ಕಲಬುರಗಿ ಶಾಸಕಿ ಫಾತೀಮಾ ಅಳಿಯಗೆ ಪೊಲೀಸ್ ಆಯುಕ್ತ ಥಳಿತ
* ನನ್ನ ಗುರುತು, ಪತ್ತೆ, ವಿಳಾಸ ಹೇಳಿದರೂ ಕೇಳದೆ ಮನಬಂದಂತೆ ಥಳಿತ
* ಈ ಘಟನೆಗೆ ತಾವಂತೂ ಕಾರಣರಲ್ಲ: ಕಮಿಷನರ್ ಸ್ಪಷ್ಟನೆ
* ಶಾಸಕಿ ಕನೀಜ್ ಫಾತೀಮಾ ಅಳಿಯ ಆದಿಲ್ ಸುಲೇಮಾನ್ ಸೇಠ್
ಕಲಬುರಗಿ(ಸೆ.03): ನಗರ ಪೊಲೀಸ್ ಕಮೀಷನರ್ ಡಾ. ವೈ.ಎಸ್.ರವಿಕುಮಾರ್ ಅವರೇ ಖುದ್ದು ತಮಗೆ ಮನಬಂದಂತೆ ಥಳಿಸಿದ್ದಾರೆ, ಬೂಟುಗಾಲಿನಿಂದ ಒದ್ದಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ಕನೀಜ್ ಫಾತೀಮಾ ಅಳಿಯ ಆದಿಲ್ ಸುಲೇಮಾನ್ ಸೇಠ್ ಆರೋಪಿಸಿದ್ದಾರೆ.
ಇಲ್ಲಿನ ಪಾಲಿಕೆ ಚುನಾವಣಾ ಪ್ರಚಾರ ಮುಗಿದಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ವಿವಾದಗಳೂ ಶುರುವಾಗಿವೆ. ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಿಲ್, ರಾತ್ರಿ ತಮ್ಮ ಅತ್ತೆ, ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾರನ್ನು ಮನೆಗೆ ಬಿಟ್ಟು ವಾಪಸ್ ಬರುವಾಗ ತಾವಿದ್ದಂತಹ ಕಾರು ತಡೆದಿರುವ ನಗರ ಪೊಲೀಸ್ ಕಮಿಷನರ್ ನೇತೃತ್ವದ ಪೊಲೀಸರ ತಂಡ ನನ್ನ ಗುರುತು, ಪತ್ತೆ, ವಿಳಾಸ ಹೇಳಿದರೂ ಕೇಳದೆ ಮನಬಂದಂತೆ ಥಳಿಸಿದೆ ಎಂದು ದೂರಿದ್ದಾರೆ.
ಕಲಬುರಗಿ: ಪಾಲಿಕೆ ಗದ್ದುಗೆಗಾಗಿ ಬಿಜೆಪಿ-ಕಾಂಗ್ರೆಸ್ ಹಣಾಹಣಿ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಮಿಷನರ್, ಈ ಘಟನೆಗೆ ತಾವಂತೂ ಕಾರಣರಲ್ಲ. ಈ ಹಲ್ಲೆ ಘಟನೆಗೆ ಯಾರು ಕಾರಣ? ಯಾರು ಮಾಡಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ ಎಂದಿದ್ದಾರೆ.