ಹಾಸಿಗೆ ಕೆಳಗೆ ಕಂಡು ಬಂದ ನಾಗರಹಾವಿನ ಮರಿ ಮೈಸೂರಿನ ಹೆಬ್ಬಾಳಿನ ಮನೆಯೊಂದರಲ್ಲಿ ಪತ್ತೆ ಸೂರ್ಯಕೀರ್ತಿ ಅವರಿಂದ ಹಾವಿನ ಮರಿ ರಕ್ಷಣೆ

ಮೈಸೂರು (ಮೇ.30): ಹಾಸಿಗೆ ಕೆಳಗೆ ನಾಗರ ಹಾವಿನ ಮರಿಯೊಂದು ಸೇರಿಕೊಂಡಿದ್ದು ಇದನ್ನು ಕಂಡ ದಂಪತಿ ಬೆಚ್ಚಿ ಬಿದ್ದಿದ್ದಾರೆ. 

ಮೈಸೂರು ನಗರದ ಹೆಬ್ಬಾಳಿನ 2ನೇ ಹಂತದ ಸಂಕ್ರಾಂತಿ ವೃತ್ತದ ಬಳಿ ಇರುವ ಸೋಮಸುಂದರಂ ಅವರ ಮನೆಯಲ್ಲಿ ಇ ಹಾವು ಪತ್ತೆಯಾಗಿದೆ. ಶನಿವಾರ ಬೆಳಗ್ಗೆ ಎದ್ದು ಯೋಗ ಮಾಡಿದ ನಂತರ ನೆಲದ ಮೇಲೆ ಹಾಕಲಾಗಿದ್ದ ಎರಡು ಹಾಸಿಗೆಯನ್ನು ಜೋಡಿಸುವಾಗ ಈ ನಾಗರಹಾವಿನ ಮರಿ ಪ್ರತ್ಯಕ್ಷವಾಗಿದೆ. 

ಹಾವು ಕಚ್ಚಿ ಮಹಿಳೆ ಸಾವು, ಹಾವು ಕೊಂದವರಿಗೂ ಕಚ್ಚಿದ ಮರಿಗಳು..! .

ರಾತ್ರಿ ಇಡೀ ಈ ಹಾವಿನ ಮರಿ ಹಾಸಿಗೆ ಕೆಳಗೆ ಸೇರಿಕೊಂಡಿದೆ. ಇದನ್ನು ಕಂಡ ಕೂಡಲೇ ಸೋಮಸುಂದರ್ ಅವರು ಉರಗ ತಜ್ಞ ಸ್ನೇಕ್ ಶಾಮ್ ಅವರ ಪುತ್ರ ಸೂರ್ಯಕಿರ್ತಿಗೆ ಕರೆ ಮಾಡಿ ವಿಷಯ ತಿಳಿಸಿದರು. 

ಕೂಡಲೆ ಸ್ಥಳಕ್ಕೆ ಆಗಮಿಸಿದ ಸೂರ್ಯಕೀರ್ತಿ ನಾಗರಹಾವಿನ ಮರಿಯನ್ನು ಸಂರಕ್ಷಿಸಿದರು.