Chitradurga: 22ನೇ ಶತಮಾನದಲ್ಲಿ ಕಾಯಕ ಕ್ರಾಂತಿ ಆಗಬೇಕು: ಸಿಎಂ ಬೊಮ್ಮಾಯಿ
ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ
ಚಿತ್ರದುರ್ಗದಲ್ಲಿ ನಡೆದ ಮೇದಾರ ಸಮಾವೇಶದಲ್ಲಿ ಸಿಎಂ ಗುಡುಗು
ಸುಳ್ಳು ಹೇಳಿ ವಂಚಿಸಿದವರಿಗೆ ಅಧಿಕಾರ ಕೊಡದಂತೆ ಬೊಮ್ಮಾಯಿ ಮನವಿ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜ.07): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿರೋಧ ಪಕ್ಷಗಳ ವಿರುದ್ಧ ಸಮರ ಸಾರಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ರಾಜ್ಯದಲ್ಲಿ ಕುಲ ಕಸುಬು ಮಾಡುತ್ತಿರುವ ಸಮುದಾಯಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ, ಕಾಯಕ ಕ್ರಾಂತಿಯೊಂದಿಗೆ ಎಲ್ಲ ದುಡಿಯುವ ವರ್ಗಗಳನ್ನು ಅಭಿವೃದ್ದಿ ಮಾಡುವ ಸಂಕಲ್ಪ ಮಾಡಿದ್ದೇನೆ ಎಂದು ಮೇದಾರ ಸಮಾವೇಶದಲ್ಲಿ ಗುಡುಗಿದ್ದಾರೆ.
ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ಸೀಬಾರ ಗ್ರಾಮದ ಕೇತೇಶ್ವರ ಮಠದಲ್ಲಿ ನಡೆದ ಅಖಿಲಕರ್ನಾಟಕ ಮೇದಾರರ ಬುಡಕಟ್ಟು ಸಮಾವೇಶವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಿ ಮಾತನಾಡಿದರು. ಇದೇ ಪ್ರಥಮ ಬಾರಿಗೆ ಮೇದಾರ ಸಮುದಾಯದ ಬುಡಕಟ್ಟು ಸಮಾವೇಶವನ್ನು ಚಿತ್ರದುರ್ಗದಲ್ಲಿ ಆಯೋಜಿಸಿದ್ದೂ, ಹಲವು ದಶಕಗಳಿಂದ ಬಿದಿರನ್ನೇ ನಂಬಿಕೊಂಡು ಬದುಕು ಕಟ್ಟಿ ಕೊಂಡಿರುವ ಮೇದಾರ ಸಮುದಾಯಕ್ಕೆ ಸರ್ಕಾರದಿಂದ ಮೇದಾರ ಅಭಿವೃದ್ಧಿ ನಿಗಮ ಆರಂಭಿಸಬೇಕು. ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹಾಸ್ಟಲ್‌ಹಾಗು ಟ್ರಸ್ಟ್ ಗೆ ಜಮೀನು ಮಂಜೂರು ಮಾಡಬೇಕು. ಸಮಾಜದ ಕುಲಕಸುಬಿಗೆ ಅಗತ್ಯವಾದ ಬಿದಿರನ್ನು ಸರ್ಕಾರದಿಂದ ಪೂರೈಸುವಂತೆ ಸಮಾಜದ ಮುಖಂಡರು ಮನವಿ ಸಲ್ಲಿಸಿದರು.
ಸ್ಯಾಂಟ್ರೋ ರವಿ ಪ್ರಕರಣ: ವಿಪಕ್ಷಗಳಿಗೂ ಶಾಕ್ ನೀಡಿದ ಸಿಎಂ ಬೊಮ್ಮಾಯಿ
ಕೇಂದ್ರ ಸಚಿವರಿಂದಲೂ ಮನವಿ: ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ವೇದಿಕೆಯಲ್ಲಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಈ ಹಿಂದುಳಿದ ಬುಡಕಟ್ಟು ಸಮಾಜದ ಎಲ್ಲಾ ಮನವಿಯನ್ನು ಈಡೇರಿಸುವಂತೆ ಸಿಎಂ ಬಸವರಾಜ್ ಬೊಮ್ಮಯಿಗೆ ಮನವಿ ಮಾಡಿದರು. ಬುಡಕಟ್ಟು ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಅವರಿಗೆ ಮೇದಾರ ಸಮುದಾಯದ ಮುಖಂಡರು ಗೌರವ ಸಮರ್ಪಿಸಿದರು.
ಕಾಯಕ ಕ್ರಾಂತಿ ಆಗಬೇಕು: ಇದೇ ವೇಳೆ ನೆರೆದಿದ್ದ ಅಪಾರ ಜನಸ್ತೋಮ ವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕರ್ನಾಟಕ ರಾಜ್ಯದಲ್ಲಿ ಕಾಯಕ ಕ್ರಾಂತಿ ಆಗಬೇಕೆಂಬುದು ನಮ್ಮ ಆಸೆಯಾಗಿದೆ. 21ನೇ ಶತಮಾನದಲ್ಲಿ ಕನಸು ನನಸಾಗಿಸುವ ಕೆಲಸವಾಗಿದ್ದೂ, ಭೋವಿ, ಬಂಜಾರ, ಕುರುಬ ಸಮಾಜದ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಅಲ್ಲದೇ ರಾಜಕಾರಣದಲ್ಲಿ ಮತದಾರರೇ ಮಾಲೀಕರಾಗಿದ್ದೂ, ಸುಳ್ಳು ಹೇಳಿ ಇಷ್ಟು ವರ್ಷ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ, ನಿಮ್ಮ ಬಗ್ಗೆ ಕಳಕಳಿಯಿಂದ ಕೆಲಸ ಮಾಡುವವರಿಗೆ ಮತ ಹಾಕುವ ಮೂಲಕ ಮತದ ಗೌರವವನ್ನು ಹೆಚ್ಚಿಸುವಂತೆ ಮನವಿ ಮಾಡುತ್ತೇನೆ ಎಂದರು.
Karnataka Politics: ಶೀಘ್ರವೇ ರಾಜ್ಯ ಸಚಿವ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ ಘೋಷಣೆ
ಒಟ್ಟಾರೆ ಮೇದಾರ ಸಮಾವೇಶದುದ್ದಕ್ಕೂ ಸಿಎಂ ಚುನಾವಣೆಗೆ ಸಿದ್ಧವಾದಂತೆ ಮಾತನಾಡಿದರು. ಗೋಡಾ ಹೈ ಮೈದಾನ್ ಹೈ ನಾವು ಈಗಾಗಲೇ ತಯಾರಿದ್ದೇವೆ. ಚುನಾವಣೆ ವೇಳೆ ಒಂದು ತಿಂಗಳು ಮಾತ್ರ ರಾಜಕಾರಣ ಮಾಡಬೇಕಿದ್ದೂ, ಕಾಯಕ ಕ್ರಾಂತಿಗೆ ನಮ್ಮ ಸರ್ಕಾರ ಸಿದ್ಧವಿದೆ ಎಂದು ಹೇಳಿದ ಸಿಎಂ ವಿರೋಧ ಪಕ್ಷಗಳಲ್ಲಿ ಸಿಎಂ ನಡುಕ ಸೃಷ್ಟಿಸಿದರು.