ಮಾಜಿ ಶಾಸಕ ಜಯಣ್ಣ ನಿಧನ: ಆಪ್ತ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಳ್ಳೇಗಾಲಕ್ಕೆ ಬಂದಿದ್ದಾಗ ಜಯಣ್ಣ ನಿವಾಸಕ್ಕೆ ತೆರಳಿ ಶುಭ ಹಾರೈಸಿದ್ದರು. ಜಯಣ್ಣ ಅವರ ಅನುಗ್ರಹ ನಿಲಯದ ನಾಮಫಲಕ ಅನಾವರಣ ಮಾಡಿದ್ದರು. ಅಂತಿಮ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಾಗೂ ಜಯಣ್ಣ ಒಡನಾಟದ ನೆನಪುಗಳನ್ನು ಮೆಲುಕು ಹಾಕಿ ಆಪ್ತ ಗೆಳೆಯನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 

CM Siddaramaiah paid his last respects to former MLA Jayanna at Kollegal in Chamarajanagara grg

ಚಾಮರಾಜನಗರ(ಡಿ.11):  ಹೃದಯಾಘಾತದಿಂದ ನಿಧನರಾಗಿದ್ದ ತಮ್ಮ ಆಪ್ತ ಗೆಳೆಯ ಕೊಳ್ಳೇಗಾಲದ ಮಾಜಿ ಶಾಸಕ ಎಸ್. ಜಯಣ್ಣ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಬುಧವಾರ) ಅಂತಿಮ ನಮನ ಸಲ್ಲಿಸಿದ್ದಾರೆ.

ಕೊಳ್ಳೇಗಾಲಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಿದ್ದರಾಮಯ್ಯ, ಇಲ್ಲಿನ ಮಹದೇಶ್ವರ ಬಡಾವಣೆಯಲ್ಲಿರುವ ಜಯಣ್ಣ ನಿವಾಸಕ್ಕೆ ತೆರಳಿ ಅಜಯಣ್ಣ ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಚವಿರಿಸಿ ಅಂತಿಮ ಗೌರವ ಸಲ್ಲಿಸಿದರು. ಇದೇ ವೇಳೆ ಮೃತ ಜಯಣ್ಣ ಅವರಿಗೆ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಬರೀ ಬೀಗರಲ್ಲ ಡಿಕೆ-ಕೃಷ್ಣರದ್ದು ಅದನ್ನೂ ಮೀರಿದ ಸಂಬಂಧ! ಇದು ತಂದೆ-ಮಗನಂಥ ಗುರು-ಶಿಷ್ಯರ ಇಂಟ್ರೆಸ್ಟಿಂಗ್ ಕಥೆ!

ಮೃತರ ಗೌರವಾರ್ಥ  ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ನಾಳೆ ಜಯಣ್ಣ ಅವರ ಹೊಸಮನೆ ಗೃಹಪ್ರವೇಶ ಕಾರ್ಯಕ್ರಮ ಇತ್ತು ಆದರೆ ಗೃಹಪ್ರವೇಶಕ್ಕೂ ಮೊದಲೇ  ಜಯಣ್ಣ ವಿಧಿವಶರಾದರು. 

ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಳ್ಳೇಗಾಲಕ್ಕೆ ಬಂದಿದ್ದಾಗ ಜಯಣ್ಣ ನಿವಾಸಕ್ಕೆ ತೆರಳಿ ಶುಭ ಹಾರೈಸಿದ್ದರು. ಜಯಣ್ಣ ಅವರ ಅನುಗ್ರಹ ನಿಲಯದ ನಾಮಫಲಕ ಅನಾವರಣ ಮಾಡಿದ್ದರು. ಅಂತಿಮ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಾಗೂ ಜಯಣ್ಣ ಒಡನಾಟದ ನೆನಪುಗಳನ್ನು ಮೆಲುಕು ಹಾಕಿ ಆಪ್ತ ಗೆಳೆಯನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 

ತಮಗೂ  ಜಯಣ್ಣನಿಗೂ ದೀರ್ಘ ಕಾಲದ ಗೆಳೆತನವಿತ್ತು. ವಿದ್ಯಾರ್ಥಿ ದೆಸೆಯಿಂದಲೇ ಆತ್ಮೀಯ ಸಂಬಂಧವಿತ್ತು, ನನ್ನ ಯಾವುದೇ ತೀರ್ಮಾನಕ್ಕೂ ಜಯಣ್ಣ ಬದ್ದರಾಗುತ್ತಿದ್ದರು ಎಂದು ನೆನೆದರು. ರಾಜಕೀಯದಲ್ಲಿ ಜಯಣ್ಣ ಅಪರೂಪದ ವ್ಯಕ್ತಿಯಾಗಿದ್ದರು. ಸೌಮ್ಯ ಸ್ವಭಾವ, ನಂಬಿಕಸ್ಥ ಗೆಳೆಯರಾಗಿದ್ದರು, ಎರಡು ಬಾರಿ ಶಾಸಕರಾಗಿದ್ದರು ಅವರ ಅರ್ಹತೆಗೆ ತಕ್ಕಂತೆ ಸ್ಥಾನಮಾನ ಸಿಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ವಿಷಾದಿಸಿದರು. 

ರಾಜಕೀಯದಲ್ಲಿ ನನ್ನನ್ನೇ ಹಿಂಬಾಲಿಸಿದರು. ಎಷ್ಟೇ ಪ್ರಚೋದನೆ ಬಂದರೂ ಸಿದ್ದಾಂತ ಬಿಟ್ಟುಕೊಡುತ್ತಿರಲಿಲ್ಲ. ಯಾವುದೇ ಆಸೆ ಆಮಿಷಗಳಿಗೆ ಒಳಗಾದವರಲ್ಲ ಜಯಣ್ಣ ಒಬ್ಬ ಅಜಾತಶತ್ರು, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು ಜಯಣ್ಣರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದರು. 

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೂ ಆಗಿದ್ದ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಎಸ್. ಜಯಣ್ಣ ಹೃದಯಾಘಾತಕ್ಕೆ ಬಲಿಯಾಗಿದ್ದರು. 

ರಜನಿ, ಅಂಬಿ ಜೊತೆಯಲ್ಲಿದ್ರೂ ಆ ವಿಷಯ ಮಾತ್ರ ಎಸ್‌ಎಂ ಕೃಷ್ಣಗೆ ಗೊತ್ತಿತ್ತು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಕೊಳ್ಳೇಗಾಲದ ಮಾಜಿ ಶಾಸಕ ಎಸ್. ಜಯಣ್ಣ ಅವರಿಗೆ ಇದೀಗ ಪಕ್ಷದ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಜಯಣ್ಣ ಅವರು, ಇಂದು ಬೆಳಗ್ಗೆ ಮೈಸೂರಿನ ಕಡೆಗೆ ಕಾರಿನಲ್ಲಿ ಹೋಗುವಾಗ ದಿಢೀರ್ ಹೃದಯಾಘಾತ ಉಂಟಾಗಿದೆ. ಈ ವೇಳೆ ಹತ್ತಿರದ ಜನನಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸದರೂ ಮಾರ್ಗ ಮಧ್ಯದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.  ಈ ಘಟನೆ ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಬಳಿ ಸಂಭವಿಸಿದೆ. ಈಗಾಗಲೇ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರನ್ನು ಕಳೆದುಕೊಂದು ಆಘಾತಕ್ಕೆ ಒಳಗಾಗಿರುವ ಕರುನಾಡಿನ ಜನತೆಗೆ ಇದೀಗ ಮತ್ತೊಬ್ಬ ರಾಜಕೀಯ ನಾಯಕನ ಸಾವು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. 

ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಎಸ್. ಜಯಣ್ಣ ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಳೆದ 1999 ರಲ್ಲಿ ಜೆಡಿಎಸ್ ನಿಂದ ಹಾಗೂ 2013 ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಸ್. ಜಯಣ್ಣ ಅವರಿಗೆ ಅನಾರೋಗ್ಯದ ಹಿನ್ನಲೆ 2018ರಲ್ಲಿ ಟಿಕೆಟ್ ಕೊಟ್ಟಿರಲಿಲ್ಲ. ಆದರೆ, ಈ ಬಾರಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ಕಾರದಲ್ಲಿ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. 

Latest Videos
Follow Us:
Download App:
  • android
  • ios