ಅಕ್ರಮ ಮದ್ಯ ಜಪ್ತಿ: ಕರ್ನಾಟಕದಲ್ಲಿ ಚಿಕ್ಕಮಗಳೂರಿಗೆ ಮೊದಲನೇ ಸ್ಥಾನ..!

1 ಕೋಟಿ 35ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಅಕ್ರಮ ಮದ್ಯ ಯಾರಿಗೆ ಸಂಬಂಧಿಸಿದ್ದು, ಮದ್ಯ ಎಲ್ಲಿಂದ ಸರಬರಾಜಾಗಿದೆ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮದ್ಯದ ಗುಣಮಟ್ಟ ಪರೀಕ್ಷಗೆ ಕಳಿಸಲಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ ಕೆ.ಎನ್. ರಮೇಶ್. 

Chikkamagaluru Got 1st Rank Karnataka For Confiscation of Illegal Liquor grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಮೇ.05):  ವಿಧಾನಸಭೆ ಚುನಾವಣೆ ರಾಜ್ಯದಲ್ಲಿ ಅತೀ ಹೆಚ್ಚು ಅಕ್ರಮ ಮದ್ಯ ವಶಕ್ಕೆ ಪಡೆಯುವ ಮೂಲಕ ಚಿಕ್ಕಮಗಳೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ ಅಂತ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದ್ದಾರೆ. 
ನಿನ್ನೆ(ಗುರುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, 1 ಕೋಟಿ 35ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಅಕ್ರಮ ಮದ್ಯ ಯಾರಿಗೆ ಸಂಬಂಧಿಸಿದ್ದು, ಮದ್ಯ ಎಲ್ಲಿಂದ ಸರಬರಾಜಾಗಿದೆ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮದ್ಯದ ಗುಣಮಟ್ಟ ಪರೀಕ್ಷಗೆ ಕಳಿಸಲಾಗಿದೆ ಎಂದು ತಿಳಿಸಿದರು. 

ಅಕ್ರಮ ಮದ್ಯ ಸಂಗ್ರಹಿಸಿದ ಸ್ಥಳದ ಮಾಲೀಕರು ಸೇರಿದಂತೆ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಲಾಗಿದ್ದು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಯಾವುದೇ ವ್ಯಕ್ತಿ ಅಥವಾ ಯಾವುದೇ ಪಕ್ಷವಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸೋಲಿಲ್ಲದ ಸರದಾರ ಸಿ.ಟಿ.ರವಿಗೆ ಕಮಲದ ಗರಡಿಯಲ್ಲಿ ಪಳಗಿದ ತಮ್ಮಯ್ಯ ಟಕ್ಕರ್‌

ಜಿಲ್ಲೆಯಲ್ಲಿ ನಗದು ಸೇರಿದಂತೆ ಒಟ್ಟು 37.4ಕೋಟಿ ರೂ.ಮೌಲ್ಯ ವಸ್ತು ವಶಕ್ಕೆ 

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2ಕೋಟಿ 59 ಲಕ್ಷ ರೂ. ವಿವಿಧ ತಪಾಸಣೆ ಕೇಂದ್ರಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಚಿನ್ನಾಭರಣ ಮತ್ತು ಬೆಳ್ಳಿಗೆ ಸಂಬಂಧಿಸಿದಂತೆ 32ಕೋಟಿ 38ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯ ಲಾಗಿದೆ. 3ಕೋಟಿ ರೂ. ಮೌಲ್ಯದ ಅಕ್ರಮ ರಸಗೊಬ್ಬರ ದಾಸ್ತಾನು, 66ಲಕ್ಷ ರೂ.ಮೌಲ್ಯದ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದ ಅವರು, ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಇದುವರೆಗೂ ಒಟ್ಟು 37.4ಕೋಟಿ ರೂ. ವಸ್ತುಗಳನ್ನು ನಗದು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಚಿಕ್ಕಮಗಳೂರು: ಆಡಿ ಕಾರು-ಬೈಕ್‌ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಓರ್ವ ಸಾವು

ಅಕ್ರಮ ಮದ್ಯದ ಬಗ್ಗೆ ತನಿಖೆ: ಎಸ್ಪಿ ಉಮಾ ಪ್ರಶಾಂತ್

ಜಿಲ್ಲೆಯಲ್ಲಿ ಅಕ್ರಮವಾಗಿ ಪತ್ತೆ ಆಗಿರುವ  ಮದ್ಯದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಎಸ್ ಪಿ ಉಮಾ ಪ್ರಶಾಂತ್ ತಿಳಿಸಿದರು. ಜಿಲ್ಲೆಯಲ್ಲಿ ಚಿನ್ನಾಭರಣ ಸೇರಿ 36 ಕೋಟಿ ಮೌಲ್ಯದ ಅಕ್ರಮ ವಸ್ತುಗಳು, ಮಧ್ಯ, ಹಣ ಜಪ್ತಿ ಮಾಡಲಾಗಿದ್ದು 896 ರೌಡಿಶೀಟರ್‌ಗಳನ್ನು ಗುರುತಿಸಿದ್ದು, 10 ಜನರನ್ನು ಗಡಿಪಾರು ಮಾಡಲಾಗಿದೆ. ಅಕ್ರಮ ಮದ್ಯ ದಾಸ್ತಾನು ಸಂಬಂಧ 8 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಅಂಥೋನಿ ರಾಜು, ಮನು, ಶ್ರೀನಿವಾಸ್, ಯತೀಶ್, ಮಂಜುನಾಥ್ ಎಂಬುವರನ್ನು ಬಂಧಿಸಲಾ ಗಿದೆ. ಉಳಿದಂತೆ ಕೆಲವರು ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಮೂರು ತಂಡಗಳನ್ನು ಡಿವೈಎಸ್‍ಪಿ ನೇತೃತ್ವ ದಲ್ಲಿ ರಚಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಿಸಿದ್ದರೂ ಸಹ ಈ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಸೂಕ್ತ ಬಂದೋಬಸ್ತ್ ನಿಯೋಜಿಸಲಾಗಿದೆ. ಮತದಾನ ದಿನ ಮತಗಟ್ಟೆ ಸುತ್ತಮುತ್ತ 144 ಸೆಕ್ಷನ್ ಹಾಗೂ ಡ್ರೈ ಡೇ ವಿಧಿಸ ಲಾಗಿದೆ. 22 ಚೆಕ್‍ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದರು. 

Latest Videos
Follow Us:
Download App:
  • android
  • ios