Asianet Suvarna News Asianet Suvarna News

ಟಿವಿ ರಿಮೋಟ್‌ಗಾಗಿ ಮಕ್ಕಳ ಕಿತ್ತಾಟ ಬಿಡಿಸಲು, ಕತ್ತರಿ ಎಸೆದ ತಂದೆ: ಕುತ್ತಿಗೆಗೆ ಕತ್ತರಿ ಸಿಕ್ಕಿಕೊಂಡು ಮಗ ಸಾವು

ಟಿವಿ ರಿಮೋಟ್‌ಗಾಗಿ ಮಕ್ಕಳ ಕಿತ್ತಾಡುವುದನ್ನು ಬಿಡಿಸಲು ದೊಡ್ಡ ಮಗನ ಮೇಲೆ ತಂದೆ ಕತ್ತರಿ ಎಸೆದಿದ್ದು, ಕುತ್ತಿಗೆಗೆ ಕತ್ತರಿ ಸಿಲುಕಿ ಮಗ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

Children quarrel to TV remote son dies after Father throws scissors on Son sat
Author
First Published Oct 15, 2023, 12:53 PM IST

ಚಿತ್ರದುರ್ಗ (ಅ.15): ಮನೆಯಲ್ಲಿ ಟಿವಿ ರಿಮೋಟ್‌ಗಾಗಿ ಮನೆಯಲ್ಲಿ ಅಣ್ಣ-ತಮ್ಮಂದಿರಿಬ್ಬರು ಕಿತ್ತಾಟ ಆಡುವುದನ್ನು ಬಿಡಿಸಲು ಮುಂದಾದ ತಂದೆ, ತನ್ನ ದೊಡ್ಡ ಮಗನ ಕಡೆಗೆ ಕತ್ತರಿಯನ್ನು ಎಸೆದಿದ್ದಾನೆ. ಆದರೆ, ಕತ್ತರಿ ಸೀದಾ ಹೋಗಿ ಮಗನ ಕುತ್ತಿಗೆಗೆ ಸಿಲುಕಿದ್ದು, ಸ್ಥಳದಲ್ಲಿಯೇ ರಕ್ತಸ್ರಾವ ಉಂಟಾಗಿ ಮಗ ಸಾವನ್ನಪ್ಪಿದ್ದಾನೆ.

ಈ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದಿದೆ. ತಂದೆಯಿಂದಲೇ ಮಗನ‌ ಹತ್ಯೆಯಾಗಿದೆ. ಟಿವಿ ರಿಮೋಟ್ ಗಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ ಹಿನ್ನೆಲೆಯಲ್ಲಿ, ಸಿಟ್ಟಿಗೆದ್ದ ತಂದೆ ತನ್ನ ಹಿರಿಮಗನ ಮೇಲೆ ಕತ್ತರಿ‌ ಎಸೆದಿದ್ದಾರೆ. ಆದರೆ, ತಂದೆ ಎಸೆದ ಕತ್ತರಿಯು ಬಾಲಕನ ಕುತ್ತಿಗೆಗೆ ಸಿಲುಕಿ ಏಟು ಬಿದ್ದು ರಕ್ತಸ್ರಾವದಿಂದ ಸಾವು ಸಂಭವಿಸಿದೆ. ಚಂದ್ರಶೇಖರ್ (16) ಮೃತ ದುರ್ದೈವಿ ಬಾಲಕನಾಗಿದ್ದಾನೆ. ಮೃತ ಬಾಲಕ ಚಂದ್ರಶೇಖರ್‌ನೊಂದಿದೆ ಆತನ ತಮ್ಮ ಪವನ್ (14) ರಿಮೋಟ್ ಗಾಗಿ ಗಲಾಟೆ ಮಾಡಿಕೊಂಡಿದ್ದರು.

ಕರ್ನಾಟಕದಲ್ಲಿ ಕನ್ನಡ ಬಾರದವರ ಬಗ್ಗೆ ಸಮೀಕ್ಷೆ ಮಾಡಿ: ಮೈಸೂರು ದಸರಾ ಉದ್ಘಾಟಕ ಹಂಸಲೇಖ ಮನವಿ

ಇನ್ನು ಮನೆಯಲ್ಲಿ ಪದೇ ಪದೆ ಟಿವಿ ರಿಮೋಟ್‌ಗಾಗಿ ಮಕ್ಕಳು ಕಿತ್ತಾಡುವುದನ್ನು ನೋಡಿದ ತಂದೆಯು, ಇಂದು ಸಿಟ್ಟಿಗೆದ್ದು ಕತ್ತರಿ ಎಸೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಇನ್ನು ಬಟ್ಟೆ ಕತ್ತರಿಸುವ ಕತ್ತರಿಯು ಭಾರವಾಗಿದ್ದು, ಕುತ್ತಿಗೆ ಹಾಗೂ ಕಿವಿ ಭಾಗಕ್ಕೆ ಚುಚ್ಚಿಕೊಂಡು ತೀವ್ರ ಹಾನಿಯಾಗಿರುತ್ತದೆ. ಇದರಿಂದ ಕೆಳಗೆ ಬಿದ್ದ ಬಾಲಕ ರಕ್ತ ಸ್ರಾವದಿಂದ‌ ದುರ್ಮರಣಕ್ಕೀಡಾಗಿದ್ದಾನೆ. ತಂದೆ ಲಕ್ಷ್ಮಣಬಾಬು ವಿರುದ್ಧ ಪುತ್ರನ ಹತ್ಯೆ ಆರೋಪ ವ್ಯಕ್ತವಾಗಿದೆ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Follow Us:
Download App:
  • android
  • ios