ಮಗು ಬಿದ್ದ ತಕ್ಷಣ ಶಂಭು ಶೆಂಮಡಿ ಎಂಬವರು ಕೂಡಲೇ ಬಾವಿಗೆ ಇಳಿದು ಮಗುವನ್ನು ಮೇಲಕ್ಕೆತ್ತಿದ್ದರೂ ಅದಾಗಲೇ ಮಗು ಮೃತಪಟ್ಟಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪಿಎಸ್ಐ ರಾಜಕುಮಾರ

ಉತ್ತರಕನ್ನಡ(ಅ.04): ಆಕಸ್ಮಿಕವಾಗಿ ಬಾವಿಗೆ ಬಿದ್ದು ಪುಟ್ಟ ಮಗುವೊಂದು ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ‌ ಸಿ.ಪಿ. ಬಜಾರ್‌ನಲ್ಲಿ ಇಂದು(ಬುಧವಾರ) ನಡೆದಿದೆ. ಅನುಶ್ರೀ ರಾಜಶೇಖರ್ ನೂಲಾ ಶೆಟ್ಟರ್ (3) ಮೃತಪಟ್ಟ ದುರ್ದೈವಿ ಮಗು. 

ತಾಯಿ ಬಾವಿಯಿಂದ ನೀರು ತೆಗೆಯುತ್ತಿದ್ದ ಸಂದರ್ಭದಲ್ಲಿ ನಡೆದ ಈ ದುರ್ಘಟನೆ ಸಂಭವಿಸಿದೆ. 

ದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮೋದಿಯೇ ಬರಬೇಕಾಯಿತು: ಚಕ್ರವರ್ತಿ ಸೂಲಿಬೆಲೆ

ಮಗು ಬಿದ್ದ ತಕ್ಷಣ ಶಂಭು ಶೆಂಮಡಿ ಎಂಬವರು ಕೂಡಲೇ ಬಾವಿಗೆ ಇಳಿದು ಮಗುವನ್ನು ಮೇಲಕ್ಕೆತ್ತಿದ್ದರೂ ಅದಾಗಲೇ ಮಗು ಮೃತಪಟ್ಟಿತ್ತು. ಘಟನಾ ಸ್ಥಳಕ್ಕೆ ಪಿಎಸ್ಐ ರಾಜಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.