Asianet Suvarna News Asianet Suvarna News

ರಾಜಧಾನಿಯಲ್ಲಿ ವರುಣನ ಅರ್ಭಟ : ಅಲರ್ಟ್ ಆಗಿರಲು ಸಿಎಂ ಸೂಚನೆ

ಬೆಳಿಗ್ಗೆ ಯಿಂದ ಬಿಡುವು ಕೊಟ್ಟಿದ್ದ ಮಳೆರಾಯ ಇಂದು ಸಂಜೆ ಧಾರಾಕಾರವಾಗಿ ಸುರಿದಿದೆ. ನಿನ್ನೆ ರಾತ್ರಿ  51 ಮಿ ಲಿ ಮೀಟರ್ ನಿಂದ ದಾಖಲೆಯ 206 ಮಿ ಲಿ ಮೀಟರ್ ಮಳೆ ಯಾಗಿತ್ತು.  24 ಗಂಟೆಯೊಳಗೆ ಮತ್ತೆ ಮಳೆಯಾಗುವುದಾಗಿ ಹವಾಮಾನ ಇಲಾಖೆ ಸೂಚನೆ ನೀಡಿತ್ತು. 

CM Tweets To BBMP Commissioner to ensure necessary precautions to avert any mishap for rain
Author
Bengaluru, First Published Sep 24, 2018, 10:50 PM IST

ಬೆಂಗಳೂರು[ಸೆ.24]: ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಂಭವವಿರುವುದರಿಂದ ಮುಂಜಾಗ್ರತಾ ಕ್ರಮ ತೆಗೆದು ಕೊಳ್ಳುವಂತೆ ಬಿಬಿಎಂಪಿಗೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

'ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದು, ನಗರದ ತಗ್ಗು ಪ್ರದೇಶದಲ್ಲಿ ನೆಲೆಸಿರುವವರು ಅಪಾಯದ ಬಗ್ಗೆ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಬೆಳಿಗ್ಗೆ ಯಿಂದ ಬಿಡುವು ಕೊಟ್ಟಿದ್ದ ಮಳೆರಾಯ ಇಂದು ಸಂಜೆ ಧಾರಾಕಾರವಾಗಿ ಸುರಿದಿದೆ. ನಿನ್ನೆ ರಾತ್ರಿ  51 ಮಿಲಿ ಮೀಟರ್ ನಿಂದ ದಾಖಲೆಯ 206 ಮಿಲಿ ಮೀಟರ್ ಮಳೆ ಯಾಗಿತ್ತು.  24 ಗಂಟೆಯೊಳಗೆ ಮತ್ತೆ ಮಳೆಯಾಗುವುದಾಗಿ ಹವಾಮಾನ ಇಲಾಖೆ ಸೂಚನೆ ನೀಡಿತ್ತು. 

 

 

Follow Us:
Download App:
  • android
  • ios