*  ರಾಜು ಪಾಟೀಲರ ಅಂತಿಮ ದರ್ಶನ ಪಡೆದ ಸಿಎಂ*  ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಆಗಮಿಸಿದ ಬೊಮ್ಮಾಯಿ*  ಫೇಸ್‌ಬುಕ್‌ನಲ್ಲಿ ತಮ್ಮ ನೋವು ತೋಡಿಕೊಂಡ ಸಿಎಂ  

ಹುಬ್ಬಳ್ಳಿ(ಸೆ.17): ಆತ್ಮೀಯ ಸ್ನೇಹಿತ ರಾಜು ಪಾಟೀಲ ನಿಧನರಾಗಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣೀರಾದರು. ಬೊಮ್ಮಾಯಿ ಅವರ ಆತ್ಮೀಯ ಸ್ನೇಹಿತ ರಾಜು ಪಾಟೀಲ ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದರು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಆಗಮಿಸಿದ ಮುಖ್ಯಮಂತ್ರಿ, ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿ ನೇರವಾಗಿ ರಾಜು ಪಾಟೀಲ ನಿವಾಸಕ್ಕೆ ತೆರಳಿದರು. ಸ್ನೇಹಿತನ ಪಾರ್ಥಿವ ಶರೀರದ ಮುಂದೆ ಕಣ್ಣೀರಾದರು. 

ಸಿಎಂ ಬೊಮ್ಮಾಯಿ ಸ್ನೇಹಿತ ರಾಜು ಪಾಟೀಲ್ ನಿಧನ

ಈ ಸಂಬಂಧ ಫೇಸ್‌ಬುಕ್‌ನಲ್ಲೂ ತಮ್ಮ ನೋವು ತೋಡಿಕೊಂಡಿರುವ ಬೊಮ್ಮಾಯಿ, ಸಹೋದರ ಸಂಬಂಧಿ ಹಾಗೂ ಆಪ್ತ ಸ್ನೇಹಿತ ರಾಜು ಪಾಟೀಲ್‌ಅವರು ನಿಧನರಾಗಿದ್ದು, ನಾನು ತುಂಬಾ ದುಃಖಿತನಾಗಿದ್ದೇನೆ. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಅಂದುಕೊಂಡಿರಲಿಲ್ಲ ಎಂದು ಬರೆದಿದ್ದಾರೆ. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಹಲವು ಗಣ್ಯರು ರಾಜು ಪಾಟೀಲರ ಅಂತಿಮ ದರ್ಶನ ಪಡೆದರು.