ಕುಂದಾಪುರ(ಏ.08): ಕೊರೋನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಇದ್ದರೂ, ಇಲ್ಲಿನ ಕಾವಡಿ ಗ್ರಾಮದ ಹವರಾಲು ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆದಿದೆ.

ಈ ಬಗ್ಗೆ ಮಾಹಿತಿ ಪಡೆದ ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಮತ್ತು ಸಿಬ್ಬಂದಿ ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿದ್ದಾರೆ ಸ್ಥಳದಿಂದ ಬಂಧಿಸಿದ್ದು ಇಬ್ಬರು ಪರಾರಿಯಾಗಿದ್ದಾರೆ.

ಕೇರಳ ಸೋಂಕಿತರು ದಾಖಲಾದರೆ ಖಾಸಗಿ ಆಸ್ಪತ್ರೆಗಳಿಗೇ ಲಾಕ್‌ಡೌನ್‌ ಭೀತಿ!

ಬಂಧಿತರು ಸ್ಥಳೀಯ ನಿವಾಸಿ ಮಧುಕರ ಶೆಟ್ಟಿ, ಜಯರಾಮ ಶೆಟ್ಟಿ, ಪ್ರಶಾಂತ, ರಾಘವೇಂದ್ರ ಪೂಜಾರಿ ಕಾರ್ಕಡ, ಲೊಕೇಶ್‌ ನಾಯ್ಕ್ ಹೇರಾಡಿ, ಸುಧಾಕರ ಪೂಜಾರಿ ಕಾರ್ಕಡ, ಸುಕೇತ ನಾಯ್‌್ಕ ಎಂದು ಗುರುತಿಸಲಾಗಿದೆ. ಅವರಿಂದ ಜೂಜಿಗೆ ಕಟ್ಟಿದ್ದ 6,880 ರು. ನಗದು ಹಾಗೂ 1000 ರು. ಬೆಲೆಯ 2 ಕೋಳಿ ಮತ್ತು 8 ದ್ವಿಚಕ್ರ ವಾಹನಗಳನ್ನು ಜಪ್ತು ಮಾಡಲಾಗಿದೆ.