*   ಮೊಬೈಲ್‌ಗೆ ಕರೆ ಮಾಡಿದರೆ ಸಿಕ್ಕಿದ್ದು ಸಾವಿನ ಸುದ್ದಿ*   ಬಂಕರ್‌ನೊಳಗೆ ಕಣ್ಣೀರಿಡುತ್ತಿರುವ ನವೀನ್‌ ಸ್ನೇಹಿತರು*   ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಯುದ್ಧದ ಭೀಕರತೆ

ಹಾವೇರಿ(ಮಾ.02): ‘ರಾತ್ರಿ ಮಲಗಲು ತಡವಾದ್ದರಿಂದ ನಾವೆಲ್ಲ ಇನ್ನೂ ಎದ್ದಿರಲಿಲ್ಲ. ನಮಗೆಲ್ಲ ಏನಾದರೂ ತಿಂಡಿ ತರಲೆಂದು ಹೋಗಿದ್ದ ನವೀನ್‌ ವಾಪಸ್‌ ಬರಲೇ ಇಲ್ಲ. ನವೀನ್‌(Naveen) ನೋ ಮೋರ್‌ ಎಂಬ ಸುದ್ದಿ ಕೇಳಿ ಬರಸಿಡಿಲು ಬಡಿದಂತಾಗಿದೆ....’

ಉಕ್ರೇನ್‌ನ(Ukraine) ಖಾರ್ಕೀವ್‌ನಲ್ಲಿ ರಷ್ಯಾ(Russia) ನಡೆಸಿದ ಶೆಲ್‌ ದಾಳಿಯಿಂದ ಮೃತಪಟ್ಟಿರುವ(Death) ರಾಣಿಬೆನ್ನೂರು(Ranibennur) ತಾಲೂಕಿನ ಚಳಗೇರಿ ಗ್ರಾಮದ ವೈದ್ಯವಿದ್ಯಾರ್ಥಿ(Medical Student) ನವೀನ್‌ ಗ್ಯಾನಗೌಡ್ರ(22) ಸಹಪಾಠಿ ಚಳಗೇರಿ ಗ್ರಾಮದವರೇ ಆದ ಅಮಿತ್‌ ವೈಶ್ಯರ ಖಾರ್ಕೀವ್‌ನಿಂದಲೇ ಕಣ್ಣೀರಿಡುತ್ತ ಹೇಳಿದ ಮಾತಿದು.

ಉಕ್ರೇನ್‌ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು, ಸರ್ಕಾರದ ವಿರುದ್ಧ ಪೋಷಕರು ಆಕ್ರೋಶ

ನಿನ್ನೆ ರಾತ್ರಿ ನಾವೆಲ್ಲಾ ಮಲಗಲು ತಡವಾಗಿತ್ತು. ನೀರು, ಆಹಾರ(Food) ಏನೂ ಇರಲಿಲ್ಲ. ಅದಕ್ಕಾಗಿ ಬೆಳಗ್ಗೆ 6 ಗಂಟೆ ಸುಮಾರಿಗೆ ನವೀನ್‌ ಎದ್ದು ಏನಾದರೂ ಸ್ನ್ಯಾಕ್ಸ್‌ ತರಲು ನಮ್ಮ ಬಂಕರ್‌ನಿಂದ ಸುಮಾರು 50 ಮೀ. ದೂರದಲ್ಲಿರುವ ಸೂಪರ್‌ ಮಾರ್ಕೆಟ್‌ಗೆ ಹೋಗಿದ್ದ. ಬೆಳಗ್ಗೆ 7-30ರ ವೇಳೆಗೆ ಮೆಸೇಜ್‌ ಮಾಡಿ ಹಣ ಕಡಿಮೆಯಾಗಿದೆ, ಕಳುಹಿಸಿ ಎಂದು ಹೇಳಿದ್ದ. ನಾವು ಹಣ ವರ್ಗಾಯಿಸಿದ್ದೆವು. ಸೂಪರ್‌ ಮಾರ್ಕೆಟ್‌ನಲ್ಲಿ ರಶ್‌ ಇರುವುದರಿಂದ ತಡವಾಗಿರಬಹುದು ಎಂದುಕೊಂಡಿದ್ದೆವು. ಸುಮಾರು ಎರಡು ತಾಸು ಕಳೆದರೂ ಆತ ಬಾರದಿದ್ದರಿಂದ ಆತಂಕದಲ್ಲೇ ಆತನ ಮೊಬೈಲ್‌ಗೆ ಕರೆ ಮಾಡಿದೆವು. ಆದರೆ ನವೀನ್‌ ಮೊಬೈಲ್‌ ಕರೆ ಸ್ವೀಕರಿಸಲಿಲ್ಲ. ನಂತರ ಅಲ್ಲಿದ್ದ ಯಾರೋ ಕರೆ ಸ್ವೀಕರಿಸಿ ‘ನವೀನ್‌ ನೋ ಮೋರ್‌’ ಎಂದು ಹೇಳಿದರು. ಶೆಲ್‌ ದಾಳಿಗೆ ನವೀನ್‌ ಮೃತಪಟ್ಟಿರುವುದು ಆಗಲೇ ನಮಗೆ ಗೊತ್ತಾಯಿತು. ಇದನ್ನು ಕೇಳಿ ನಮಗೆ ಬರಸಿಡಿಲು ಎರಗಿದಂತಾಗಿದೆ ಎಂದು ಅಮಿತ್‌ ಉಮ್ಮಳಿಸುತ್ತಲೇ ತಿಳಿಸಿದರು.

ನವೀನ್‌ ನಮ್ಮೂರಿನವ ಮತ್ತು ನಮ್ಮ ರೂಂ ಮೇಟ್‌ ಆಗಿದ್ದ. ಓದಿನಲ್ಲೂ ಟಾಪರ್‌ ಆಗಿದ್ದ. ನಾವೆಲ್ಲ ಒಟ್ಟಿಗೆ ಭಾರತಕ್ಕೆ(India) ಹೋಗೋಣ, ನಮ್ಮ ಜೂನಿಯರ್‌ಗಳನ್ನೆಲ್ಲ ಸುರಕ್ಷಿತವಾಗಿ ಕರೆದೊಯ್ಯೋಣ ಎಂದು ನವೀನ್‌ ಹಾಗೂ ನಾವು ಮಾತನಾಡಿಕೊಂಡಿದ್ದೆವು. ಅದೇನು ಕೆಟ್ಟಗಳಿಗೆ ಬಂತೋ ಗೊತ್ತಿಲ್ಲ. ನವೀನ್‌ ನಮ್ಮನ್ನು ಬಿಟ್ಟು ಹೋಗಿದ್ದಾರೆ. ನಮಗೆ ಅಲ್ಲಿ ಏನಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ನಾವು ಹೊರಗೆ ಹೋಗುವ ಸ್ಥಿತಿಯಲ್ಲಿಲ್ಲ ಎಂದು ಅಮಿತ್‌ ವೈಶ್ಯರ ಆತಂಕದಲ್ಲೇ ಹೇಳಿದರು.

ನೆರವಿಗೆ ಬನ್ನಿ:

ನವೀನ್‌ ಹತ್ಯೆಯಿಂದಾಗಿ ಇಲ್ಲಿಂದ ನಾವು ಸುರಕ್ಷಿತವಾಗಿ ತವರು ನೆಲ ಭಾರತಕ್ಕೆ ವಾಪಸ್‌ ಬರುತ್ತೇವೆ ಎಂಬ ನಂಬಿಕೆಯೇ ಹೊರಟುಹೋಗಿದೆ. ಇಲ್ಲಿ ಯುದ್ಧದ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೊರಗೆ ಹೋಗುವ ಸ್ಥಿತಿಯಿಲ್ಲ. ನಾವೆಲ್ಲ ರೈಲಿನ ಮೂಲಕ ಗಡಿಯತ್ತ ಸಾಗಿ ಅಲ್ಲಿಂದ ಏರ್‌ಲಿಫ್ಟ್‌(Airlift) ಮೂಲಕ ಭಾರತಕ್ಕೆ ಮರಳಬೇಕು ಎಂದುಕೊಂಡಿದ್ದೆವು. ಆದರೆ, ಅಷ್ಟರಲ್ಲಾಗಲೇ ಈ ದುರ್ಘಟನೆ ನಡೆದಿದೆ. ಭಾರತ ಸರ್ಕಾರ(Government of India) ಆದಷ್ಟುಬೇಗ ನಮ್ಮನ್ನು ಇಲ್ಲಿಂದ ಕರೆಸಿಕೊಳ್ಳಬೇಕು. ನಮ್ಮ ನೆರವಿಗೆ ಬನ್ನಿ ಎಂದು ಅಮಿತ್‌ ವೈಶ್ಯರ ಭಾರತ ಸರ್ಕಾರಕ್ಕೆ ಮನವಿ ಮಾಡಿದರು.

Ukraine Crisis: ಅಮ್ಮ! ಭಯವಾಗುತ್ತಿದೆ....: ದಾಳಿಯ ನೈಜ ಚಿತ್ರಣ ಬಿಚ್ಚಿಟ್ಟ ರಷ್ಯಾ ಯೋಧ!

ಉಕ್ರೇನ್​ನಲ್ಲಿ ಮೃತಪಟ್ಟ ಕನ್ನಡಿಗ ನವೀನ್, ಸಾಂತ್ವನ ಹೇಳಿದ ಬೊಮ್ಮಾಯಿ, ಸಿದ್ದರಾಮಯ್ಯ

ರಷ್ಯಾ ನಡೆಸಿದ ದಾಳಿಗೆ ಉಕ್ರೇನ್‌ನಲ್ಲಿದ್ದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಸಾವನ್ನಪಿದ್ದಾರೆ. ವಿಷಯ ತಿಳಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೀನ್ ತಂದೆ ಶೇಖರಗೌಡ ಅವರಿಗೆ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದು, ಹಾವೇರಿ ಮೂಲದ ನವೀನ್ ಎಂಬಾತ ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ಬಲಿಯಾಗಿದ್ದಾನೆ ಎಂದು ತಿಳಿದು ತುಂಬಾ ದುಃಖವಾಗಿದೆ ಎಂದಿದ್ದಾರೆ.