ಹಾಸನ [ಫೆ.09] : ರಾಜ್ಯ ಬಿಜೆಪಿ ಸರ್ಕಾರ ಬೀಳುವ ಕನಸು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರಿಗೆ ಯಾಕೋ ಬಿತ್ತೋ ಗೊತ್ತಿಲ್ಲ. ಸಿಎಂ ಯಡಿಯೂರಪ್ಪನವರು ಮೂರು ವರ್ಷಗಳವರೆಗೆ ಮುಖ್ಯಮಂತ್ರಿ ಆಗಿರುವುದು ಖಚಿತ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಹಾಸನಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಕಾರಜೋಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಬರುವ ಮಾರ್ಚ್ 31 ರೊಳಗೆ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಂಕಷ್ಟ ಬಂದಾಗ ಬಿಎಸ್‌ವೈ ಜೊತೆಗಿರುವೆ ಎಂದ ಶಾಸಕ...
 
ಕಳೆದ ಆಗಸ್ಟ್‌ ಮತ್ತು ಆಕ್ಟೋಬರ್‌ನಲ್ಲಿ ಭಾರೀ ಮಳೆಯಿಂದ ಸಾವಿರಾರು ಕಿ.ಮೀ. ರಸ್ತೆ, ಚರಂಡಿ ಮತ್ತು ಮನೆ ಸೇರಿದಂತೆ ಜನರ ಆಸ್ತಿಪಾಸ್ತಿಗಳು ಆಪಾರ ಪ್ರಮಾಣದಲ್ಲಿ ಹಾನಿ ಯಾಗಿವೆ. ಅಧಿಕಾರಿಗಳು ಮನೆ, ರಸ್ತೆ ನಿರ್ಮಾಣ ಮತ್ತಿತತರ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕಿದೆ. ನೆರೆಯಿಂದ ರಾಜ್ಯಾದ್ಯಂತ 8 ಸಾವಿರ ಕೋಟಿ ರು. ನಷ್ಟವಾಗಿದೆ ಎಂದು ತಿಳಿಸಿದರು.

ಸಂಪುಟ ವಿಸ್ತರಣೆ ಬಳಿ ಸಮಸ್ಯೆಗಳು ಹೆಚ್ಚಾಗಿ ಸರ್ಕಾರ ಬೀಳುತ್ತದೆ ಎಂಬ ಪರಮೇಶ್‌ ಅವರ ಕನಸು ಕೇವಲ ಕನಸಾಗುತ್ತದೆ ಅಷ್ಟೇ.  ಸಂಪುಟ ವಿಸ್ತರಣೆ ಬಳಿಕ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಖಾತೆ ಹಂಚಿಕೆಯಲ್ಲಿಯೂ ಯಾವುದೇ ಗೊಂದಲಗಳು ಆಗುವುದಿಲ್ಲ ಎಂದು ಹೇಳಿದರು.