ಮಂಡ್ಯ(ಆ.30): ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಜೀವನಾಡಿ ಕನ್ನಂಬಾಡಿಕಟ್ಟೆಈ ವರ್ಷ ಇದೇ ಮೊದಲ ಬಾರಿಗೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಗುರುವಾರ ಕಾವೇರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಶೇಷ ಪೂಜೆ ನೆರವೇರಿಸಿ, ಬಾಗಿನ ಸಮರ್ಪಿಸಿದರು.

2008ರಿಂದ ಸತತ ಮೂರು ವರ್ಷ ಮುಖ್ಯಮಂತ್ರಿಯಾಗಿ ಕೆ.ಆರ್‌.ಎಸ್‌.ನಲ್ಲಿ ಬಾಗಿನ ಸಲ್ಲಿಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈಗ 4ನೇ ಬಾರಿಗೆ ಬಾಗಿನ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಧ್ಯಾಹ್ನ 12.20ಕ್ಕೆ ಕೆ.ಆರ್‌.ಎಸ್‌.ಗೆ ಕಾಪ್ಟರ್‌ನಲ್ಲಿ ಬಂದಿಳಿದ ಯಡಿಯೂರಪ್ಪ, 12.48ರ ಸಮಯದಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿದರು.

ಪೂರ್ಣ ಕುಂಭ ಸ್ವಾಗತ: ಇದಕ್ಕೂ ಮೊದಲು ಕೆ.ಆರ್‌.ಎಸ್‌.ಹೆಲಿಪ್ಯಾಡ್‌ಗೆ ಕಾಪ್ಟರ್‌ನಲ್ಲಿ ಆಗಮಿಸಿದ ಯಡಿಯೂರಪ್ಪ, ಕಂದಾಯ ಸಚಿವ ಆರ್‌.ಅಶೋಕ್‌ ಅಲ್ಲಿಂದ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಜಲಾಶಯಕ್ಕೆ ಆಗಮಿಸಿದರು.

'ಅಕ್ಕ ಇಲ್ಲೇ ಬನ್ನಿ, ಕುಳಿತುಕೊಳ್ಳಿ'; ಸುಮಲತಾಗೆ ಕುರ್ಚಿ ಬಿಟ್ಟುಕೊಟ್ಟ ಶಾಸಕ

ಜಲಾಶಯದ ಪ್ರವೇಶದ್ವಾರದಲ್ಲಿ ಯಡಿಯೂರಪ್ಪ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬಾಗಿನ ಬಿಡುವ ಸ್ಥಳಕ್ಕೆ ಕರೆ ತರಲಾಯಿತು. ಸಂಸದೆ ಸುಮಲತಾ ಅಂಬರೀಷ್‌, ಮೈಸೂರು ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಶಾಸಕ ರವೀಂದ್ರ ಶ್ರೀಕಂಠಯ್ಯ, ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಉಪಸ್ಥಿತರಿದ್ದರು.