Asianet Suvarna News Asianet Suvarna News

ಅಕ್ರಮ ಕಟ್ಟಡಕ್ಕೆ ದುಪ್ಪಟ್ಟು ತೆರಿಗೆ: ಸಿಎಂ BSY ವಿಧೇಯಕ ಮಂಡನೆ

ಅಕ್ರಮ ಕಟ್ಟಡಗಳಿಗೆ ದುಪ್ಪಟ್ಟು ಆಸ್ತಿ ತೆರಿಗೆ | ವಿಧೇಯಕ ಮಂಡನೆ ನಕ್ಷೆ ಉಲ್ಲಂಘಿಸಿ ಕಟ್ಟಿರುವ ಕಟ್ಟಡಕ್ಕೂ ಹೆಚ್ಚು ತೆರಿಗೆ ವಿಧಾನಸಭೆಯಲ್ಲಿ ಮಂಡನೆ|ಬಿಬಿಎಂಪಿಗೆ ವಾರ್ಷಿಕ 400 ಕೋಟಿ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹದ ನಿರೀಕ್ಷೆ |

CM BS Yediyurappa Bill Proposed of Municipality of Karnataka in Vidhanasabhe Session
Author
Bengaluru, First Published Feb 19, 2020, 9:58 AM IST

ಬೆಂಗಳೂರು(ಫೆ.19): ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ನಿಯಮ (ಬೈಲಾ) ಹಾಗೂ ನಕ್ಷೆ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳಿಗೆ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ 2020 ಮಂಗಳವಾರ ವಿಧಾನಸಭೆಯಲ್ಲಿ ಮಂಡನೆಯಾಗಿದೆ. 

ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಸದನದಲ್ಲಿ ಈ ವಿಧೇಯಕ ಮಂಡಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಟ್ಟಡಗಳ ನಿರ್ಮಾಣವನ್ನು ನಿಯಂತ್ರಿಸುವ ದೃಷ್ಟಿಯಿಂದ ಈ ತಿದ್ದುಪಡಿ ವಿಧೇಯಕ ರಚಿಸಿ ಮಂಡಿಸಲಾಗಿದೆ. ಇದಕ್ಕೆ ಒಪ್ಪಿಗೆ ದೊರೆತರೆ ಅನುಮತಿ ಇಲ್ಲದೆ ಅಥವಾ ಕಟ್ಟಡ ನಿಯಮಾವಳಿ, ನಕ್ಷೆ ಉಲ್ಲಂಘಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳಿಗೆ ಪ್ರಸ್ತುತ ವಿಧಿಸಲಾಗುತ್ತಿರುವ ಆಸ್ತಿ ತೆರಿಗೆಯಷ್ಟೇ ಪ್ರಮಾಣದಲ್ಲಿ ಹೆಚ್ಚುವರಿ ದಂಡ ಬೀಳಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಿಯಮ ಉಲ್ಲಂಘನೆ ಸರಿಪಡಿಸುವವರೆಗೆ ಅಥವಾ ಕಟ್ಟಡ ತೆರವುಗೊಳಿಸುವವರೆಗೆ ಸಂಬಂಧಿಸಿದ  ಆಸ್ತಿದಾರರು ಪ್ರತೀ ವರ್ಷ ಪಾವತಿಸುತ್ತಿರುವ ಆಸ್ತಿ ತೆರಿಗೆಯಷ್ಟೇ ಹೆಚ್ಚುವರಿ ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಅಂದರೆ, ವಾರ್ಷಿಕ 10 ಸಾವಿರ ಆಸ್ತಿ ತೆರಿಗೆ ಕಟ್ಟುತ್ತಿದ್ದರೆ ಆ ಹತ್ತು ಸಾವಿರ ಜತೆಗೆ ಇನ್ನೂ ಹತ್ತು ಸಾವಿರ ರು.ಗಳನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.

400 ಕೋಟಿ ಹೆಚ್ಚು ಸಂಗ್ರಹ? 

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿಯಮಾವಳಿ, ನಕ್ಷೆ ಉಲ್ಲಂಘಿಸಿ ಕಟ್ಟಿರುವ ಸುಮಾರು 4 ಲಕ್ಷ ಆಸ್ತಿದಾರರಿದ್ದು, ಈ ವಿಧೇಯಕ ಅಂಗೀಕಾರಗೊಂಡು ಜಾರಿಯಾದರೆ ಆ ಆಸ್ತಿದಾರರು ದುಪ್ಪಟ್ಟು ತೆರಿಗೆ ಕಟ್ಟಡಬೇಕಾಗು ತ್ತದೆ. ಇದರಿಂದ ಬಿಬಿಎಂಪಿಗೆ ವಾರ್ಷಿಕ 400 ಕೋಟಿ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹದ ನಿರೀಕ್ಷೆ ಮಾಡಲಾಗಿದೆ. 

ಬಿಬಿಎಂಪಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯ 198 ವಾರ್ಡುಗಳಲ್ಲಿ ಒಟ್ಟು 3,98,006  ವಸತಿ ಹಾಗೂ ವಸತಿ ಯೇತರ ಕಟ್ಟಡಗಳನ್ನು ನಕ್ಷೆ, ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ. ಇವುಗಳ ಪೈಕಿ 3,62,831 ಕಟ್ಟಡಗಳು ವಾಸದ ಮನೆಗಳಾಗಿವೆ. 

16,760 ಕಟ್ಟಡಗಳು ವಾಣಿಜ್ಯ ಸೇರಿದಂತೆ ವಸತಿ ಯೇತರ ಕಟ್ಟಡಗಳಾಗಿವೆ. ಅಲ್ಲದೆ, 18,415 ಕಟ್ಟಡಗಳು ವಸತಿ ಹಾಗೂ ವಸತಿಯೇತರ ಎರಡೂ ರೀತಿಯ ಸೌಲಭ್ಯಗಳಿಂದ ಕೂಡಿದ ಕಟ್ಟಡಗಳಾಗಿವೆ. ಇವುಗಳಿಂದ ಒಟ್ಟಾರೆ 401 ಕೋಟಿಯಷ್ಟು ಹೆಚ್ಚುವರಿ ತೆರಿಗೆ ಸಂಗ್ರ ಹವಾಗುವ ನಿರೀಕ್ಷೆ ಮಾಡಲಾಗಿದೆ.
 

Follow Us:
Download App:
  • android
  • ios