ಚಿತ್ರದುರ್ಗ(ಆ.18): ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ನಾಯಕನಹಟ್ಟಿ ಪಟ್ಟಣದ ಮುಸ್ಲಿಂ ಸಮುದಾಯದ ಯುವಕರು 108 ಪ್ಯಾಕೆಟ್‌ ಅಕ್ಕಿ ಹಾಗೂ 40ಸಾವಿರ ನಗದು ಹಣ ಸಂಗ್ರಹಿಸಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಗೆ ಹಸ್ತಾಂತರಿಸಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ನೆರೆ ಹಾವಳಿಯಿಂದ ರಾಜ್ಯದ 17 ಜಿಲ್ಲೆಗಳಲ್ಲಿ 4ಲಕ್ಷ ಜನ ಗಂಜಿಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. 60 ಜನ ಸಾವನ್ನಪ್ಪಿದ್ದಾರೆ. ಸರ್ಕಾರದ ಜೊತೆಗೆ ಸಂಘಸಂಸ್ಥೆಗೆಳು ಸಾರ್ವಜನಿಕರು ನೆರವಿಗೆ ಕೈಜೋಡಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಎಲ್ಲರೂ ಪಕ್ಷಾತೀತವಾಗಿ ದೇಣಿಗೆ ರೂಪದಲ್ಲಿ ಶಾಸಕರ ಭವನಕ್ಕೆ ತಂದು ನೀಡಿದ್ದಾರೆ. ಅಕ್ಕಿ ಸೇರಿ ಅಗತ್ಯವಸ್ತುಗಳನ್ನು ನೆರೆಗೆ ತುತ್ತಾದ ಕುಟುಂಬಗಳಿಗೆ ತಲುಪಿಸಲಾಗುವುದು. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಗಂಜಿಕೇಂದ್ರಗಳಲ್ಲಿ ಆಶ್ರಯ ಪಡೆದ ಜನರಿಗೆ ಅಕ್ಕಿ ಸೇರಿ ನಿತ್ಯ ಬಳಕೆಯ ವಸ್ತುಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ ಎಂದರು.

ಜಾಮೀಯಾ ಮಸೀದಿ ಅಧ್ಯಕ್ಷ ಸೈಯದ್‌ಅನ್ವರ್‌ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ನೆರೆಹಾವಳಿಯಿಂದ ಲಕ್ಷಾಂತರ ಜನರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಅವರ ಬದುಕು ಮತ್ತು ಕಷ್ಟಗಳಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಚಳ್ಳಕೆರೆ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಅಬುಬಕ್ಕರ್‌ ಸಿದ್ಧಿಕ್‌ ಮಾತನಾಡಿ, ಪಟ್ಟಣದ ಯುವಕರು ಯಾವುದೇ ಜಾತಿ, ಬೇಧವಿಲ್ಲದೆ ನಿಧಿ ಸಂಗ್ರಹಿಸಿದ್ದಾರೆ. ನೆರೆ ಸಂತ್ರಸ್ತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದರು.

ಚಿತ್ರದುರ್ಗದಲ್ಲಿ ಟೆರರ್ ಅಲರ್ಟ್ : ಎಲ್ಲೆಡೆ ಪೊಲೀಸ್ ಹದ್ದಿನ ಕಣ್ಣು

ಮುಖಂಡ ಪಟೇಲ್‌ ಜಿ.ಎಂ.ತಿಪ್ಪೇಸ್ವಾಮಿ, ಮಸೀದಿಯ ಮುಫ್ತಿ ಸೋಹೈಬ್‌ ಮೌಲಾನಾ, ಮುಖಂಡರಾದ ಏಜಾಜ್‌ಬಾಷ, ಕೌಸರ್‌ಬಾಷ, ತನ್ಜೀಮ್‌ ಸಂಘದ ಅಧ್ಯಕ್ಷ ವಸಿಂ ಅಹಮ್ಮದ್‌, ಜಾಕೀರ್‌ಹುಸೈನ್‌, ಪ.ಪಂ.ಸದಸ್ಯ ಎನ್‌.ಐ.ಮಹಮ್ಮದ್‌ಮನ್ಸೂರ್‌, ಸೈಯದ್‌ಕೌಸರ್‌ ಉಪಸ್ಥತರಿದ್ದರು.