ದೇವಾಲಯದಲ್ಲಿ ಮದುವೆಯಾದ್ರೆ ವಧುವಿಗೆ ಸಿಗುತ್ತೆ 55 ಸಾವಿರ

ದೇವಾಲಯದಲ್ಲಿ ಸರಳ ಸಾಮೂಹಿಕ ವಿವಾಹ ನಡೆಯಲಿದ್ದು ಇಲ್ಲಿ ವಿವಾಹವಾದ ಜೋಡಿಗೆ ಸಿಗಲಿಗೆ 55 ಸಾವಿರ ರು. 

Chikkamagaluru Kalaseshwar Temple To be held Mass Marriage On April 26

ಚಿಕ್ಕಮಗಳೂರು (ಮಾ.06) : ಜಿಲ್ಲಾಡಳಿತ, ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಕಳಸದ ದಕ್ಷಿಣ ಕಾಶಿ ಶ್ರೀ ಕಲಶೇಶ್ವರ ದೇವಾಲಯದಲ್ಲಿ ಏ.26 ರಂದು ಸರಳ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದರು.

 ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಉಚಿತ ಸರಳ ಸಾಮೂಹಿಕ ವಿವಾಹ ಪ್ರಚಾರದ ‘’ಸಪ್ತಪದಿ ರಥ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರಳ ವಿವಾಹವಾಗುವ ವರನಿಗೆ 5000 ರು., ವಧುವಿಗೆ 10,000 ರು. ಹಾಗೂ ವಧುಗೆ ಚಿನ್ನದ ತಾಳಿ, 2 ಚಿನ್ನದ ಗುಂಡು ಒಟ್ಟು 55,000 ರು. ಗಳನ್ನು ದೇವಸ್ಥಾನದ ವತಿಯಿಂದ, ನೀಡಲಾಗುವುದು. ಜೊತೆಗೆ ಸಾಮೂಹಿಕ ಸರಳ ವಿವಾಹವಾಗುವ ವಧುವಿಗೆ ಕಂದಾಯ ಇಲಾಖೆಯಿಂದ ಆದರ್ಶ ವಿವಾಹ ಯೋಜನೆಯಡಿ 10,000 ರು. ನಿಶ್ಚಿತ ಠೇವಣಿ ಸೌಲಭ್ಯ, ವಿವಾಹವಾಗುವ ಪರಿಶಿಷ್ಟಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 50,000 ರು. ಗಳನ್ನು ನೀಡಲಾಗುವುದು ಎಂದರು.

‘ನನ್ನ ಮಗಳ ಮದುವೆಯಂತೆ 50 ಸಾವಿರ ಮದುವೆ ಮಾಡಿಸಿದ್ದೇನೆ’..

ಆಸಕ್ತ ವಧು-ವರರು ಮಾ.27 ರೊಳಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದರು.

ಬಡ ವಧುವಿಗೆ ವಿವಾಹ ವೇಳೆ ಸಿಗಲಿದೆ 3 ಲಕ್ಷ ರು....

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜೇಗೌಡ, ದರ್ಶನ್‌ ಹಾಜರಿದ್ದರು.

Latest Videos
Follow Us:
Download App:
  • android
  • ios