ಬಾಗಲಕೋಟೆ ಜಿಲ್ಲೆಯ ಪ್ರವಾಹ ನಿರ್ವಹಣೆಗೆ ಹೆಚ್ಚಿನ ಮುತುವರ್ಜಿ ವಹಿಸಲು ಸಿಎಂ ಖಡಕ್ ಸೂಚನೆ
ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಜಿಲ್ಲೆಯ ನದಿಗಳ ಪ್ರವಾಹದಿಂದಾಗುವ ಜೀವಹಾನಿಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜು.26): ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಜಿಲ್ಲೆಯ ನದಿಗಳ ಪ್ರವಾಹದಿಂದಾಗುವ ಜೀವಹಾನಿಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಇಂದು ರಾಜ್ಯದ ಹವಾಮಾನ, ಮಳೆ-ಬೆಳೆ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆಗೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು ಕೃಷ್ಣಾ ತಟದಲ್ಲಿ ಈಗಾಗಲೇ ತಮಗೆ ಪ್ರವಾಹ ಸ್ಥಿತಿಗತಿ ಗೊತ್ತಿದೆ. ನದಿಗಳ ದಡ ಮೀರಿ ವಸತಿ ಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆ ಇರುತ್ತದೆ.
ಎಲ್ಲೆಲ್ಲಿ ನೀರು ನುಗ್ಗುತ್ತೆ ಅಂತ ನಿಮಗೆ ಈಗಾಗಲೇ ಗೊತ್ತಿರುತ್ತದೆ. ಪ್ರತಿ ವರ್ಷ ನೋಡಿದ್ದೀರಿ. ನೀರು ಹೆಚ್ಚಾಗುವ ಮೊದಲೇ ವಸತಿ ಪ್ರದೇಶಗಳ ಕಡೆ ಗಮನ ಕೊಡಲು ಬಾಗಲಕೋಟೆ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಇದು ಪ್ರತಿ ವರ್ಷ ಆಗುವ ಪ್ರಕರಣ ಆಗಿರೋದರಿಂದ ಎಲ್ಲ ರೀತಿಯ ಅನುಭವ ಇದೆ. ಅನುಭವ ಇಟ್ಕೊಂಡು ಕಚೇರಿಯಲ್ಲಿ ಕುಳಿತುಕೊಂಡರೆ ಆಗೋದಿಲ್ಲ. ತಹಸೀಲ್ದಾರ, ಪೋಲೀಸರು ಪೀಲ್ಡ್ ಗೆ ಹೋಗಬೇಕು. ನೀರು ಯಾವಾಗ ರಿಲೀಜ್ ಆಗುತ್ತದೆ. ಎಷ್ಟು ಗಂಟೆಗೆ ಎಷ್ಟು ಕಿಮೀ ನೀರು ಹರಿದು ಬರುತ್ತದೆ. ಎಲ್ಲ ಅನುಭವ ನಿಮ್ಮಬಳಿ ಇದೆ.
ಐದು ದಿನದಲ್ಲಿ ಕೆಆರ್‌ಎಸ್‌ಗೆ 10 ಅಡಿ ನೀರು: ರೈತರ ಮೊಗದಲ್ಲಿ ಮಂದಹಾಸ
ಆದ ಕಾರಣ ಯಾವುದೇ ರೀತಿಯ ಸಬೂಬು ಹೇಳದೇ ಹಾನಿಯಾಗುವದನ್ನು ತಪ್ಪಿಸುವ ಕೆಲಸವಾಗಬೇಕು ಎಂದರು. ಅಂಗನವಾಡಿ, ಶಾಲಾ ಕಟ್ಟಡ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಶಿಥಿಲಗೊಂಡಿರುವ ಬಗ್ಗೆ ಮೊದಲೇ ಗೊತ್ತಿರುತ್ತದೆ. ಯಾವ ಕಟ್ಟಡಗಳಲ್ಲಿ ಸೋರಿಕೆ ಆಗುತ್ತಿರುವ ಬಗ್ಗೆ ಗೊತ್ತಿರುತ್ತದೆ. ಅಂತಹ ಕಟ್ಟಡಗಳ ದುರಸ್ಥಿ, ಸ್ಥಳಾಂತರ, ರಿಪೇರಿಗೆ ಎನ್‍ಡಿಆರ್‍ಎಫ್ ಮುತ್ತು ಎಸ್‍ಡಿಆರ್‍ಎಪ್‍ದಲ್ಲಿ ಅವಕಾಶವಿದ್ದು, ದುರಸ್ಥಿಗಳಿಗೆ ಕ್ರಮವಹಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಬಿತ್ತನೆ ಮಾಡಿ ವಿಫಲವಾದಲ್ಲಿ ಪರ್ಯಾಯ ಬೆಳೆ ಬೆಳೆಯಲು ಬೀಜ, ಗೊಬ್ಬರ ಕೊರತೆಯಾಗದಂತೆ ಕೃಷಿ ಇಲಾಖೆ ವ್ಯವಸ್ಥೆ ಮಾಡಲು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ: ಶಾಸಕ ನಂಜೇಗೌಡ
ನೋಡಲ್ ಅಧಿಕಾರಿಗಳಿಗೆ ಡಿಸಿ ಖಡಕ್ ವಾರ್ನಿಂಗ್: ಇನ್ನು ವಿಡಿಯೋ ಸಂವಾದದ ಬಳಿಕ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮಾತನಾಡಿ ಜಿಲ್ಲೆಯ ತಾಲೂಕಾ ಆಡಳಿತ, ಗ್ರಾಮ ಪಂಚಾಯತ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ ರೂಮ್ ಪ್ರಾರಂಭಿಸಲು ಸೂಚಿಸಿದರು. ಪ್ರವಾಹ ನಿರ್ವಹಣೆಗೆ ನೇಮಿಸಲಾದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಬೇಕು. ಪ್ರವಾಹ ನಿರ್ವಹಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಸೋರಿಕೆಯಾಗುತ್ತಿರುವ ಶಾಲೆ, ಅಂಗನವಾಡಿ ಕೇಂದ್ರ, ಆಸ್ಪತ್ರೆಗಳ ಪಟ್ಟಿ ಮಾಡಿ ದುರಸ್ಥಿಗೆ ತುರ್ತು ಕ್ರಮವಹಿಸಲು ಸೂಚಿಸಿದರು. ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ ಸೇರಿದಂತೆ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.