ನೀಲಕಂಠೇಶ್ವರ ದೇವಾಲಯದಲ್ಲಿರುವ ಮುರುಘಾಶ್ರೀ ಫೋಟೊ ತೆರವುಗೊಳಿಸಿ
- ದೇಗುಲದಲ್ಲಿನ ಮುರುಘಾಶ್ರೀ ಫೋಟೋ ತೆರವುಗೊಳಿಸಿ
- ಜಿಲ್ಲಾ ವೀರಶೈವ ಲಿಂಗಾಯಿತ ಮಹಾ ಸಭಾದಿಂದ ಅಪರ ಜಿಲ್ಲಾಧಿಕಾರಿಗೆ ಮನವಿ
ಚಿತ್ರದುರ್ಗ (ಅ.19) : ಶಿವಮೂರ್ತಿ ಮುರುಘಾ ಶರಣರು ನಾಡಿನ ಗಣ್ಯರ ಜೊತೆ ಇದ್ದ ಭಾವಚಿತ್ರ ಕಳವಾದ ಪ್ರಕರಣ ಇನ್ನೂ ಜೀವಂತವಿರುವಾಗಲೇ ಇಲ್ಲಿನ ನೀಲಕಂಠೇಶ್ವರ ದೇವಸ್ಥಾನದಲ್ಲಿರುವ ಮುರುಘಾಶ್ರೀ ಭಾವಚಿತ್ರ ತೆಗೆಯುವಂತೆ ಜಿಲ್ಲಾ ವೀರಶೈವ ಲಿಂಗಾಯಿತ ಮಹಾ ಸಭಾದ ವತಿಯಿಂದ ಮಂಗಳವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಹಿರಿತನ ಪರಿಗಣಿಸದ್ದಕ್ಕೆ ನೋವಿದೆ: ಹೆಬ್ಬಾಳ್ ಶ್ರೀ
ನೀಲಕಂಠೇಶ್ವರ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಮೊದಲಿಂದಲೂ ಮಹಿಳೆಯರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ದೇವಸ್ಥಾನದ ಗೋಡೆಯ ಮೇಲೆ ಮುರುಘಾಶ್ರೀ ಫೋಟೋ ನೇತು ಹಾಕಿರುವುದರಿಂದ ಮಹಿಳೆಯರಿಗೆ ಮುಜುಗರವಾಗುತ್ತಿದ್ದು ಬಹುತೇಕರು ದೇವಸ್ಥಾನಕ್ಕೆ ಬರುವುದು ಕೈ ಬಿಟ್ಟಿದ್ದಾರೆ. ಹಾಗಾಗಿ ಫೋಟೋಗಳನ್ನು ತೆರವು ಗೊಳಿಸುವಂತೆ ಮಹಾಸಭಾದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಇದೇ ವೇಳೆಗೆ ವೀರಶೈವ ಸಮಾಜದ ಅಧ್ಯಕ್ಷರಿಗೂ ಮನವಿ ಪತ್ರ ಸಲ್ಲಿಸಿ ಭಾವಚಿತ್ರ ತೆರವುಗೊಳಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಸಚಿನ್, ಬಾಳೆಕಾಯಿ ರಾಜು ಮನವಿ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು.
\ವೀರಶೈವರು ಮೌನವಿದ್ದರೆ ಮಠ ಕೈತಪ್ಪುವ ಸಾಧ್ಯತೆ
ಚಿತ್ರದುರ್ಗ: ಮುರುಘಾ ಶ್ರೀ ಪ್ರಕರಣದಿಂದ ಸಮಾಜ ತಲೆ ತಗ್ಗಿಸುವ ಸ್ಥಿತಿ ನಿರ್ಮಾಣವಾಗ್ದಿದ್ದು ಇಂತಹ ಸಂಕಷ್ಟಪರಿಸ್ಥಿತಿಯಲ್ಲಿ ಸಮಾಜ ಮೌನವಾಗಿದ್ದರೆ ವೀರಶೈವರಿಗೆ ಮಠ ಕೈತಪ್ಪುವ ಸಾಧ್ಯತೆ ಇದೆ ಎಂದು ಮಾಜಿ ಸಚಿವೆ ರಾಣಿ ಸತೀಶ್ ಆತಂಕ ವ್ಯಕ್ತಪಡಿಸಿದ್ದಾರೆ.
ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಬಳಿ ರಾಣಿ ಸತೀಶ್ ಮಾತನಾಡಿದ್ದಾರೆನ್ನಲಾದ ಆಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ ಮುರುಘಾಶ್ರೀ ಪೀಠ ತ್ಯಾಗಕ್ಕೆ ವೀರಶೈವ ಮಹಾಸಭಾ ಒತ್ತಡ ಹೇರಬೇಕು. ಎಂ.ಬಿ. ಪಾಟೀಲ…, ಈಶ್ವರ ಖಂಡ್ರೆ, ಶಾಮನೂರು ಶಂಕರಪ್ಪ ಅಂಥವರು ವಿರೋಧಿಸಬೇಕು ಎಂದಿದ್ದಾರೆ. ಮುಖ್ಯಮಂತ್ರಿಗಳು ತಡಮಾಡದೆ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ರಾಣಿ ಸತೀಶ್ ಆಗ್ರಹಿಸಿದ್ದಾರೆ.
2ನೇ ಪೋಕ್ಸೋ ಕೇಸಲ್ಲಿ ಮುರುಘಾಶ್ರೀಗೆ ಸಂಕಷ್ಟ: ಮೈಸೂರಿಗೆ ತೆರಳಿ ಇಬ್ಬರು ಸಂತ್ರಸ್ತರ ಹೇಳಿಕೆ ದಾಖಲಿಸಿದ ಪೊಲೀಸರು
ಬಸವಪ್ರಭು ಶ್ರೀ ನೇಮಕಕ್ಕೆ ತೀವ್ರಆಕ್ರೋಶ
ಜೈಲಲ್ಲಿ ಇದ್ದುಕೊಂಡೇ ಮುರುಘಾಮಠಕ್ಕೆ ಬಸವಪ್ರಭು ಸ್ವಾಮೀಜಿ ತಾತ್ಕಾಲಿಕವಾಗ ನಿಯೋಜನೆ ಮಾಡಿದ ಮುರುಘಾ ಶರಣರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾಜಿ ಸಚಿವ ಎಚ್.ಏಕಾಂತಯ್ಯ ಇಲ್ಲಿನ ಬಂದೀಖಾನೆಗೆ ಹೋಗಿ ಶರಣರ ಭೇಟಿಯಾಗಿ ಮಾತನಾಡಿಸುವ ಯತ್ನ ನಡೆಸಿದ್ದು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಇದೇ ವೇಳೆ ಬಸವಪ್ರಭು ಸ್ವಾಮೀಜಿ ನೇಮಕ ಹಾಗೂ ವಸ್ತ್ರಮಠಗೆ ಪವರ್ ಆಫ್ ಅಟಾರ್ನಿ ನೀಡಿದ ಬಗ್ಗೆ ದಾಖಲಾತಿ ಕೊಡುವಂತೆ ಜೈಲ್ ಸೂಪರಿಟೆಂಡೆಂಟ್‌ರಲ್ಲಿ ಏಕಾಂತಯ್ಯ ವಿನಂತಿಸಿದ್ದು ಅರ್ಜಿ ಸಲ್ಲಿಸುವಂತೆ ಸೂಚನೆ ಬಂದಿದೆ. ಮಂಗಳವಾರ ಬೆಳಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಮಹೇಶ್ ಈ ಸಂಬಂಧ ಜೈಲರ್‌ಗೆ ಪತ್ರ ನೀಡಿ ದಾಖಲಾತಿ ನೀಡಲು ಮನವಿ ಮಾಡಿದ್ದಾರೆ.