Chitradurga: ಕಳೆದ ಒಂದು ತಿಂಗಳಿಂದ ಸಹ್ಯಾದ್ರಿ ಬಡಾವಣೆ ಜನರ ಗೋಳು ಕೇಳೋರಿಲ್ಲ!
ಪ್ರತಿದಿನ ಬೆಳಗಾದ್ರೆ ಸಾಕು ಆ ಏರಿಯಾದ ಜನರು ರಸ್ತೆ ಮೇಲೆ ಮೂಗು ಮುಚ್ಚಿಕೊಂಡೆ ಓಡಾಡಬೇಕು. ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಬಗೆಹರಿತಿಲ್ಲ ಆ ಬಡವಾಣೆಯ ಜನರ ಸಮಸ್ಯೆ. ಅಷ್ಟಕ್ಕೂ ಅಲ್ಲಿನ ಸಮಸ್ಯೆ ಆದ್ರು ಏನಪ್ಪ ಅಂತೀರಾ ಈ ಸ್ಟೋರಿ ನೋಡಿ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಮೇ.15): ಪ್ರತಿದಿನ ಬೆಳಗಾದ್ರೆ ಸಾಕು ಆ ಏರಿಯಾದ ಜನರು ರಸ್ತೆ ಮೇಲೆ ಮೂಗು ಮುಚ್ಚಿಕೊಂಡೆ ಓಡಾಡಬೇಕು. ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಬಗೆಹರಿತಿಲ್ಲ ಆ ಬಡವಾಣೆಯ ಜನರ ಸಮಸ್ಯೆ. ಅಷ್ಟಕ್ಕೂ ಅಲ್ಲಿನ ಸಮಸ್ಯೆ (Problem) ಆದ್ರು ಏನಪ್ಪ ಅಂತೀರಾ ಈ ಸ್ಟೋರಿ ನೋಡಿ. ಹೀಗೆ ಮನೆಯಿಂದ ಹೊರ ಬಂದ್ರೆ ಸಾಕು ಗಬ್ಬು ನಾತ ತಡೆಯಲಾರದೆ ಮೂಗು ಮುಚ್ಚಿಕೊಂಡೆ ರಸ್ತೆಯಲ್ಲಿ ಓಡಾಡ್ತಿರೋ ಜನರು. ಮತ್ತೊಂದೆಡೆ ರಸ್ತೆ ಮಧ್ಯದಲ್ಲೇ UGD ಗುಂಡಿ (Pit) ತೆಗೆದಿರೋದಕ್ಕೆ ಪರದಾಟ ಪಡ್ತಿರೋ ವಾಹನ ಸವಾರರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ (Chitradurga) ನಗರದ ಸಹ್ಯಾದ್ರಿ ಬಡಾವಣೆಯಲ್ಲಿ (Sahyadri Layout).
ಹೌದು! ಕಳೆದ ಒಂದು ತಿಂಗಳ ಹಿಂದೆ ಈ ಬಡಾವಣೆಯ ಜನರು ನಗರಸಭೆ ಮುಂಭಾಗ ಧರಣಿ ಕುಳಿತು ನಮ್ಮ ಏರಿಯಾದ ಸಮಸ್ಯೆ ಬಗೆಹರಿಸಿಕೊಡಿ ಎಂದು ಪಟ್ಟು ಹಿಡಿದಿದ್ರು. ಆದ ಕಾರಣ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ UGD ಸಮಸ್ಯೆ ಬಗೆಹರಿಸ್ತೀವಿ ಎಂದು ಹೇಳಿ ಗುಂಡಿ ತೆಗೆಸಿ 20 ದಿನಗಳು ಕಳೆದ್ರೂ ಅದರ ದುರಸ್ತಿ ಪಡಿಸಲು ಬರ್ತಿಲ್ಲ. ನಿತ್ಯ ನಮ್ಮ ಗೋಳು ಕೇಳೋರೆ ಯಾರೂ ಇಲ್ಲ ಎಂಬಂತಾಗಿದೆ. ಅಧಿಕಾರಿಗಳು ನಗರಸಭೆಯಲ್ಲಿ ಇದಾರೋ ಇಲ್ವೋ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ನಿತ್ಯ ಬೆಳಗಾದ್ರೆ ಸಾಕು ನಮ್ಮ ಏರಿಯಾದ ಜನರು ಮನೆಯಿಂದ ಹೊರಬರೋದಕ್ಕೆ ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Cyclone Asani ಬಿರುಗಾಳಿ ಮಳೆಗೆ ಮೆಕ್ಕೆಜೋಳ ನಾಶ, ಚಿತ್ರದುರ್ಗ ರೈತ ಕಂಗಾಲು
ಯಾಕಂದ್ರೆ UGD ಓಪನ್ ಆಗಿಯೇ ಇರೋದ್ರಿಂದ ಇಡೀ ಬಡಾವಣೆ ತುಂಬಾ ಗಬ್ಬು ನಾರುತ್ತಿದೆ. ತಕ್ಷಣವೇ ಅದನ್ನು ಸರಿಪಡಿಸಿ ಮುಚ್ಚಿ ಎಂದು ಎಷ್ಟೇ ಬಾರಿ ಅಧಿಕಾರಿಗಳಿಗೆ ಕೇಳಿಕೊಂಡ್ರು ನಿರ್ಲಕ್ಷ್ಯ ವಹಿಸ್ತಿರೋದು ಖಂಡನೀಯ. ಅದಲ್ಲದೇ ವಾಹನ ಸವಾರರು ನಿತ್ಯ ರಸ್ತೆಯಲ್ಲಿ ಓಡಾಟ ನಡೆಸೋದಕ್ಕೆ ಹರಸಾಹಸ ಪಡ್ತಿದ್ದಾರೆ. ನಿತ್ಯ ನಮ್ಮ ನರಳಾಟ ಕಂಡೂ ಜಾಣ ಕುರುಡು ಪ್ರದರ್ಶನ ಮಾಡ್ತಿರೋ ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕಿದರು. ಒಟ್ಟಾರೆ ಸಹ್ಯಾದ್ರಿ ಬಡಾವಣೆ ಒಂದೇ ಅಲ್ಲದೇ ನಗರದ ಅನೇಕ ಏರಿಯಾಗಳಲ್ಲಿ ಇಂತಹ ಸಮಸ್ಯೆಗಳು ಇದ್ರೂ ಕೂಡ ಅಧಿಕಾರಿಗಳು ನಿರ್ಲಕ್ಷ್ಯ ವಹಿಸ್ತಿರೋದು ವಿಷಾದನೀಯ. ಕೂಡಲೇ ನಗರಸಭೆ ಅಧಿಕಾರಿಗಳ ಈ ಸಮಸ್ಯೆಗೆ ಮುಕ್ತಿ ಕೊಡಿಸಬೇಕಿದೆ.
ಸಾಕಿದ ಕುರಿಯ ಹುಟ್ಟುಹಬ್ಬ ಆಚರಿಸಿದ ರೈತ: ತಾನೇ ಸಾಕಿದ ಕುರಿ ಮರಿಯ ಕೇಕ್ ಕತ್ತರಿಸಿ ಬರ್ತಡೆ ಆಚರಿಸಿದ ಕುರಿ ವ್ಯಾಪಾರಿ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ TB ಗೊಲ್ಲರಹಟ್ಟಿಯ ಕುರಿ ವ್ಯಾಪಾರಿ ಕೃಷ್ಣಮೂರ್ತಿ ಸುಮಾರು 15 ವರ್ಷಗಳಿಂದ ಕುರಿ ವ್ಯಾಪಾರ ಮಾಡಿಕೊಂಡು ಬರ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ವ್ಯಾಪಾರಕ್ಕೆಂದು ತಂದಿದ್ದ ಕುರಿಯೊಂದು ಮರಿ ಹಾಕಿದ ಕೇವಲ ಆರು ತಿಂಗಳಲ್ಲೇ ಅಸುನೀಗಿದ ಹಿನ್ನೆಲೆ ಬೇಸರಗೊಂಡ ಮಾಲೀಕ, ಆ ಕುರಿ ಮರಿಯನ್ನು ತನ್ನ ಸ್ವಂತ ಮಗುವಂತೆ ಸಾಕಿ ಸಲುಹಿದರು ಇದೇ ತಿಂಗಳು 2ನೇ ತಾರೀಕಿಗೆ ಆ ಕುರಿ ಮರಿ ಜನನವಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆ.
ಅಸಾನಿ ಎಫೆಕ್ಟ್, ಊಟಿಯಂತಾದ ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮ
ಆ ಕುರಿಯ ಬರ್ತಡೆಯನ್ನು ಅದ್ದೂರಿ ಸಂಭ್ರಮಾಚರಣೆ ಮಾಡುವ ಮೂಲಕ ಜನರಲ್ಲಿ ಅಚ್ಚರಿ ಮೂಡಿಸಿದರು. ಸುಮಾರು 5 ಕೆಜಿ ಕೇಕ್ ತಂದು ಮಾನವರು ಯಾವ ರೀತಿ ತಮ್ಮ ಬರ್ತಡೆ ಸೆಲೆಬ್ರೇಷನ್ ಮಾಡಿಕೊಳ್ತಾರೋ ಆ ರೀತಿಯಲ್ಲೇ ಕುರಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಿದನು. ಸಂಭ್ರಮಾಚರಣೆಗೆ ಆಗಮಿಸಿದ್ದ ಜನರು ಆ ಕುರಿ ಮರಿಗೆ ವಿಶ್ ಮಾಡುವ ಮೂಲಕ ಗಿಫ್ಟ್ ನೀಡಿದ್ದು ಅತ್ಯಂತ ವಿಶೇಷವಾದ ಸಂಗತಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಮೂಕ ಪ್ರಾಣಿಗಳನ್ನು ಸಾಕುವುದೇ ತುಂಬಾ ಕಡಿಮ ಆಗಿದೆ. ಅಂತದ್ರಲ್ಲಿ ಕುರಿ ವ್ಯಾಪಾರಿ ಕೃಷ್ಣಮೂರ್ತಿ ಮಾತ್ರ ತಾನೇ ಸಾಕಿದ ಕುರಿಯ ಬರ್ತಡೆ ಸೆಲೆಬ್ರೇಷನ್ ಮಾಡಿದ್ದು ವಿಶೇಷವೇ ಸರಿ.