Chitradurga: ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಸಿಟಿ ಬಸ್ ಸೌಲಭ್ಯ ಆರಂಭ

 ಇಂದಿನಿಂದ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಸಿಟಿ ಬಸ್ ಸೌಲಭ್ಯ.  ದೀಪಾವಳಿ ಹಬ್ಬಕ್ಕೆ ಕೋಟೆನಾಡಿನ‌ ಪ್ರವಾಸಿಗರಿಗೆ ಗಿಫ್ಟ್ ಕೊಟ್ಟ  ಶಾಸಕ  ಜಿ.ಹೆಚ್ ತಿಪ್ಪಾರೆಡ್ಡಿ.

chitradurga Adumalleshwara Mini Zoo City bus facility started gow

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಅ.23): ಕೋಟೆನಾಡು ಚಿತ್ರದುರ್ಗದಲ್ಲಿಯೂ ಪ್ರವಾಸಿಗರು ಎಂಜಾಯ್ ಮಾಡೋದಕ್ಕೆ ಅನೇಕ ಪ್ರವಾಸಿ ತಾಣಗಳು ಸಿಗುತ್ತವೆ. ಆದ್ರೆ ಹೊರಗಿನಿಂದ ಬಂದಂತಹ ಪ್ರವಾಸಿಗರು ಅಲ್ಲಿಗೆ ಹೋಗಲು ವ್ಯವಸ್ಥೆ ಹೇಗೆ ಏನು ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಆದ್ರೆ ಇಂದು ಆ ಎಲ್ಲಾ ಪ್ರಶ್ನೆಗಳಿಗೆ ಚಿತ್ರದುರ್ಗ ಹಿರಿಯ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅವರು ಫುಲ್ ಸ್ಟಾಪ್ ಇಟ್ಟಿದ್ದಾರೆ. ಚಿತ್ರದುರ್ಗದ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಆಡುಮಲ್ಲೇಶ್ವರ ಕಿರು ಮೃಗಾಲಯ ಕೂಡ ಒಂದಾಗಿದೆ. ಅದ್ರಲ್ಲಂತೂ ಇತ್ತೀಚೆಗೆ ಅಲ್ಲಿ ಆಗ್ತಿರೋ ಅಭಿವೃದ್ಧಿ ಬೆಳವಣಿಗೆ ಕೆಲಸಗಳಂತೂ ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಆದುದರಿಂದ ದೀಪಾವಳಿ ಹಬ್ಬಕ್ಕೆ ಪ್ರವಾಸಿಗರಿಗೆ ಉಡುಗೊರೆಯಾಗಿ ಶಾಸಕ ತಿಪ್ಪಾರೆಡ್ಡಿ ಅವರು, ಸಿಟಿ ಬಸ್ ಸೌಲಭ್ಯ ವ್ಯವಸ್ಥೆಗೆ ಹಸಿರು ನಿಶಾನೆ ತೋರಿಸಿದರು. ಇಂದಿನಿಂದ ಪ್ರತೀ ಹಬ್ಬ, ಆಚರಣೆ ಸಮಯದಲ್ಲಿ ಹಾಗೂ ವಾರದ ಕೊನೆಯಲ್ಲಿ ಪ್ರವಾಸಿಗರು ಕಡಿಮೆ ದರದಲ್ಲಿ ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ವೀಕ್ಷಿಸಲು ತೆರಳಲು ಉತ್ತಮ ಅವಕಾಶ ಕಲ್ಪಿಸಿದರು. 

ಪ್ರತೀ ಬಾರಿಯೂ ಅನೇಕ ಪ್ರವಾಸಿಗರು ಹೊರಗಿನಿಂದ ಬಂದಾಗಲೆಲ್ಲಾ, ಆಡುಮಲ್ಲೇಶ್ವರ ಜೋಗಿಮಟ್ಟಿ ತೆರಳಲು ಸೂಕ್ತ ಬಸ್ ಸೌಲಭ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಇದನ್ನೆಲ್ಲಾ ಮನಗಂಡ ಶಾಸಕರು ಇಂದು ನಗರದ ಮದಕರಿ ಸರ್ಕಲ್ ನಲ್ಲಿ ಮದಕರಿ ಸರ್ಕಲ್ ಟು ಆಡುಮಲ್ಲೇಶ್ವರ ಸಿಟಿ ಬಸ್ ಗೆ ಅಧಿಕೃತ ಚಾಲನೆ ನೀಡಿದರು. ಯಾವ ಪ್ರವಾಸಿಗರಿಗೂ ಕೂಡ ಸಮಸ್ಯೆ ಆಗಬಾರದು ಎಂಬ ದೃಷ್ಟಿಯಿಂದ ಬಸ್ ಸೌಲಭ್ಯ ಕಲ್ಪಿಸಿದ್ದು ಖುಷಿಯ ವಿಚಾರ ಎಂದು ಸ್ಥಳೀಯ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದರು‌.

 

ಕಾಫಿನಾಡು ಚಿಕ್ಕಮಗಳೂರಿಗೆ 4 ತಿಂಗಳಲ್ಲಿ 69 ಸಾವಿರ ಪ್ರವಾಸಿ ವಾಹನ ಎಂಟ್ರಿ

ಇನ್ನೂ ಈ ಬಸ್ ಗೆ ಹಸಿರು ನಿಶಾನೆ ತೋರಿಸಿದ ಬಳಿಕ ಮಾತನಾಡಿದ ಶಾಸಕ ತಿಪ್ಪಾರೆಡ್ಡಿ ಅವರು, ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಅನೇಕ ರೀತಿಯ ಪ್ರಾಣಿ, ಪಕ್ಷಿಗಳು ಇವೆ. ಅವುಗಳನ್ನು ಕಣ್ತುಂಬಿಕೊಳ್ಳಲು ಅನೇಕ ಭಾಗಗಳಿಂದ ಪ್ರವಾಸಿಗರು ನಮ್ಮ ಜಿಲ್ಲೆಗೆ ಆಗಮಿಸ್ತಾರೆ. ಅದ್ರಲ್ಲಂತೂ ವೀಕೆಂಡ್ ಸಮಯದಲ್ಲಿ ಸಾವಿರಾರು ಪ್ರವಾಸಿಗರು ಆಡುಮಲ್ಲೇಶ್ವರ, ಜೋಗಿಮಟ್ಟಿ ವೀಕ್ಷಣೆ ಮಾಡಿ ಎಂಜಾಯ್ ಮಾಡಲು ಆಗಮಿಸ್ತಾರೆ.

ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರಿಗೆ ನಿರ್ಬಂಧ

ಆದ್ರೆ ಅದಕ್ಕೆ ಸೂಕ್ತ ಬಸ್ ಸೌಕರ್ಯ ಒದಗಿಸಿ ಕೊಡಿ ಎಂದು ಅನೇಕ ಪ್ರವಾಸಿಗರು ಮನವಿ ಸಲ್ಲಿಸಿದ್ರು. ಅದರ ತರುವಾಯ ಇಂದು ಸಿಟಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತೀ ವೀಕೆಂಡ್ ಸಮಯದಲ್ಲಿ ಪ್ರವಾಸಿಗರು ಇದರ ಸದುಪಯೋಗ ಪಡೆದುಕೊಂದು ಆಡುಮಲ್ಲೇಶ್ವರ ಕಿರು ಮೃಗಾಲಯ ವೀಕ್ಷಣೆಗೆ ತೆರಳಲಿ ಎಂದು ಆಶಿಸಿದರು.

Latest Videos
Follow Us:
Download App:
  • android
  • ios