Asianet Suvarna News Asianet Suvarna News

ಸಿಎಂ ವಸತಿ ಯೋಜನೆಯಡಿ ಸೆ.7ಕ್ಕೆ 2 ಸಾವಿರ ಮನೆ ಹಸ್ತಾಂತರ: ಸಚಿವ ಸೋಮಣ್ಣ

ಸಿಎಂ ವಸತಿ ಯೋಜನೆಯಡಿ ಬೆಂಗಳೂರು  ನಗರದಲ್ಲಿ ಸೆ.7ಕ್ಕೆ  2 ಸಾವಿರ ಮನೆ ಹಸ್ತಾಂತರ ಮಾಡಲಾಗುವುದು. 46 ಸಾವಿರ ಮನೆಗಳು ವಿವಿಧ ಹಂತದಲ್ಲಿ ಪ್ರಗತಿ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

CM housing scheme 2000 houses to be handed over to poor  says  Minister v Somanna gow
Author
First Published Aug 30, 2022, 7:22 AM IST

ಬೆಂಗಳೂರು (ಆ.30): ನಗರದಲ್ಲಿ ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ನಿರ್ಮಿಸಿರುವ 1 ಲಕ್ಷ ಮನೆಗಳ ಪೈಕಿ ಎರಡು ಸಾವಿರ ಮನೆಗಳನ್ನು ಸೆ.7ರಂದು ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರಿಗೆ 493 ಎಕರೆ ಜಮೀನನ್ನು ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಹಸ್ತಾಂತರಿಸಲಾಗಿದೆ. 48 ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ 46 ಸಾವಿರ ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. 10 ಸಾವಿರ ಮನೆಗಳು ಚಾವಣಿ ಹಂತದಲ್ಲಿವೆ. 4700 ತಳಪಾಯದ ಹಂತದಲ್ಲಿವೆ. 13500 ಲಿಂಟ್‌್ಲ ಹಂತದಲ್ಲಿವೆ. ಎರಡು ಸಾವಿರ ಮನೆಗಳು ಪೂರ್ಣಗೊಂಡಿದ್ದು, ಸೆ.7ರಂದು ಸಾಂಕೇತಿಕವಾಗಿ ಹಸ್ತಾಂತರ ಮಾಡಲಿದ್ದೇವೆ. ಮುಖ್ಯಮಂತ್ರಿಗಳು ಮನೆಗಳನ್ನು ಹಸ್ತಾಂತರ ಮಾಡಲಿದ್ದಾರೆ. ಅವರು ನೀಡಿರುವ ಹಣ ಸೇರಿ ಸರ್ಕಾರ ಹಣ ಬಿಡುಗಡೆ ಮಾಡಿ ಕಟ್ಟಡಗಳನ್ನು ನಿರ್ಮಿಸಿ ಮನೆಗಳನ್ನು ಪಾರದರ್ಶಕವಾಗಿ ಮಾಡಲಾಗಿದೆ. ಈಗಾಗಲೇ 44,510 ಅರ್ಜಿಗಳನ್ನು ಸ್ವೀಕರಿಸಿದ್ದು, 6,499 ಅರ್ಜಿದಾರರು ತಾವು ಬಯಸಿದ ಮನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಒಂದು ಲಕ್ಷ ಬಹು ಮಹಡಿ ಬೆಂಗಳೂರು ವಸತಿ ಯೋಜನೆಯನ್ನು ಸಿದ್ದರಾಮಯ್ಯನವರ ಸರ್ಕಾರ ಘೋಷಣೆ ಮಾಡಿತ್ತು.

2018-19ನೇ ಸಾಲಿನಲ್ಲಿ 46,499 ಮನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ, 28,754 ಮನೆಗಳಿಗೆ ಎಲ್‌ಓಎ (ಅಧಿಕಾರ ಪತ್ರ) ನೀಡಿದ್ದು, ಗುತ್ತಿಗೆದಾರರೊಂದಿಗೆ ಕರಾರು ಮಾಡಿಕೊಳ್ಳಲಾಗಿತ್ತು. 1070 ಎಕರೆ ಜಮೀನು ನೀಡಲಾಗಿದೆ ಎನ್ನುತ್ತಾರೆ. ಆದರೆ, 1014 ಎಕರೆ ಕಾಗದದಲ್ಲಿ ಮಂಜೂರಾಗಿದ್ದು ಬಿಟ್ಟರೆ ಯಾವುದೇ ಜಮೀನು ವಾಸಕ್ಕೆ ಯೊಗ್ಯವಾಗಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ 553 ಎಕರೆ ಜಮೀನನ್ನು ವಶಕ್ಕೆ ಪಡೆದು, 168 ಎಕರೆ ಹೆಚ್ಚುವರಿ ಜಮೀನನ್ನು ಮಂಜೂರು ಮಾಡಲಾಗಿದೆ ಎಂದರು.

ದ.ಕ.ಜಿಲ್ಲೆಯಲ್ಲಿ 11, 000 ವಸತಿ ನಿವೇಶನಕ್ಕೆ ಆದೇಶ: ವಿ. ಸೋಮಣ್ಣ
ಕಡು ಬಡವರಿಗೆ, ಸೂರಿಲ್ಲದವರಿಗೆ ವಸತಿ ಮತ್ತು ನಿವೇಶನ ನೀಡುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ 15 ಲಕ್ಷ ಸೂರಿಲ್ಲದವರಿಗೆ ವಸತಿ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ದ.ಕ.ಜಿಲ್ಲೆಯಲ್ಲಿ 30, 000 ಮನವಿ ಬಂದಿದ್ದು 11, 000 ವಸತಿ ನಿವೇಶನಕ್ಕೆ ಆದೇಶ ನೀಡಲಾಗಿದೆ ಎಂದು ರಾಜ್ಯ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ವಿ. ಸೋಮಣ್ಣ ಹೇಳಿದರು.

ಮಾರ್ಚ್‌ನೊಳಗೆ 16 ಲಕ್ಷ ಮನೆ ಹಸ್ತಾಂತರ: ಸಚಿವ ಸೋಮಣ್ಣ

ಸುಮಾರು 10 ಕೋಟಿ ರು. ವೆಚ್ಚದಲ್ಲಿ ಮೂಲ್ಕಿ ತಾಲೂಕಿನ ಆಡಳಿತ ಸೌಧ ನಿರ್ಮಾಣವಾಗಲಿರುವ ಮೂಲ್ಕಿಯ ಕಾರ್ನಾಡು ಗೇರುಕಟ್ಟೆಬಳಿ ನಡೆದ ಮೂಲ್ಕಿ ತಾಲೂಕು ಆಡಳಿತ ಸೌಧದ ಶಿಲಾನ್ಯಾಸ ಹಾಗೂ ಮೂಡುಬಿದಿರೆ, ಮೂಲ್ಕಿ ಪ್ರವಾಸಿ ಮಂದಿರ ಮತ್ತು ಮೂಲ್ಕಿ- ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಸುಮಾರು 100 ಮಂದಿಗೆ ವಸತಿ ನಿರ್ಮಾಣದ ಆದೇಶ ಪತ್ರ ವಿತರಿಸಿ ಮಾತನಾಡಿದರು.

ಬಂಗಾರಪೇಟೆ: 5 ವರ್ಷದಿಂದ ಕುಂಟುತ್ತಿರುವ ಗುಂಪು ಮನೆ ನಿರ್ಮಾಣ

ಜನಪ್ರತಿನಿಧಿಗಳಿಗೆ ದೂರದರ್ಶಿತ್ವ, ಇಚ್ಚಾಶಕ್ತಿ ಜೊತೆಗೆ ಅಭಿವೃದ್ಧಿ ಕೃತಿಯಲ್ಲಿ ಇರಬೇಕು. ಉಮಾನಾಥ ಕೋಟ್ಯಾನ್‌ ಅವರು ಕೇವಲ ಒಂದುವರೆ ವರ್ಷದ ಅವಧಿಯಲ್ಲಿ ಮೂಲ್ಕಿ ಮತ್ತು ಮೂಡುಬಿದಿರೆ ತಾಲೂಕಿನಲ್ಲಿ ಆಡಳಿತ ಸೌಧ ನಿರ್ಮಾಣ ಜೊತೆಗೆ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದು ತನ್ನ ಕ್ಷೇತ್ರದ ಎರಡು ತಾಲೂಕುಗಳನ್ನು ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಹಂತದಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು.

Follow Us:
Download App:
  • android
  • ios