೆಡಿಎಸ್ ಶಾಸಕರ ನಿಯೋಗದೊಂದಿಗೆ ಮಂಗಳವಾರ ಹುಬ್ಬಳ್ಳಿಗೆ ತೆರಳುವ ಮುನ್ನ ಸುದ್ದಿಗಾರೊಂದಿಗೆ ಮಾತನಾಡಿದರು. ಲಭ್ಯವಿರುವ ಮಾಹಿತಿ ಅನುಸಾರ ಜ.೨೦ರಿಂದ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ ಅಧಿಕಾರಿಗಳು ಯಾವ ಕಾರಣದಿಂದ ಫೆ.೧ಕ್ಕೆ ಮುಂದೂಡಿದ್ದಾರೆ ಎಂಬುದು ತಿಳಿದಿಲ್ಲ. ಈ ಸಂಬಂಧ ಶೀಘ್ರವೇ ನೋಂದಣಿ ಆರಂಭಿಸಲು ಚರ್ಚಿಸಲಾಗುವುದು. ತೆಂಗು ಬೆಳೆಗಾರರು ಯಾವುದೇ ಕಾರಣಕ್ಕೂ ಅತಂಕಕ್ಕೆ ಒಳಗಾಗುವುದು ಬೇಡ ಎಂದರು.

‘ನನ್ನನ್ನೂ ಒಳಗೊಂಡಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಸಿಎಂ ಎಚ್ಡಿಕೆ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಜೆಡಿಎಸ್ ಶಾಸಕರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಬಂಧಿಸಿದ ಇಲಾಖೆಯ ಸಚಿವರನ್ನು ಭೇಟಿ ಮಾಡಿದ್ದರ ಫಲವಾಗಿ ತೆಂಗು ಬೆಳೆಗಾರರಿಗೆ ಅನುಕೂಲವಾಗಿದೆ. ನಮ್ಮ ಹೋರಾಟವನ್ನು ಮರೆಮಾಚುವ ನಾಟಕ ಆರಂಭಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು. ಶಾಸಕ ಸ್ವರೂಪ್ ಪ್ರಕಾಶ್, ಮುಖಂಡರಾದ ಶೇಖರನಾಯ್ಕ್, ಬಸವಲಿಂಗಪ್ಪ, ಸಿ.ಗಿರೀಶ್, ಜೆಡಿಎಸ್ ಮುಖಂಡರಾದ ಹೊಸೂರು ಗಂಗಾಧರ್, ಜಿಲ್ಲಾ ವಕ್ಫ್‌ ಬೋರ್ಡ್ ಅಧ್ಯಕ್ಷ ಸಿಕಂದರ್, ರಮೇಶ್ ನಾಯ್ಡು, ಪುಟ್ಟಸ್ವಾಮಿ, ಯೋಗೀಶ್, ಗಣೇಶ್, ಬಿ.ಜಿ.ನಿರಂಜನ್, ಕುಮಾರ್, ರಮೇಶ್, ಪವನ್, ಸುಮಿತ್ ಇದ್ದರು.

ಬಿಜೆಪಿ ಸೇರಿದ ಜಗದೀಶ್‌ ಶೆಟ್ಟರ್‌ಗೆ ಒಳ್ಳೆಯದಾಗಲಿ: ಸಚಿವ ಸತೀಶ್‌ ಜಾರಕಿಹೊಳಿ

ಕಾಂಕ್ರೀಟ್ ರಸ್ತೆ ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ: ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಗುಣಮಟ್ಟ ಕಾಯ್ದುಕೊಂಡು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲು ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ೬೦:೪೦ ರ ಅನುಪಾತದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿಗಳನ್ನು ನಿರ್ಮಾಣ ಮಾಡಲು ಸೂಚಿಸಿದರು.

ಜೆಜೆಎಂ ಕುಡಿಯುವ ನೀರು ಯೋಜನೆಯಡಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಬೇಕು. ಪೈಪ್‌ಲೈನ್ ಮಾಡಲು ತೆಗೆದಿರುವ ಗುಂಡಿಗಳನ್ನು ಕಡ್ಡಾಯವಾಗಿ ಗುತ್ತಿಗೆದಾರರು ಮುಚ್ಚಿದ ನಂತರ ಅವರಿಗೆ ಬಿಲ್ ಪಾವತಿಸಲು ತಿಳಿಸಿದರು. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತೆವಹಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಜೆಜೆಎಂ ಕುಡಿಯುವ ನೀರು ಯೋಜನೆಯಡಿ ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದಿಲ್ಲ. ಅಂತಹ ಗುತ್ತಿಗೆದಾರ ನೋಟಿಸ್ ನೀಡಿ ಪ್ರಕರಣ ದಾಖಲಿಸಿ ಎಂದು ಸೂಚಿಸಿದರು.

ರೈತರಿಗೆ ಕೂಡಲೇ ಪರಿಹಾರ ಹಣ ವಿತರಿಸಿ: ಸಚಿವ ಸತೀಶ್‌ ಜಾರಕಿಹೊಳಿ ಸೂಚನೆ

ಶಾಸಕ ಎಚ್ ಡಿ ರೇವಣ್ಣ ಮಾತನಾಡಿ, ಅನೇಕ ಕೆರೆಗಳು, ಸ್ಮಶಾನ, ಗೋಮಾಳದ ಜಾಗಗಳು ಒತ್ತುವರಿಯಾಗಿದ್ದು, ತೆರವುಗೊಳಿಸಲು ಕ್ರಮವಹಿಸುವಂತೆ ತಿಳಿಸಿದರು. ಪಿಎಂ ವೈಜಿಎಸ್ ಯೋಜನೆಯಡಿ ಕಾರ್ಯ ನಿವಹಿಸಲು ಸಿಬ್ಬಂದಿ ಕೊರತೆಯಿರುವುದನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿದರು. ಸಭೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಆರ್ ಪೂರ್ಣಿಮಾ, ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಹಾಜರಿದ್ದರು.

Follow Us:
Download App:
  • android
  • ios