Asianet Suvarna News Asianet Suvarna News

ನ.13ಕ್ಕೆ ಚುಂಚನಕಟ್ಟೆಕಾವೇರಿ ಜಲಪಾತೋತ್ಸವ

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಕಾವೇರಿ ಜಲಪಾತೋತ್ಸವ ನ. 13 ರಂದು ಭಾನುವಾರ ನಡೆಯಲಿದೆ.

Chunchanakatte   cauvery waterfall festival on Nov 13
Author
First Published Nov 12, 2022, 5:22 AM IST

  ಕೆ.ಆರ್‌. ನಗರ ( ನ.12):  ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಕಾವೇರಿ ಜಲಪಾತೋತ್ಸವ ನ. 13 ರಂದು ಭಾನುವಾರ ನಡೆಯಲಿದೆ.

ಅಂದು ಸಂಜೆ ಇಲ್ಲಿನ ಶ್ರೀರಾಮ ದೇವಾಲಯದ  (Temple) ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೊಮಶೇಖರ್‌ ಉದ್ಘಾಟಿಸುವರು. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಭಾಗವಹಿಸುವರು. ಶಾಸಕ ಸಾ. ರಾ. ಮಹೇಶ್‌ ಅಧ್ಯಕ್ಷತೆ ವಹಿಸುವರು.

ಮುಖ್ಯಅತಿಥಿಗಳಾಗಿ ಸಂಸದರಾದ ಸುಮಲತಾ ಅಂಬರೀಶ್‌, (Sumalatha Ambareesh)  ಪ್ರತಾಪ್‌ ಸಿಂಹ, ವಿ. ಶ್ರೀನಿವಾಸಪ್ರಸಾದ್‌ ಪಾಲ್ಗೊಳ್ಳಲಿದ್ದು, ಅತಿಥಿಗಳಾಗಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಮತ್ತು ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಪಾಲ್ಗೊಳ್ಳುವರು.

ಕುಪ್ಪೆ ಗ್ರಾಪಂ ಅಧ್ಯಕ್ಷೆ ಗೌರಮ್ಮ ಮತ್ತು ಉಪಾಧ್ಯಕ್ಷೆ ಸವಿತಾ ಹಾಗೂ ಜಿಲ್ಲೆಯ ಅಧಿಕಾರಿ ವರ್ಗದವರು ಭಾಗವಹಿಸುವರು.

ಜಲಪಾತೋತ್ಸವದ ತಾರಾ ಆಕರ್ಷಣೆಯಾಗಿ ಚಿತ್ರ ನಟ ವಸಿಷ್ಠ ಸಿಂಹ ಮತ್ತು ನಾಯಕ ನಟಿ ಅದಿತಿ ಪ್ರಭುದೇವ್‌ ಹಾಗೂ ವಿಶೇಷ ಆಕರ್ಷಣೆಯಾಗಿ ರೆಮೋ ಚಿತ್ರ ತಂಡದವರು ಭಾಗವಹಿಸಿ ಮನರಂಜನೆ ನೀಡಲಿದ್ದಾರೆ. ಇವರ ಜತೆಗೆ ವೇದಿಕೆಯಲ್ಲಿ ಖ್ಯಾತ ಗಾಯಕ, ಗಾಯಕಿಯರು ತಮ್ಮ ಸಂಗೀತ ರಸದೌತಣದ ಉಣಬಡಿಸಿದ್ದು, ಕೊರೋನಾ ಸೋಂಕಿನ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ರದ್ದಾಗಿದ್ದ ಜಲಪಾತೋತ್ಸವ ಈ ಬಾರಿ ನಡೆಯುತ್ತಿದ್ದು, ಜನರಲ್ಲಿ ಕುತೂಹಲ ಉಂಟು ಮಾಡಿದೆ.

ಜಲಪಾತೋತ್ಸವ ನಡೆಯಲಿರುವ ಹಿನ್ನೆಲೆ ಚುಂಚನಕಟ್ಟೆಮುಖ್ಯ ವೃತ್ತ ದೇವಾಲಯದ ರಸ್ತೆ ಮತ್ತು ದೇವಾಲಯದ ಸುತ್ತಮುತ್ತ ವಿದ್ಯುತ್‌ ದೀಪಾಲಂಕಾರ ಮಾಡುತ್ತಿದ್ದು, ಇದರ ಜೊತೆಗೆ ವೇದಿಕೆ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ.

ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ

ನ. 13 ರಂದು ಭಾನುವಾರ ನಡೆಯಲಿರುವ ಒಂದು ದಿನದ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆ ಮತ್ತು ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ.

ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಇಲಾಖೆಯ ಯಾವ ಅಧಿಕಾರಿಗಳು ಸಿದ್ಧತೆಯಲ್ಲಿ ತೊಡಗಿಸಿಕೊಳ್ಳದೆ ನಿರ್ಲಕ್ಷ ತೋರುತ್ತಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಸಕ ಸಾ.ರಾ. ಮಹೇಶ್‌ ಅವರ ಪಾಲ್ಗೊಳ್ಳುವಿಕೆ ಮತ್ತು ಶ್ರಮವನ್ನು ಹೊರತುಪಡಿಸಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಮತ್ತು ಇತರ ಇಲಾಖೆಯ ಅಧಿಕಾರಿಗಳು ಜಲಪಾತೋತ್ಸವದ ಯಶಸ್ವಿಗೆ ಶ್ರಮಿಸದೆ ತರಾತುರಿಯ ಸಿದ್ಧತೆಯಲ್ಲಿ ತೊಡಗಿವೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಶುಕ್ರವಾರ ಮುದ್ರಿಸಲಾಗಿದ್ದು, ಸಮರ್ಪಕ ವಿತರಣೆ ಆಗಿಲ್ಲ ಜೊತೆಗೆ ಇಲಾಖೆಯ ಅಧಿಕಾರಿಗಳು ಪತ್ರಿಕಾ ಹೇಳಿಕೆಯನ್ನು ನೀಡಿ ಜಲಪಾತೋತ್ಸವ ನಡೆಯುವುದನ್ನು ಪ್ರಚಾರ ಮಾಡುವ ಗೋಜಿಗೆ ಹೋಗದೆ ಸುಮ್ಮನಿದ್ದಾರೆ.

ಪ್ರವಾಸೋದ್ಯಮಕ್ಕೆ ಚಿಮ್ಮುಹಲಗೆಯಾಗುವ ಇಂತಹ ಕಾರ್ಯಕ್ರಮದ ಬಗ್ಗೆ ದಿವ್ಯ ನಿರ್ಲಕ್ಷ ವಹಿಸುತ್ತಿರುವ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ಬಗ್ಗೆ ಸಾರ್ವಜನಿಕರು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಜೀವನದಲ್ಲಿ ಒಮ್ಮೆ ನೋಡಿ

ಭಾರತದ ಸ್ಕಾಟ್ಲೆಂಡ್ ಎಂದು ಹೇಳಿದ್ರೆ ಆ ಚುಮು ಚುಮು ಚಳಿ, ಮಂಜು ಮುಸುಕಿದ ವಾತಾವರಣ, ತಣ್ಣನೆ ಬೀಸುವ ಗಾಳಿ, ಹಸಿರು ಪ್ರಕೃತಿ, ಬೆಟ್ಟ -ಗುಡ್ಡಗಳು, ವೈವಿಧ್ಯಮಯ ಹೂವುಗಳು, ಖಗ ಮೃಗಗಳು ಎಲ್ಲವನ್ನೂ ತನ್ನೊಳಗೆ ಬಿಗಿದಪ್ಪಿಕೊಂಡಿರುವ ಭೂಲೋಕದ ಸ್ವರ್ಗ (Heaven of Earth) ಮಡಿಕೇರಿಯ ನೆನಪಾಗದೇ ಇರೋದಾದರೂ ಹೇಗೆ? ಕೂರ್ಗ್ ದಕ್ಷಿಣ ಕರ್ನಾಟಕದ (South Karnataka) ಒಂದು ಪ್ರಶಾಂತವಾದ, ಸಣ್ಣ ನಗರವಾಗಿದ್ದು, ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ. ಇದು ಮುಖ್ಯವಾಗಿ ತನ್ನ ಸುಂದರ ದೃಶ್ಯಗಳು, ವೈವಿಧ್ಯಮಯ ವನ್ಯಜೀವಿಗಳು, ವಿಶ್ವದರ್ಜೆಯ ಕಾಫಿ ಮತ್ತು ಕೊಡಗಿನ ಯೋಧರು, ಭಕ್ಷ್ಯ, ಸಂಸ್ಕೃತಿಗೆ (Culture) ಹೆಸರುವಾಸಿಯಾಗಿದೆ.  

ಇತ್ತೀಚಿನ ವರ್ಷಗಳಲ್ಲಿ, ಕೂರ್ಗ್ (Scotland of India) ಭಾರತದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ನೀವು ಈಗಾಗಲೇ ಕೂರ್ಗಿಗೆ ಭೇಟಿ ನೀಡದಿದ್ದರೆ, ಈ ಬಾರಿ ಭೇಟಿ ನೀಡಿ. ಯಾಕೆ ಕೂರ್ಗ್ ಗೆ ಭೇಟಿ ನೀಡಬೇಕು ಅನ್ನೋದಕ್ಕೆ ಇಲ್ಲಿದೆ ಕೆಲವು ರೀಸನ್ ಗಳು. ಯಾವುದು ಅದು ನೋಡೋಣ…

Follow Us:
Download App:
  • android
  • ios