Tumakuru: ಎರಡು ಬಣಗಳ ಗುದ್ದಾಟ, ಪಾಂಡುರಂಗ ಸ್ವಾಮಿ ದೇವರು ಅನಾಥ

ಎರಡು ಬಣದ ಗುದ್ದಾಟಕ್ಕೆ ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ಲಿಂಗಾಪುರ ಗ್ರಾಮದಲ್ಲಿನ ಶ್ರೀ ಪಾಂಡುರಂಗ ಸ್ವಾಮಿ ಅನಾಥವಾಗಿದೆ. 

clash between two communities in Tumakuru Panduranga Swamy temple gow

ವರದಿ : ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್  

ತುಮಕೂರು (ಜ.16): ಎರಡು ಬಣದ ಗುದ್ದಾಟಕ್ಕೆ ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ಲಿಂಗಾಪುರ ಗ್ರಾಮದಲ್ಲಿನ ಶ್ರೀ ಪಾಂಡುರಂಗ ಸ್ವಾಮಿ ಅನಾಥವಾಗಿದೆ. ಕಳೆದ ಮೂರು ವರ್ಷಗಳಿಂದಲೂ ಲಿಂಗಾಪುರ ಗ್ರಾಮದಲ್ಲಿ ದೇವಸ್ಥಾನದ ವಿಚಾರಕ್ಕೆ ಗಲಾಟೆ, ರಾಜೀ ಸಂಧಾನ ನಡೆಯುತ್ತಲೇ ಇತ್ತು. ಈ ವಿಷಯ ಕೋರ್ಟ್‌ನಲ್ಲೂ ಇದೆ. ಈ ನಡುವೆ ಸಂಕ್ರಾಂತಿ ಹಬ್ಬವಾದ ನಿನ್ನೆ ದೇವರ ಉತ್ಸವ ಹಾಗೂ ವಿಶೇಷ ಪೂಜೆ ಮಾಡಲು ಮೂಲ ಕಮಿಟಿ ಸದಸ್ಯರು ಮುಂದಾಗಿದ್ದಾರೆ. ಅದಕ್ಕೆ ನೂತನ ದೇವಸ್ಥಾನದ ಪ್ರಮುಖರು ಪ್ರತಿರೋಧ ಒಡ್ಡಿದ್ದಾರೆ.

ವಿಜಯಪುರ ಸಿದ್ದರಾಮೇಶ್ವರ ಜಾತ್ರೆ, ಮದುವೆಗಾಗಿ ಮುಗಿಬಿದ್ದು ಬಾಸಿಂಗ ಕಟ್ತಾರೆ ಯುವಕ

ಈಗಾಗ್ಲೇ ಗ್ರಾಮದಲ್ಲಿ ಎರಡು ಪಾಂಡುರಂಗಸ್ವಾಮಿ ದೇವಸ್ಥಾನವಿದೆ. ಒಂದು ಮೂಲ ಪಾಂಡುರಂಗ ದೇವಸ್ಥಾನವಿದ್ದರೆ,ಮತ್ತೊಂದ ಬಣದಿಂದ ಹೊಸ ಪಾಂಡುರಂಗ ದೇವಾಸ್ಥಾನ ನಿರ್ಮಾಣವಾಗಿದೆ. ನಿನ್ನೆ ಹಳೇ ಪಾಂಡುರಂಗ ದೇವಸ್ಥಾನದ ಬಣ ಉತ್ಸವ ಮಾಡಲು ತೆರಳಿದೆ, ಈ ವೇಳೆ ಹೊಸ ದೇವಸ್ಥಾನದ ಬಣ ಉತ್ಸವಕ್ಕೆ ಅಡ್ಡಿಪಡಿಸಿ  ನಮ್ಮ ದೇವರ ಉತ್ಸವ ನಡೆಯಬೇಕೆಂದು ಪಟ್ಟು ಹಿಡಿದಿದ್ದಾರೆ. ಇದ್ರಿಂದ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಉದ್ವಿಗಗೊಂಡಿದೆ.

Raichur: ಉಟಕನೂರು ಮರಿಬಸಲಿಂಗಸ್ವಾಮಿ ಜಾತ್ರೆ: ವರ್ಷಪೂರ್ತಿ ಕೂಡಿಟ್ಟ ಕಾಣಿಕೆ

ಈ ವಿಷಯ ತಾರಕ್ಕಕ್ಕೇರಿ ಇಡೀ ಊರಿನಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇಡೀ ಗ್ರಾಮದಲ್ಲಿ ಸೂಕ್ತ ಪೊಲೀಸ್  ಬಂದೋಬಸ್ತ್ ಮಾಡಲಾಗಿದ್ದು, ಮೂವರು ಸಬ್‌ ಇನ್ಸ್‌ಪೆಕ್ಟರ್, ಇಬ್ಬರು ಇನ್ಸ್‌ಪೆಕ್ಟರ್ ಹಾಗೂ ಒಬ್ಬರು ಡಿವೈಎಸ್‌ಪಿ ಸ್ಥಳದಲ್ಲೇ ಮೊಕ್ಕಂ ಹೂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಈ ನಡುವೆ, ಎರಡೂ ದೇವಸ್ಥಾನಗಳನ್ನ ಮುಜರಾಯಿಗೆ ಸೇರಿಸಿ ಅಂತ ಕೆಲ ಮಂದಿ ಪಟ್ಟು ಹಿಡಿದಿದ್ದಾರೆ.

Latest Videos
Follow Us:
Download App:
  • android
  • ios