ಸಿಬಾರ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ: ಮನೆಗಳು ಬಿರುಕು, ಆತಂಕದಲ್ಲಿ ಬದುಕು
* ಕಲ್ಲು ಕ್ವಾರಿಗಳ ಬ್ಲಾಸ್ಟ್ ಗೆ ಬೆಚ್ವಿ ಬೀಳ್ತಿರೋ ಸಿಬಾರ ಗ್ರಾಮದ ಜನರು.
* ನಿತ್ಯ ರಾತ್ರಿ ವೇಳೆ ಬ್ಲಾಸ್ಟ್ ಮಾಡೋದ್ರಿಂದ ಭಯ ಆಗ್ತಿದೆ ಅಂತಿರೋ ಜನರು.
* ಕಲ್ಲು ಗಣಿಗಾರಿಕೆ ಮಾಡ್ತಿರೋದ್ರಿಂದ ಬಿರುಕು ಬಿಡ್ತಿರೋ ಮನೆಗಳು.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಮೇ.16): ಆ ಭಾಗದ ಜನರು ಕಷ್ಟಪಟ್ಟು ಮನೆಗಳನ್ನ ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸ್ತಿದ್ದಾರೆ. ಆದ್ರೆ ರಾತ್ರೋರಾತ್ರಿ ಸುತ್ತಮುತ್ತಲಿರೋ ಕ್ರಷರ್ ಗಳು ಮಾಡ್ತಿರೋ ಹಾವಳಿಗೆ ನಿದ್ದೆಗೆಟ್ಟು ಭಯದಲ್ಲಿ ವಾಸ ಮಾಡ್ತಿದ್ದಾರೆ. ಅಷ್ಟಕ್ಕೂ ಆ ಗ್ರಾಮ ಯಾವುದು ಅಲ್ಲಾಗ್ತಿರೋ ಸಮಸ್ಯೆ ಆದ್ರು ಏನು ಎನ್ನುವುದರ ಕಂಪ್ಲೀಟ್ ಈ ಕೆಳಗಿನಂತಿದೆ ನೋಡಿ.
ಬಾನೆತ್ತರಕ್ಕೆ ನಿಂತಿರೋ ದೈತ್ಯಾಕಾರದ ಗುಡ್ಡವನ್ನು ಬಿಡದೇ ಮಹಾಶೂರರು ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಬ್ಲಾಸ್ಟ್ ಮಾಡಿರೋ ಸದ್ದಿಗೆ ಮನೆಗಳು ಬಿರುಕು ಬಿಟ್ಟಿವೆ. ಇದು ಕಲ್ಲಿನಕೋಟೆ ಚಿತ್ರದುರ್ಗದ ಕೂದಲೆಳೆ ಅಂತರದಲ್ಲಿರೋ ಸಿಬಾರ ಗ್ರಾಮದ ಬಳಿ.
ಈಗಾಗಲೇ ಬೇರೆ ಬೇರೆ ಜಿಲ್ಲೆಗಳ ಕಲ್ಲಿನ ಕ್ವಾರಿಗಳಲ್ಲಿ ಬ್ಲಾಸ್ಟ್ ಮಾಡುವ ಸಂದರ್ಭದಲ್ಲಿ ಅನೇಕ ಕಾರ್ಮಿಕರು ಮೃತ ಪಟ್ಟಿರೋ ಘಟನೆಗಳು ನಮ್ಮ ಕಣ್ಮುಂದಿದೆ. ಆದ್ರೂ ಚಿತ್ರದುರ್ಗ ಜಿಲ್ಲೆಯ ಅಧಿಕಾರಿಗಳು ಮಾತ್ರ ಜಿಲ್ಲೆಯಲ್ಲೇ ಅಕ್ರಮ ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ರು ಅಧಿಕಾರಿಗಳು ಮಾತ್ರ ಕುರುಡು ಪ್ರದರ್ಶನ ಮಾಡ್ತಿದ್ದಾರೆ.
BIG 3 Impact: 20 ವರ್ಷದ ಸಮಸ್ಯೆ 1 ವರ್ಷದಲ್ಲಿ ಕ್ಲೀಯರ್: ಚಿತ್ರದುರ್ಗದ ಮಲ್ಲಾಪುರ ಕೆರೆಗೆ ತಡೆಗೋಡೆ ನಿರ್ಮಾಣ
ನಿತ್ಯ ರಾತ್ರಿ ವೇಳೆ ಬ್ಲಾಸ್ಟ್ ಮಾಡೋದ್ರಿಂದ ಚಿಕ್ಕ ಮಕ್ಕಳು ಮಲಗಿದ್ದವರು ಭಯ ಪಡ್ತಿದ್ದಾರೆ. ಅಲ್ಲದೇ ಕಷ್ಟಪಟ್ಟು ದುಡಿದು ಕಟ್ಟಿರೋ ಮನೆಗಳು ಅಲ್ಲಲ್ಲಿ ಬಿರುಕು ಬಿಡ್ತಿದ್ದಾವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರೂ ಏನೂ ಪ್ರಯೋಜನ ಆಗ್ತಿಲ್ಲ ಎಂದ ಬೇಸರ ವ್ಯಕ್ತಪಡಿಸಿದರು ಸ್ಥಳೀಯರು.
ಇನ್ನೂ ಈ ಬಗ್ಗೆ ತಹಶಿಲ್ದಾರ್ ಅವರನ್ನೇ ಪ್ರಶ್ನೆ ಮಾಡಿದ್ರೆ, ಈಗಾಗಲೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸ್ತಿರೋ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ರಾತ್ರಿ ವೇಳೆ ಬ್ಲಾಸ್ಟ್ ಮಾಡುವುದು ಗಮನಕ್ಕೆ ಬಂದಿಲ್ಲ, ಅಲ್ಲದೇ ಮನೆಗಳು ಬಿರುಕು ಬಿಡ್ರಿರೋದ್ರ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ ಅಂತಹ ಕ್ರಷರ್ ಗಳಿಗೆ ಸೂಕ್ತ ನಿರ್ದೇಶನ ನೀಡಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳಲಾಗುವುದು ಎಂದು ಭರವಸೆ ಕೊಟ್ಟರು.
ಒಟ್ಟಾರೆಯಾಗಿ ಬೇರೆ ಜಿಲ್ಲೆಗಳಲ್ಲಿ ಆನಾಹುತ ಆದ ಮೇಲೆ ಜಿಲ್ಲೆಯ ಅಧಿಕಾರಿಗಳು ಸುಮ್ಮನೆ ಕುಳಿತಿರೋದು ಖಂಡನೀಯ. ಕೂಡಲೇ ಪರಿಶೀಲಿಸಿ ಅನಧಿಕೃತ ಕ್ರಷರ್ ಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಿ. ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮನೆಗಳಲ್ಲಿ ಆಗಿರೋ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಲಿ ಎಂಬುದು ಎಲ್ಲರ ಬಯಕೆ.....,