ಬೆಳಗಾವಿ (ಡಿ.19): ಬಿಜೆಪಿ ಎಂದರೆ ಉಡುಪಿ ಹೋಟೆಲ್‌ ಇದ್ದಂಗೆ. ನಾವು ಅಲ್ಲಿಗೆ ಹೋಗಿ ಬಿರಿಯಾನಿ ಕೊಡಿ ಅಂತಾ ಕೇಳಿದರೆ ನಡೆಯುತ್ತಾ? ಅದೇ ರೀತಿ ಬಿಜೆಪಿ ನಾಯಕರದ್ದು ಕೇಶವ ಕೃಪಾ, ನಮ್ಮದು ಬಸವಕೃಪಾ. ನಮಗೂ ಬಿಜೆಪಿ ಜನಕ್ಕೂ ಆಗಿ ಬರುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

 ‘ಬೆಳಗಾವಿ ಲೋಕಸಭೆ ಚುನಾವಣೆಗೆ ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಬಿಜೆಪಿ ಟಿಕೆಟ್‌ ಕೊಡುವುದಿಲ್ಲ ಎಂಬ ಸಚಿವ ಈಶ್ವರಪ್ಪ ಹೇಳಿಕೆ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಉಡುಪಿ ಹೋಟೆಲ…ಗೆ ಹೋಗಿ ಚಾಫ್ಸ್‌, ಬಿರಿಯಾನಿ ಕೊಡಿ ಎಂದರೆ ಎಲ್ಲಿ ಸಿಗುತ್ತೆ? ಹೋಟೆಲ… ಹೆಸರೇ ಉಡುಪಿ ಹೋಟೆಲ್‌ ಇರಬೇಕಾದರೆ ಮಸಾಲೆ ದೋಸೆ, ಬೆಣ್ಣೆ, ಚಟ್ನಿ, ರೊಟ್ಟಿಸಿಗುತ್ತೆ. ಚಾಫ್ಸ್‌ ಬೇಕಾದ್ರೆ ನಿಯಾಜ್‌ಗೆ ಹೋಗಬೇಕು ಎಂದರು.

ಕಾಂಗ್ರೆಸ್ ಸಂಬಂಧವನ್ನೇ ಮುರಿದ್ಕೊಂಡು ಜೆಡಿಎಸ್‌ ಸೇರಲು ತೀರ್ಮಾನಿಸಿದ ಹಿರಿಯ ನಾಯಕ ..

ಕಾಂಗ್ರೆಸ್‌ ಮುಳುಗುತ್ತಿರುವ ಹಡಗು: ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಹೀಗಾಗಿ ನಾನು ಈ ಹಡಗನ್ನು ಹತ್ತುವುದಕ್ಕೆ ಹೋಗುತ್ತಿಲ್ಲ. ಈ ಹಡಗು ದಡ ಸೇರುತ್ತದೆಯೋ ಇಲ್ಲವೋ ಎಂದು ಸುಮ್ಮನೇ ದೂರದಿಂದಲೇ ನಿಂತು ನೋಡುತ್ತಿದ್ದೇನೆ ಎನ್ನುವ ಮೂಲಕ ಪಕ್ಷ ಬಿಡುವ ಸುಳಿವು ನೀಡಿದರು. ಜೆಡಿಎಸ್‌ ಪಕ್ಷ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಪ್ರಧಾನಿ ದೇವೇಗೌಡರ ಜತೆ ಮಾತನಾಡಿದ್ದೇನೆ. ಮುಂದೇನಾಗುತ್ತೋ ನೋಡೋಣ ಎಂದರು.