ಹರಿಪ್ರಸಾದ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ: ಸಿಎಂ ಬೊಮ್ಮಾಯಿ
17 ಜನ ಶಾಸಕರು ಏನು ಮಾಡಿದ್ದರೋ ಅದನ್ನೇ ಹರಿಪ್ರಸಾದ್ ಅವರ ನಾಯಕರು ಮಾಡಿದ್ದಾರೆ. ಇದನ್ನು ಅವರಿಗೆ ಹೇಳಲು ಬಯಸುತ್ತೇನೆ: ಸಿಎಂ ಬೊಮ್ಮಾಯಿ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜ.19): ಚಿಕ್ಕಮಗಳೂರು ಹಬ್ಬದ ಅಂಗವಾಗಿ ನಿನ್ನೆ(ಬುಧವಾರ) ಸಂಜೆ ಆಯೋಜಿಸಿದ್ದ ಕಲಾ ಪ್ರಕಾರಗಳ ಭವ್ಯ ಮೆರವಣಿಗೆ ಸಾಕ್ಷತ್ ಮಲೆನಾಡು ದಕ್ಷಿಣ ಭಾರತದ ವೈಭವದ ಸಂಸ್ಕೃತಿಯ ವಿರಾಟ್ ಪ್ರದರ್ಶನ ಮಾಡಿತು. ವಿವಿಧ ಕಲಾಪ್ರಕಾರಗಳ ಪ್ರದರ್ಶನದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಲಾವಿದರ ಭಾಗವಹಿಸಿದ್ದ ಬೃಹತ್ ಮೆರವಣಿಗೆಯನ್ನು ನಗರದ ಟೌನ್ ಕ್ಯಾಂಟೀನ್ ಸಮೀಪ ಇಂಧನ ಸಚಿವ ಸುನಿಲ್ ಕುಮಾರ್ ಉದ್ಘಾಟಿಸಿದರು.
ಮೆರವಣಿಗೆಗೆ ಮೆರಗು ತಂದ ಸಾವಿರಾರು ಕಲಾವಿದರು:
ವೈವಿಧ್ಯಮಯ ಕಲಾ ಶ್ರೀಮಂತಿಕೆ ಹೊಂದಿದ್ದ ಬೃಹತ್ ಮೆರವಣಿಗೆ ನೋಡುವ ಕಣ್ಮನಗಳ ತಣಿಸಿತು. ಭಾರತೀಯ ಕಲಾ ಪ್ರಪಂಚದ ಪರಿಚಯ ಮಾಡುವ ವೇಷಭೂಷಣದ ವಿವಿಧ ಕಲಾವಿದರು ಭಾಗವಹಿಸಿದ್ದರು. ದಕ್ಷಿಣ ಕನ್ನಡದ ಆಳ್ವಾಸ್ ಸಂಸ್ಥೆಯ 3500 ಕ್ಕೂ ಹೆಚ್ಚು ಕಲಾವಿದರೂ ಮೆರವಣಿಗೆ ಪ್ರಮುಖ ಆಕರ್ಷಣೆ ಕೇಂದ್ರವಾಗಿದ್ದರು. ಸ್ಥಳೀಯ 25 ಶಾಲಾ ಕಾಲೇಜಿನ 3000 ವಿದ್ಯಾರ್ಥಿಗಳು ಸಾಂಸ್ಕತಿಕ ಕಲೆಗಳ ವೇಷಭೂಷಣ ಧರಿಸಿ ಗಮನ ಸೆಳೆದರು. 45 ವಿವಿಧ ವೇಷ ಭೂಷಣಗಳು, ಸ್ಥಳೀಯ 25 ಕಲಾ ತಂಡಗಳ ಕಲಾವಿದರ ವೈಭವದ ಮೆರವಣಿಗೆ ನೋಡಲು ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದರು. ದಾಸಯ್ಯ ವೇಷದಾರಿ, ಕೊಂಬು ಕಹಳೆ ಊದುವವರು,, ತಟ್ಟೆರಾಯ ವೇಷ ಧರಿಸಿದವರು ಮೆರವಣಿಗೆ ಅಂದ-ಚಂದ ಹೆಚ್ಚಿಸಿದ್ದರು. ಗೋರವ ಕುಣಿತ, ಡೊಳ್ಳು ಕುಣಿತ, ಸೋಮನ ಕುಣಿತ, ಬೇಡರ ಕುಣಿತ, ಹುಲಿ ವೇಷದಾರಿಗಳ ಕುಣಿತ ಯುವ ಜನರ ಮನ ಸೂರೆಗೊಂಡಿತು.ಕೇರಳದ ವಿವಿಧ ದೇವರ ವೇಷಗಳ ಕಲಾವಿದರು, ಶೃಂಗಾರ ಮೇಳ, ಬೃಹತ್ ಗಾತ್ರದ ಹುಲಿ, ಕೋಳಿ, ಸಿಂಹ,ಮೀನುಗಳ ಪ್ರತಿಕೃತಿಗಳು, ಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳದವು. ಘೋಟೋತ್ಗಜ ಹಾಗೂಊ ರೋಬೋಟ್ ವೇಷಧಾರಿಗಳ ಕಲಾವಿದರು ಹೆಚ್ಚು ಗಮನ ಸೆಳೆದರು.
Chikkamagaluru Utsava: ಕೆಸರುಗದ್ದೆ ಅಖಾಡದಲ್ಲಿ ಸ್ಪರ್ಧಾಳುಗಳೊಂದಿಗೆ ಓಡಿದ ಚಿಕ್ಕಮಗಳೂರು
ನಾಡ ದೇವಿಗೆ ಮುಖ್ಯಮಂತ್ರಿ ಪುಷ್ಪಾರ್ಚನೆ:
ನಾಡ ದೇವಿ ಭುವನೇಶ್ವರಿ ಭಾವಚಿತ್ರದೊಂದಿಗೆ ಟೌನ್ ಕ್ಯಾಂಟೀನ್ ಸಮೀಪ ಆರಂಭಗೊಂಡ ಬೃಹತ್ ಮೆರವಣಿಗೆ ಬೆಸ್ಕಾಂ ಕಚೇರಿ, ಬಸವನಹಳ್ಳಿ ರಸ್ತೆ ಮೂಲಕ ಹನುಮಂತಪ್ಪ ವೃತ್ತದಲ್ಲಿ ಸಮಾವೇಶಗೊಂಡಿತ್ತು.ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಹನುಮಂತಪ್ಪ ಸರ್ಕಲ್ ಬಳಿ ನಾಡ ದೇವಿ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆ ಮತ್ತಷ್ಟು ಕಳೆಗಟ್ಟುವಂತೆ ಮಾಡಿದರು.
ಹರಿಪ್ರಸಾದ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ: ಸಿಎಂ
ಹರಿಪ್ರಸಾದ್ ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ. ಅವರು ಸ್ವಲ್ಪ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತಮ್ಮನ್ನೇ ಮಾರಿಕೊಂಡ ಶಾಸಕರನ್ನು ಏನೆಂದು ಕರೆಯಬೇಕು ಎನ್ನುವ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಚಿಕ್ಕಮಗಳೂರು ಹಬ್ಬಕ್ಕೂ ಮುನ್ನ ಕಡೂರಿನ ಬೀರೂರಿನಲ್ಲಿ ನಡೆದ ಶಾಸಕ ಬೆಳ್ಳಿಪ್ರಕಾಶ್ ಮಗಳ ಮದುವೆ ಕಾರ್ಯಕ್ರಮದಲ್ಲಿಭಾಗವಹಿಸಿ ತದನಂತರ ಸುದ್ದಿಗಾರರೊಂದಿಗೆ ಬೀರೂರಿನಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, 17 ಜನ ಶಾಸಕರು ಏನು ಮಾಡಿದ್ದರೋ ಅದನ್ನೇ ಹರಿಪ್ರಸಾದ್ ಅವರ ನಾಯಕರು ಮಾಡಿದ್ದಾರೆ. ಇದನ್ನು ಅವರಿಗೆ ಹೇಳಲು ಬಯಸುತ್ತೇನೆ ಎಂದರು.ಈಗಿನ ಕಾಂಗ್ರೆಸ್ ನಾಯಕರು 2007 ರಲ್ಲಿ ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದರು. ನಂತರ ಕಾಂಗ್ರೆಸ್ ಸೇರಿ ಚುನಾವಣೆ ಗೆದ್ದಿದ್ದರು. ಹರಿಪ್ರಸಾದ್ ಅವರ ಮಾತು 17 ಜನರ ಶಾಸಕರಿಗೆ ಅನ್ವಯಿಸಿದರೆ ಅದು ಅವರ ನಾಯಕರಿಗೂ ಅನ್ವಯಿಸುತ್ತದೆ ಈ ಹಿನ್ನೆಲೆಯಲ್ಲಿ ಸ್ವಲ್ಪ ಯೋಚಿಸಿ ಮಾತನಾಡಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರತ್ತ ಬೊಟ್ಟು ಮಾಡಿದರು.