ಸಚಿವ ಚಲುವನಾರಾಯಣಸ್ವಾಮಿ ವಿರುದ್ಧ ದೂರು ಪ್ರಕರಣ: ಸಿಐಡಿ ತನಿಖೆ ಆರಂಭ
ಪೊಲೀಸರಿಂದ ಪ್ರಕರಣವನ್ನು ಹಸ್ತಾಂತರಿಸಿಕೊಂಡ ಬಳಿಕ ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್ ನೇತೃತ್ವದಲ್ಲಿ ಐದು ಅಧಿಕಾರಿಗಳ ತಂಡ ಜಂಟಿ ಕೃಷಿ ನಿರ್ದೇಶಕ ಅಶೋಕ್ ಸೇರಿದಂತೆ ಸಹಾಯಕ ಕೃಷಿ ನಿರ್ದೇಶಕರಿಂದ ಹೇಳಿಕೆ ಪಡೆದು ದಾಖಲಿಸಿಕೊಂಡರು.
ಮಂಡ್ಯ(ಆ.10): ಕೃಷಿ ಸಚಿವ ಚಲುವನಾರಾಯಣಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳು ರಾಜ್ಯ ಪಾಲರಿಗೆ ದೂರು ನೀಡಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸಿದರು.
ಪೊಲೀಸರಿಂದ ಪ್ರಕರಣವನ್ನು ಹಸ್ತಾಂತರಿಸಿಕೊಂಡ ಬಳಿಕ ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್ ನೇತೃತ್ವದಲ್ಲಿ ಐದು ಅಧಿಕಾರಿಗಳ ತಂಡ ಜಂಟಿ ಕೃಷಿ ನಿರ್ದೇಶಕ ಅಶೋಕ್ ಸೇರಿದಂತೆ ಸಹಾಯಕ ಕೃಷಿ ನಿರ್ದೇಶಕರಿಂದ ಹೇಳಿಕೆ ಪಡೆದು ದಾಖಲಿಸಿಕೊಂಡರು.
ಸಚಿವ ಚಲುವರಾಯ ವಿರುದ್ಧದ ಪತ್ರ ನಕಲಿ: ಸಿಎಂ ಸಿದ್ದರಾಮಯ್ಯ
ಎಲ್ಲರಿಂದ ಹೇಳಿಕೆ ಪಡೆದ ನಂತರ ಸಿಐಡಿ ಅಧಿಕಾರಿಗಳು ಮೈಸೂರಿನತ್ತ ತೆರಳಳಿದರು. ಮೈಸೂರಿನ ಸರಸ್ವತಿಪುರಂನ ಅಂಚೆ ಕಚೇರಿ ದೂರಿನ ಪ್ರತಿ ರಿಜಿಸ್ಟರ್ ಪೋಸ್ಟ್ ಆಗಿದ್ದು, ಆ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.