Asianet Suvarna News Asianet Suvarna News

ಸುವರ್ಣ ನ್ಯೂಸ್‌ ಬಿಗ್‌ 3 ಜೆಪಿ ಶೆಟ್ಟಿಗೆ ‘ಪ್ರೆಸ್‌ಕ್ಲಬ್‌ ವಾರ್ಷಿ​ಕ’ ಪ್ರಶ​ಸ್ತಿ​ ಗರಿ

ವೀರೇಂದ್ರ ಹೆಗ್ಗಡೆ ಅವ​ರಿಗೆ ‘ವರ್ಷದ ವ್ಯಕ್ತಿ’, ಕನ್ನಡ ನಿಘಂಟು​ ತಜ್ಞ ಜಿ.​ವೆಂಕ​ಟ​ಸು​ಬ್ಬಯ್ಯ ಅವ​ರಿಗೆ ‘ಯುಗದ ಸಾಧಕ’ ಪ್ರಶ​ಸ್ತಿ| ಸುವರ್ಣನ್ಯೂಸ್‌ ವಾಹಿನಿ ನಿರೂ​ಪಕ ಜಯ​ಪ್ರ​ಕಾಶ್‌ ಶೆಟ್ಟಿ, ಬೆಂ.ವಿವಿ ಕುಲಸಚಿವ ಡಾ.ಬಿ.ಕೆ.ರವಿ ಸೇರಿದಂತೆ 50 ಮಂದಿಗೆ ಸನ್ಮಾನ|

CM BS Yediyurappa Talks Over Media in Karnataka
Author
Bengaluru, First Published Jan 29, 2020, 10:12 AM IST

ಬೆಂಗ​ಳೂ​ರು(ಜ.29): ಮಾಧ್ಯಮ ರಂಗದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಪತ್ರಿಕಾ ಸಂಘಟನೆಗಳಲ್ಲಿ ವಿಘಟನೆ ಕಂಡು ಬರುತ್ತಿದೆ, ಅದಕ್ಕೆ ಅವಕಾಶ ಕೊಡದೇ ಎಲ್ಲರೂ ಒಗ್ಗಟ್ಟಾಗಿ ಮುಂದುವರೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಲಹೆ ನೀಡಿದ್ದಾರೆ. 

ಬೆಂಗ​ಳೂ​ರು ಪ್ರೆಸ್‌​ಕ್ಲಬ್‌ 50 ವರ್ಷ ಪೂರೈ​ಸಿದ ಹಿನ್ನೆಲೆಯಲ್ಲಿ ನಗ​ರದ ಅರ​ಮನೆ ಮೈದಾ​ನ​ದಲ್ಲಿ ಏರ್ಪ​ಡಿ​ಸಿದ್ದ ‘ವ​ರ್ಷದ ವ್ಯಕ್ತಿ, ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಸುವರ್ಣ ಮಹೋ​ತ್ಸವ’ದ ಸಮಾ​ರೋಪ ಸಮಾ​ರಂಭ​ದಲ್ಲಿ ಪುರ​ಸ್ಕೃ​ತ​ರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತ​ನಾಡಿ​ದರು.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾಧ್ಯ​ಮ​ಗಳು ಒಟ್ಟಾಗಿ ಶ್ರಮಿ​ಸಿ​ದರೆ ನಾಡಿನಲ್ಲಿ ಅಭಿ​ವೃದ್ಧಿ ಕೆಲಸಗಳು ಹೆಚ್ಚಾ​ಗು​ತ್ತ​ವೆ. ಸಂಘ​ಟಿ​ತ​ರಾ​ಗುವ ಮೂಲಕ ಇನ್ನಷ್ಟು ಸಾಧನೆ ಸಾಧ್ಯ ಎಂದರು. ಪತ್ರ​ಕ​ರ್ತರ ಒತ್ತಾ​ಯದ ಮೇರೆಗೆ 1969ರಲ್ಲಿ ಬೆಂಗ​ಳೂರು ಪ್ರೆಸ್‌​ಕ್ಲಬ್‌ ಸ್ಥಾಪಿಸ​ಲಾ​ಯಿ​ತು. ಅಂದಿ​ನಿಂದಲೂ ಮಾಹಿತಿ, ಮನ​ರಂಜನೆ ನೀಡುತ್ತಾ ಹಂತ ಹಂತ​ವಾಗಿ ಬೆಳೆ​ಯುತ್ತಾ ಬಂದಿ​ದೆ. ಪ್ರೆಸ್‌ಕ್ಲಬ್‌ನಿಂದ ಮುಂದಿನ ದಿನ​ಗ​ಳಲ್ಲಿ ಸಹ ಮತ್ತಷ್ಟು ಸಕಾ​ರಾ​ತ್ಮಕ ಚಟು​ವಟಿಕೆ​ಗಳು ನಡೆ​ಯಲಿ ಎಂದು ಆಶಿ​ಸಿ​ದ​ರು.
ರಾಜ್ಯ ಸರ್ಕಾ​ರ​ದಿಂದ ಪ್ರೆಸ್‌​ಕ್ಲಬ್‌ಗೆ ಸಹ​ಕಾರ ನೀಡು​ತ್ತಲೇ ಬಂದಿದ್ದು, ಮುಂದೆಯೂ ನೀಡಲಿದೆ. ಸರ್ಕಾರ ಹಾಗೂ ಪ್ರೆಸ್‌​ಕ್ಲ​ಬ್‌ ನಡು​ವಿನ ಬಾಂಧವ್ಯ ಹೀಗೆ ಮುಂದು​ವ​ರಿ​ಯಲಿದೆ ಎಂದು ಹೇಳಿ ಪ್ರಶಸ್ತಿ ಪುರ​ಸ್ಕೃ​ತ​ರನ್ನು ಅಭಿ​ನಂದಿ​ಸಿ​ದರು.

‘ವರ್ಷದ ವ್ಯಕ್ತಿ’ ನುಡಿ:

ಧರ್ಮ​ಸ್ಥಳದ ಧರ್ಮಾ​ಧಿ​ಕಾರಿ ಪದ್ಮಶ್ರೀ ಡಾ.ವೀರೇಂದ್ರ ಹೆಗ್ಗಡೆ ಮಾತ​ನಾಡಿ, ಸಬ​ಲೀ​ಕ​ರಣದಿಂದಾಗಿ ಗ್ರಾಮೀಣ ಭಾಗ​ದಲ್ಲಿ ಮಹಿ​ಳೆ​ಯರು, ಯುವ​ಕ​ರು ಕೂಡ ದೇಶದ ರಾಜ​ಕಾ​ರಣ, ಆರ್ಥಿ​ಕತೆ, ರಾಜ್ಯದ ಕಾನೂ​ನು​ಗಳ ಬಗ್ಗೆ ವಿಶ್ಲೇಷಿಸು​ತ್ತಿ​ದ್ದಾ​ರೆ. ​ನಗ​ರ​ದ​ಲ್ಲಷ್ಟೇ ಅಲ್ಲದೇ ಗ್ರಾಮೀಣ ಭಾಗ​ದಲ್ಲೂ ದೊಡ್ಡ ವಿಚಾ​ರ​ಗ​ಳು ಚರ್ಚೆ​ಯಾಗು​ತ್ತಿ​ವೆ. ಮಹಿ​ಳೆ​ಯರು, ಜನ​ಸಾ​ಮಾ​ನ್ಯರು ದೇಶದ ಕು​ರಿತು ಕುಳಿ​ತಲ್ಲೇ ಮಾಹಿತಿ ಪಡೆ​ಯು​ತ್ತಿ​ದ್ದಾರೆ. ಬುದ್ಧಿ​ವಂತ​ರು, ಜ್ಞಾನ​ವಂತರೂ ಆಗಿ​ದ್ದಾ​ರೆ. ಈ ಸಬ​ಲೀ​ಕ​ರ​ಣಕ್ಕೆ ಪತ್ರಿಕೆ, ಮಾಧ್ಯ​ಮ​ ಸಂಸ್ಥೆ​ಗಳು ಕಾರಣ ಎಂದರು.

ರಾಜ್ಯ ಸರ್ಕಾ​ರ ಮುಂದಿನ ಬಜೆ​ಟ್‌​ನಲ್ಲಿ ಕೃಷಿಗೆ ಹೆಚ್ಚಿನ ಪ್ರಾತಿ​ನಿಧ್ಯ ನೀಡಿ ರೈತರನ್ನು ಬೆಂಬ​ಲಿ​ಸ​ಬೇಕು. ಮುಖ್ಯ​ಮಂತ್ರಿ​ಗಳ ನೇತೃ​ತ್ವ​ದಲ್ಲಿ ಮುಂದಿನ ದಿನ​ಗ​ಳಲ್ಲಿ ರಾಜ್ಯ​ದಲ್ಲಿ ಮತ್ತಷ್ಟುಉತ್ತಮ ಕಾರ್ಯ​ಗ​ಳಾ​ಗಲಿ. ಆ ಮೂಲಕ ಕರ್ನಾ​ಟಕ ರಾಜ್ಯ ದೇಶ​ದಲ್ಲೇ ಪ್ರಥಮ ರಾಜ್ಯ​ವಾ​ಗ​ಬೇಕು ಎಂದು ಆಶಿ​ಸಿ​ದರು.

50 ಪತ್ರ​ಕ​ರ್ತರಿಗೆ ಪ್ರಶಸ್ತಿ ಪ್ರದಾ​ನ

ಧರ್ಮ​ಸ್ಥ​ಳದ ಧರ್ಮಾ​ಧಿ​ಕಾ​ರಿ​ಯಾಗಿ 50 ವರ್ಷ ಪೂರೈ​ಸಿರುವ ಡಾ. ವೀರೇಂದ್ರ ಹೆಗ್ಗಡೆ ಅವ​ರಿಗೆ ‘ವರ್ಷದ ವ್ಯಕ್ತಿ’ ಪ್ರಶ​ಸ್ತಿ ಮತ್ತು ಕನ್ನಡ ನಿಘಂಟು​ ತಜ್ಞ ಪ್ರೊ.ಜಿ.​ವೆಂಕ​ಟ​ಸು​ಬ್ಬಯ್ಯ ಅವ​ರಿಗೆ ‘ಯುಗದ ಸಾಧಕ’ ಪ್ರಶ​ಸ್ತಿಯನ್ನು ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ನೀಡಿ ಗೌರ​ವಿ​ಸಿ​ದರು.

‘ಪ್ರೆಸ್‌ಕ್ಲಬ್‌ ವಾರ್ಷಿ​ಕ’ ಪ್ರಶ​ಸ್ತಿ​ಯನ್ನು ಹಿರಿಯ ಪತ್ರ​ಕ​ರ್ತ​ರಾದ ಎಂ.ಸಿ​ದ್ಧ​ರಾಜು, ವಿಜಯವಾಣಿ ಸಂಪಾ​ದಕ ಕೆ.ಎನ್‌.ಚನ್ನೇ​ಗೌಡ, ಸುವರ್ಣ ನ್ಯೂಸ್‌ ವಾಹಿನಿ ನಿರೂ​ಪಕ ಜಯ​ಪ್ರ​ಕಾಶ್‌ ಶೆಟ್ಟಿ, ಇಮ್ರಾನ್‌ ಖುರೇಶಿ, ಜಿ.ಕೆ.ಸತ್ಯ, ಲಕ್ಷ್ಮಣ ಕೊಡಸೆ, ರವೀಂದ್ರ ಜಿ.ಭಟ್‌, ಕೆ.ಎಚ್‌.ಸಾವಿತ್ರಿ, ಹರಿಶ್ಚಂದ್ರ ಭಟ್‌, ಬಿ.ವಿ.ನಾಗರಾಜು, ಸುನಿಲ್‌ ಪ್ರಸಾದ್‌, ಅಬ್ದುಲ್‌ ಹಮೀದ್‌ ಎಂ., ಜೋಸೆಫ್‌ ಹೂವರ್‌, ಎನ್‌.ಎಸ್‌.ಶಂಕರ್‌, ಡಾ ಬಿ.ಕೆ.ರವಿ, ರು.ಬಸಪ್ಪ ಅವರಿಗೆ ನೀಡಲಾ​ಯಿ​ತು. ಐವತ್ತು ವರ್ಷದ ಸಂಭ್ರಮದ ಸ್ಮರ​ಣಾರ್ಥ 50 ಹಿರಿಯ ಪತ್ರ​ಕ​ರ್ತ​ರಿಗೆ ಗೌರವ ಪ್ರಶಸ್ತಿ ನೀಡಲಾ​ಯಿ​ತು.

ಸಮಾ​ರಂಭ​ದಲ್ಲಿ ಉಪ​ಮು​ಖ್ಯ​ಮಂತ್ರಿಗಳಾ​ದ ಡಾ.ಸಿ.ಎನ್‌.ಅಶ್ವ​ತ್ಥ​ನಾ​ರಾ​ಯಣ, ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯ​ದರ್ಶಿ ಬಿ.ವೈ.​ವಿ​ಜ​ಯೇಂದ್ರ, ಶಾಸಕ ಗೋವಿಂದ​ರಾಜು, ಮುಖ್ಯ​ಮಂತ್ರಿ ರಾಜ​ಕೀಯ ಕಾರ್ಯ​ದರ್ಶಿ ಶಂಕ​ರ್‌​ಗೌಡ ಪಾಟೀಲ್‌, ನಟ ಪುನೀ​ತ್‌​ ರಾ​ಜ್‌​ಕು​ಮಾ​ರ್‌, ಪ್ರೆಸ್‌​ಕ್ಲಬ್‌ ಅಧ್ಯಕ್ಷ ಸದಾ​ಶಿವಶೆಣೈ, ಪ್ರಧಾನ ಕಾರ್ಯ​ದರ್ಶಿ ಎಚ್‌.ವಿ.ಕಿ​ರಣ್‌, ಪದಾ​ಧಿ​ಕಾ​ರಿ​ಗಳು ಮತ್ತಿ​ತರು ಉಪ​ಸ್ಥಿ​ತ​ರಿ​ದ್ದರು.

‘ವರ್ಷದ ವ್ಯಕ್ತಿ’ ಮತ್ತು ‘ಯುಗದ ಸಾಧಕ’ ಪ್ರಶ​ಸ್ತಿಗೆ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಪ್ರೊ.ಜಿ ವೆಂಕ​ಟ​ಸು​ಬ್ಬಯ್ಯ ಅವರ ಆಯ್ಕೆಯಿಂದ ಆ ಪ್ರಶ​ಸ್ತಿ​ಗಳ ಮೌಲ್ಯ ಹೆಚ್ಚಾಗಿ​ದೆ ಎಂದು ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ತಿಳಿಸಿದ್ದಾರೆ. 
"

Follow Us:
Download App:
  • android
  • ios